AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Murder: ಕುಡಿದು ಅಮ್ಮನಿಗೆ ಹೊಡೆದು ಹಿಂಸಿಸುತ್ತಿದ್ದ ಅಪ್ಪನನ್ನೇ ಕೊಲೆ ಮಾಡಿದ ಮಗ

ಯುವಕ ತನ್ನ ತಾಯಿಯ ಮೇಲೆ ತನ್ನ ತಂದೆ ನಡೆಸುತ್ತಿದ್ದ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದನು. ಆದರೆ ಅವನ ತಂದೆ ಅವನನ್ನು ದೂರ ತಳ್ಳಿ ತನ್ನ ಹೆಂಡತಿಗೆ ಥಳಿಸಲು ಮುಂದಾದನು. ಇದರಿಂದ ಆ ಯುವಕ ಸುತ್ತಿಗೆಯನ್ನು ತೆಗೆದುಕೊಂಡು ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ.

Murder: ಕುಡಿದು ಅಮ್ಮನಿಗೆ ಹೊಡೆದು ಹಿಂಸಿಸುತ್ತಿದ್ದ ಅಪ್ಪನನ್ನೇ ಕೊಲೆ ಮಾಡಿದ ಮಗ
ಪ್ರಾತಿನಿಧಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Mar 25, 2022 | 5:56 PM

Share

ಮುಂಬೈ: ಮನೆಗೆ ಕುಡಿದು ಬಂದು, ದಿನವೂ ಅಮ್ಮನಿಗೆ ಹೊಡೆಯುತ್ತಿದ್ದ ಅಪ್ಪನನ್ನು ಮಗನೇ ಕೊಲೆ (Murder) ಮಾಡಿರುವ ಘಟನೆ ಮುಂಬೈನ ಚಾವ್ಲ್​ನಲ್ಲಿ ನಡೆದಿದೆ. ಇಲ್ಲಿನ 46 ವರ್ಷದ ವ್ಯಕ್ತಿಯೊಬ್ಬರನ್ನು ಅವರ 16 ವರ್ಷದ ಮಗ ಕೊಲೆ ಮಾಡಿದ್ದಾನೆ. ಬುಧವಾರ ಕುಡಿದ ಅಮಲಿನಲ್ಲಿ ತನ್ನ ತಾಯಿಯ ಮೇಲೆ ಅಪ್ಪ ಹಲ್ಲೆ ನಡೆಸುತ್ತಿರುವುದನ್ನು ಕಂಡ ಯುವಕ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ದೂರು ನೀಡಿರುವ 45 ವರ್ಷದ ಮಹಿಳೆ, ಹಲವಾರು ವರ್ಷಗಳಿಂದ ನನ್ನ ಗಂಡ ನಮ್ಮ ಇಬ್ಬರು ಗಂಡು ಮಕ್ಕಳ ಮುಂದೆ ಪದೇಪದೇ ನನಗೆ ಹೊಡೆದು, ಕಿರುಕುಳವನ್ನು ನೀಡುತ್ತಿದ್ದರು. ಇದನ್ನು ಕಂಡು ಬೇಸತ್ತಿದ್ದ ಮಗ ಬುಧವಾರ ನನ್ನ ಗಂಡನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಈ ಘಟನೆ ಬುಧವಾರ ರಾತ್ರಿ 8.30ರ ಸುಮಾರಿಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 16 ವರ್ಷದ ಯುವಕ ತನ್ನ ಬಾಡಿಗೆ ಮನೆಯಲ್ಲಿ ರಾತ್ರಿ ಊಟಕ್ಕೆ ಕುಳಿತಿದ್ದಾಗ ತನ್ನ ತಾಯಿಯ ಮೇಲೆ ತನ್ನ ತಂದೆ ಹಲ್ಲೆ ನಡೆಸುತ್ತಿರುವುದನ್ನು ನೋಡಿ ಕೋಪಗೊಂಡಿದ್ದ. ಅಪ್ಪನನ್ನು ತಡೆಯಲು ಎಷ್ಟೇ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಆತನ ತಾಯಿಯ ತಲೆಯನ್ನು ಗೋಡೆಗೆ ಚಚ್ಚುತ್ತಿದ್ದ ಅಪ್ಪನನ್ನು ಕಂಡು ಹತಾಶನಾದ ಆತ ಸುತ್ತಿಗೆಯಿಂದ ಅಪ್ಪನ ತಲೆಗೆ ಹೊಡೆದು ಅಮ್ಮನನ್ನು ರಕ್ಷಿಸಿದ್ದಾರೆ. ಆದರೆ, ಆ ಏಟಿಗೆ ಆತನ ತಂದೆ ಪ್ರಾಣ ಬಿಟ್ಟಿದ್ದಾರೆ.

