AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Murder: ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಕೊಂದ 17 ವರ್ಷದ ಮಗಳು!

ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ನನ್ನ ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದು ಆ ಬಾಲಕಿ ಹೇಳಿದ್ದಳು. ಆದರೆ, ಪೊಲೀಸರು ಅದನ್ನು ನಂಬಲಿಲ್ಲ.

Murder: ಹುಡುಗರ ಜೊತೆ ಸುತ್ತಾಡಿದ್ದಕ್ಕೆ ಬೈದ ಅಮ್ಮನನ್ನೇ ಕೊಂದ 17 ವರ್ಷದ ಮಗಳು!
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Mar 28, 2022 | 6:53 PM

ಚೆನ್ನೈ: ಅಕ್ಕಪಕ್ಕದ ಮನೆಯ ಹುಡುಗರ ಜೊತೆ ಓಡಾಡುತ್ತಿದ್ದುದಕ್ಕೆ ಸದಾ ಬೈಯುತ್ತಿದ್ದ ತಾಯಿಯನ್ನು ಕೊಲೆ ಮಾಡಿದ 17 ವರ್ಷದ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ (Tamil Nadu) ತೂತುಕುಡಿಯಲ್ಲಿ 17 ವರ್ಷದ ಬಾಲಕಿ ತನ್ನ ಇಬ್ಬರು ಬಾಯ್​ಫ್ರೆಂಡ್​​ಗಳ ಸಹಾಯದಿಂದ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ. ಈ ಘಟನೆ ಬಹಳ ಸಂಚಲನ ಸೃಷ್ಟಿಸಿದೆ. ತನ್ನ ನೆರೆಹೊರೆಯ ಕೆಲವು ಯುವಕರೊಂದಿಗೆ ತಿರುಗಾಡುತ್ತಿದ್ದ ಮಗಳಿಗೆ ಅಮ್ಮ ಬುದ್ಧಿ ಹೇಳಿದ್ದಕ್ಕೆ ಆಕೆ ತನ್ನ ತಾಯಿಯ ಮೇಲೆ ಕೋಪಗೊಂಡಿದ್ದಳು. ಇದೇ ಕಾರಣಕ್ಕೆ ಅಮ್ಮ-ಮಗಳ ನಡುವೆ ಆಗಾಗ ಜಗಳವಾಗುತ್ತಿತ್ತು. ಇದೇ ಕಾರಣಕ್ಕೆ ಆಕೆ ತನ್ನ ತಾಯಿಯನ್ನು ಕೊಂದಿದ್ದಾಳೆ (Murder) ಎನ್ನಲಾಗಿದೆ.

ಭಾನುವಾರ ಮುಂಜಾನೆ ಪೊಲೀಸರಿಗೆ ವನ್ನಾರ್ ಪ್ರದೇಶದಲ್ಲಿ ಈ ಕೊಲೆಯ ಬಗ್ಗೆ ಫೋನ್ ಕರೆ ಬಂದಿತ್ತು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಮುನಿಯಲಕ್ಷ್ಮಿ ಎಂಬ ಮಹಿಳೆ ತಮ್ಮ ಮನೆಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿದ್ದರು. ಆಕೆಯ 17 ವರ್ಷದ ಮಗಳು ಮೃತದೇಹದ ಪಕ್ಕದಲ್ಲಿ ಕುಳಿತಿದ್ದಳು ಎನ್ನಲಾಗಿದೆ.

ಈ ಕುರಿತು ವಿಚಾರಿಸಿದಾಗ ಇಬ್ಬರು ವ್ಯಕ್ತಿಗಳು ಮನೆಗೆ ನುಗ್ಗಿ ನನ್ನ ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದು ಆ ಬಾಲಕಿ ಹೇಳಿದ್ದಳು. ಆದರೆ, ಪೊಲೀಸರು ಅದನ್ನು ನಂಬಲಿಲ್ಲ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಇಬ್ಬರು ಬಾಯ್​ಫ್ರೆಂಡ್​ಗಳ ಸಹಾಯದಿಂದ ಹುಡುಗಿ ತನ್ನ ತಾಯಿಯನ್ನು ಕೊಂದಿದ್ದಾಳೆ ಎಂದು ತಿಳಿದುಬಂದಿದೆ.

ಗಂಡನೊಂದಿಗೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಮುನಿಯಲಕ್ಷ್ಮಿ ಒಂಟಿಯಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. 17 ವರ್ಷದ ಬಾಲಕಿ, ಆಕೆಯ ತಂಗಿ ಮತ್ತು ತಮ್ಮ ಅಪ್ಪನೊಂದಿಗೆ ವಾಸಿಸುತ್ತಿದ್ದರು. ತನ್ನ ಏರಿಯಾದ ಕೆಲವು ಹುಡುಗರ ಜೊತೆ ಮಾತನಾಡಿಕೊಂಡು, ಓಡಾಡುತ್ತಾ ಇದ್ದುದಕ್ಕೆ ಮುನಿಯಲಕ್ಷ್ಮಿ ತ್ನ ಮಗಳನ್ನು ಬೈಯುತ್ತಿದ್ದಳು ಮತ್ತು ಅವಳನ್ನು ಹೊಡೆಯುತ್ತಿದ್ದಳು. ಇದೇ ಕಾರಣಕ್ಕೆ ತನ್ನ ಏರಿಯಾದ ಇಬ್ಬರು ಹುಡುಗರ ಸಹಾಯದಿಂದ ಆಕೆ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ.

ಕೊಲೆಯಲ್ಲಿ ಬಂಧಿತರಾದ ಇಬ್ಬರು ಆರೋಪಿಗಳು ಆ ಬಾಲಕಿ ತಮಗೆ ಕರೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೂವರು ವಿರುದ್ಧವೂ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Murder: ಕುಡಿದು ಅಮ್ಮನಿಗೆ ಹೊಡೆದು ಹಿಂಸಿಸುತ್ತಿದ್ದ ಅಪ್ಪನನ್ನೇ ಕೊಲೆ ಮಾಡಿದ ಮಗ

Murder: ಮಗಳನ್ನೇ ಕೊಂದು ಆಕೆಯ ಶವದ ಮೇಲೆ ಅತ್ಯಾಚಾರ ನಡೆಸಿದ ಅಪ್ಪ!