ಎಫ್‌ಐಆರ್‌ನ ಪ್ರಕಾರ, ಯುವಕ ತನ್ನ ತಾಯಿಯ ಮೇಲೆ ತನ್ನ ತಂದೆ ನಡೆಸುತ್ತಿದ್ದ ಹಲ್ಲೆಯನ್ನು ತಡೆಯಲು ಪ್ರಯತ್ನಿಸಿದನು. ಆದರೆ ಅವನ ತಂದೆ ಅವನನ್ನು ದೂರ ತಳ್ಳಿ ತನ್ನ ಹೆಂಡತಿಗೆ ಥಳಿಸಲು ಮುಂದಾದನು. ಇದರಿಂದ ಆ ಯುವಕ ಸುತ್ತಿಗೆಯನ್ನು ತೆಗೆದುಕೊಂಡು ತನ್ನ ತಂದೆಯ ತಲೆಗೆ ಹೊಡೆದಿದ್ದಾನೆ. ಕೆಳಗೆ ಬಿದ್ದ ಆ ವ್ಯಕ್ತಿ ನೆಲದ ಮೇಲೆ ಬಿದ್ದು ಚಾಕುವನ್ನು ತೆಗೆದುಕೊಂಡು ಮಗ ಮತ್ತು ಹೆಂಡತಿಗೆ ಚುಚ್ಚಲು ಪ್ರಯತ್ನಿಸಿದನು. ಆದರೆ, ಆತನ ಮಗ ಆ ಸಮಯದಲ್ಲಿ ತನ್ನ ತಂದೆಯ ಕೈಯಿಂದ ಚಾಕುವನ್ನು ಕಸಿದುಕೊಂಡು ಅಪ್ಪನ ಕುತ್ತಿಗೆಗೆ ಇರಿದಿದ್ದಾನೆ. ಇದನ್ನು ನೋಡಿದ ತಾಯಿ ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ.

ಈ ಕುರಿತು ಆ ಮಹಿಳೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನನ್ನ ಮೇಲೆ ಹಲ್ಲೆ ನಡೆಸಿದ್ದ ನನ್ನ ಪತಿಯಿಂದ ನನ್ನ ಮಗ ನನ್ನನ್ನು ಕಾಪಾಡಿದ. ಆದರೆ, ನಾನು ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನನ್ನ ಗಂಡ ರೂಮಿನ ನೆಲೆದ ಮೇಲೆ ರಕ್ತದೋಕುಳಿಯಲ್ಲಿ ಬಿದ್ದಿದ್ದ. ಇದರಿಂದ ಆಘಾತಗೊಂಡ ನಾನು ಮತ್ತು ನನ್ನ ಮಗ ಏನು ಮಾಡಬೇಕೆಂದು ದಿಕ್ಕು ತೋಚದೆ ಕುಳಿತಿದ್ದೆವು. ನಂತರ, ನನ್ನ ದೊಡ್ಡ ಮಗ ಪೊಲೀಸರಿಗೆ ವಿಷಯ ತಿಳಿಸಿ, ನನ್ನ ಎರಡನೇ ಮಗನನ್ನು ಪೊಲೀಸರಿಗೆ ಒಪ್ಪಿಸಿದನು ಎಂದು ಮಹಿಳೆ ತಿಳಿಸಿದ್ದಾರೆ.

1997ರಲ್ಲಿ ಅವರಿಬ್ಬರಿಗೂ ಮದುವೆಯಾಗಿತ್ತು. ಆದರೆ, ಆತ ವಿಪರೀತ ಕುಡಿಯುತ್ತಿದ್ದ. ಕುಡಿದು ಮನೆಗೆ ಬಂದು ಹೆಂಡತಿ, ಮಕ್ಕಳಿಗೆ ಹೊಡೆಯುತ್ತಿದ್ದ. ಅವರ ಬಳಿಯಿದ್ದ ಹಣವನ್ನೆಲ್ಲ ತೆಗೆದುಕೊಂಡು ಹೋಗುತ್ತಿದ್ದ. ಅಲ್ಲದೆ, ತನ್ನ ಹೆಂಡತಿಯ ಶೀಲದ ಬಗ್ಗೆ ಅನುಮಾನ ಹೊಂದಿದ್ದ ಆತ ಆಕೆಗೆ ಹಿಂಸೆ ನೀಡುತ್ತಿದ್ದ. ಇದು ಮಕ್ಕಳನ್ನು ಕೆರಳಿಸಿತ್ತು.

ಇದನ್ನೂ ಓದಿ: ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಹೆಚ್​ಆರ್​ ಕೊಲೆಗೆ ಯತ್ನ; ಆರೋಪಿ ಮತ್ತು ಆತನ ಗ್ಯಾಂಗ್​ ಅರೆಸ್ಟ್

ವಿಚ್ಛೇದನ ಕೋರಿದ್ದ ಹೆಂಡತಿಯನ್ನು ಜನಜಂಗುಳಿಯ ಮಧ್ಯೆಯೇ ಹತ್ಯೆ ಮಾಡಿದ ಪತಿ ಮಂಜೂರ್

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!