ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಹೆಚ್​ಆರ್​ ಕೊಲೆಗೆ ಯತ್ನ; ಆರೋಪಿ ಮತ್ತು ಆತನ ಗ್ಯಾಂಗ್​ ಅರೆಸ್ಟ್

ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವಂತಹ ಘಟನೆ ನಡೆದಿದೆ. ಸಂಜಯ ಜಯಶಿಂಗ ಚೌಗಲೆ(58) ಮೃತ ವ್ಯಕ್ತಿ. ಮಹಾರಾಷ್ಟ್ರದ ಮುರಗೋಡದಿಂದ ಸವದತ್ತಿ ಯಲ್ಲಮ್ಮನ ದರ್ಶನಕ್ಕೆಂದು ಕುಟುಂಬ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಕೆಲಸದಿಂದ ತೆಗೆದು ಹಾಕಿದ ಕೋಪಕ್ಕೆ ಹೆಚ್​ಆರ್​ ಕೊಲೆಗೆ ಯತ್ನ; ಆರೋಪಿ ಮತ್ತು ಆತನ ಗ್ಯಾಂಗ್​ ಅರೆಸ್ಟ್
ಮಧು ಮತ್ತು ಆತನ ಗ್ಯಾಂಗ್.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Mar 25, 2022 | 1:55 PM

ಬೆಂಗಳೂರು: ಕೆಲಸದಿಂದ ತೆಗೆದುಹಾಕಿದ ಕೋಪಕ್ಕೆ ಹೆಚ್‌ಆರ್ ಕೊಲೆಗೆ (Attempte to Murder) ಮುಂದಾಗಿದ್ದ ಆರೋಪಿ ಹಾಗೂ ಆತನ ಗ್ಯಾಂಗ್​ನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಧು, ಅಲೆಗ್ಸಾಂಡರ್, ಚಿನ್ನರಾಜು, ಇಮ್ರಾನ್ ಪಾಷಾ ಬಂಧಿತ ಆರೋಪಿಗಳು. ಇದೇ ತಿಂಗಳು ಎಂಟನೆ ತಾರೀಖು ರಾಜಶೇಖರ್​ನ್ನ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳು, ಸಾಸ್ ಮೋಸ್ ಹೆಚ್. ಇ. ಟಿ ಟೆಕ್ನಾಲಜೀಸ್ ಎಂಬ ರಕ್ಷಣಾ ಸಾಮಾಗ್ರಿ ತಯಾರಿಕಾ ಕಂಪನಿಯಲ್ಲಿ  ರಾಜಶೇಖರ್ ಎಚ್​.ಆರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ಕಂಪನಿಯ ವೈಟ್ ಫೀಲ್ಡ್ ವಿಭಾಗದಲ್ಲಿ ಮಧು ಕೆಲಸ ಮಾಡುತ್ತಿದ್ದ.  ಆದರೆ ಕಂಪನಿಯ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ ಮಧುನನ್ನ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದೇ ಕಾರಣಕ್ಕೆ ಸ್ನೇಹಿತರೊಟ್ಟಿಗೆ ಸೇರಿ ರಾಜಶೇಖರ್ ಕೊಲೆ ಮಾಡಲು ಯತ್ನಿಸಲಾಗಿದೆ. ಕಾರು ಅಡ್ಡಗಟ್ಟಿ ಕೊಲೆ ಮಾಡಲು ಆರೋಪಿಗಳು ಯತ್ನಿಸಿದ್ದು, ಆದರೆ ಚಾಲಕನ ಜಾಗೃತೆಯಿಂದ ತಪ್ಪಿಸಿಕೊಂಡು ರಾಜಶೇಖರ್ ನೇರವಾಗಿ ಬಾಗಲೂರು ಠಾಣೆ ತಲುಪಿದ್ದಾರೆ. ನಂತರ ರಾಜಶೇಖರ್ ಮನೆ ಬಳಿಯು ಆರೋಪಿಗಳು ಕಾಯುತಿದ್ದು, ಆದರೆ ಅಷ್ಟರಲ್ಲಿ ರಾಜಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ: ಅರಿಶಿನಕುಂಟೆಯ ಶಾಂತಿನಗರದಲ್ಲಿ ನಾಗೇಶ್ ಎಂಬುವವರ ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನವಾಗಿರುವಂತಹ ಘಟನೆ ನಡೆದಿದೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ:

ಚಿಕ್ಕೋಡಿ: ಹುಕ್ಕೇರಿ ಪಟ್ಟಣದ ಹೊರವಲಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವಂತಹ ಘಟನೆ ನಡೆದಿದೆ. ಸಂಜಯ ಜಯಶಿಂಗ ಚೌಗಲೆ(58) ಮೃತ ವ್ಯಕ್ತಿ. ಮಹಾರಾಷ್ಟ್ರದ ಮುರಗೋಡದಿಂದ ಸವದತ್ತಿ ಯಲ್ಲಮ್ಮನ ದರ್ಶನಕ್ಕೆಂದು ಕುಟುಂಬ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಅನಿಲ್ ಗುಜರ್, ಶೀಲಾ ಚೌಗಲೆ, ನೀಲಾಂಬರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಸಿಬಿ ಪೊಲೀಸರಿಂದ ನಾಲ್ವರು ದರೋಡೆಕೋರರ ಬಂಧನ:

ನೆಲಮಂಗಲ: ಬೆಂಗಳೂರು ಸಿಸಿಬಿ ಪೊಲೀಸರಿಂದ ನಾಲ್ವರು ದರೋಡೆಕೋರರ ಬಂಧನ ಮಾಡಲಾಗಿದೆ. ಹೆಸರಘಟ್ಟದಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ವೇಳೆ ತಿಮ್ಮನಗೌಡ, ಹರೀಶ್, ಮೂರ್ತಿ, ರಾಜು ಬಲೆಗೆ ಬಿದಿದ್ದಾರೆ. ಬಂಧಿತರಿಂದ ಮಚ್ಚು, ಡ್ಯಾಗರ್​, ದೊಣ್ಣೆ, ಖಾರದ ಪುಡಿ ಜಪ್ತಿ ಮಾಡಲಾಗಿದೆ. ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸ್ ಇನ್ಸ್ ಪೆಕ್ಟರ್ ಧರ್ಮೇಂದ್ರ ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪರವಾನಗಿ ಇಲ್ಲದ ಜಾಗದಲ್ಲಿ ಮಾರಲು ಬಾರ್ ನಿಂದ ಎಣ್ಣಿ ಸಪ್ಲೈ ಮಾಡಲಾಗುತ್ತಿದೆ. ದಾಸನಪುರ ಎಪಿಎಮ್​ಸಿ ರಸ್ತೆಯ ಹೊನ್ನಸಂದ್ರ ಕ್ರಾಸ್ ನಲ್ಲಿರುವ ಬಿಜಿ ಲಿಕ್ಕರ್ಸ್ ಸಪ್ಲೈ ಮಾಡಲಾಗುತ್ತಿದೆ. ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಬಾರ್ ಕ್ಯಾಶಿಯರ್ ಸಿದ್ದೇಶ್ವರ ಪೊಲೀಸ್ ವಶಕ್ಕೆ ಪಡೆದಿದ್ದಾರೆ. 15ಮದ್ಯದ ಬಾಟಲಿ ವಶಕ್ಕೆ ಪಡೆದ ಪೊಲೀಸರು, ಕಲಂ: 15(ಎ), 32(3) ಅಬಕಾರಿ ಕಾಯ್ದೆ 1965 ರೀತಾ ಪ್ರಕರಣ ವಿಧಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹಜ ಸಾವೆಂದು ಶವಸಂಸ್ಕಾರ ಮಾಡಿದ್ದ ವ್ಯಕ್ತಿಯ ಸಾವಿಗೆ ಟ್ವಿಸ್ಟ್:

ಆನೇಕಲ್: ಸಹಜ ಸಾವೆಂದು ಶವಸಂಸ್ಕಾರ ಮಾಡಿದ್ದ ವ್ಯಕ್ತಿಯ ಸಾವಿಗೆ ಟ್ವಿಸ್ಟ್ ಸಿಕ್ಕಿದೆ. ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ. ಜಿಗಣಿ ಪೋಲೀಸ್ ಠಾಣಾ ವ್ಯಾಪ್ತಿಯ ಬಂಡೇನಲಸಂದ್ರದಲ್ಲಿ ಘಟನೆ ನಡೆದಿದೆ. ಮಂಜಪ್ಪ(38)ಸಾವಿಗೀಡಾಗಿದ್ದ ವ್ಯಕ್ತಿ. ಪತಿ, ಪತ್ನಿ ರಸ್ತೆಯಲ್ಲಿ ನಡೆದು ಹೋಗುವಾಗ ಅಡ್ಡಗಟ್ಟಿದ್ದ ಗ್ಯಾಂಗ್​ವೊಂದು ಚನಕೆ ಕದ್ದಿದ್ದಾನೆಂದು ಆಸಾಮಿಗಳು ಆರೋಪ ಮಾಡಿದ್ದಾಳೆ. ಮಂಜಪ್ಪನ ಪತ್ನಿಯನ್ನು ಮನೆಗೆ ಹೋಗುವಂತೆ ಹೇಳಿದ್ದ ಗ್ಯಾಂಗ್, ಚನಕೆ ಕದ್ದಿದ್ದಾನೆಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆಗೊಳಗಾಗಿದ್ದ ಮಂಜಪ್ಪ ಮನೆಗೆ ಹೋಗಿ ಮಲಗಿದ್ದ. ಆದರೆ ಮಲಗಿದ್ದ ಜಾಗದಲ್ಲಿ ಸಾವನ್ನಪ್ಪಿದ್ದ. ಬಳಿಕ ಮಂಜಪ್ಪ ವಾಸವಿದ್ದ ಮಾಲೀಕರು ಮಂಜಪ್ಪನ ಶವಸಂಸ್ಕಾರ ನಡೆಸಿದ್ದರು. ಶವಸಂಸ್ಕಾರದ ಬಳಿಕ ಮಂಜಪ್ಪನ ಪತ್ನಿ ವಿಷಯ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಆನೇಕಲ್ ಉಪವಿಭಾಗದ ಪೋಲೀಸರು, ಬೆಂಗಳೂರು ಎಸ್ಪಿ ವಂಸಿಕೃಷ್ಣ ಹಾಗೂ ತಹಶೀಲ್ದಾರ್ ರವರ ಸಮ್ಮುಖದಲ್ಲಿ ಮೃತ ದೇಹ ಹೊರತೆಗೆಯುವ ಕಾರ್ಯ ನಡೆದಿದ್ದು, ಮರಣೋತ್ತರ ಪರೀಕ್ಷೆಗೆ ಅಧಿಕಾರಿಗಳು ಮೃತದೇಹ ರವಾನೆ ಮಾಡಲಿದ್ದಾರೆ.

ಇದನ್ನೂ ಓದಿ:

ಟಿಪ್ಪು ಇತಿಹಾಸವನ್ನು ಪಠ್ಯದಿಂದ ಕೈಬಿಡುವ ಸುದ್ದಿ ಸತ್ಯಕ್ಕೆ ದೂರ: ಬಿ.ಸಿ ನಾಗೇಶ್ ಸ್ಪಷ್ಟನೆ

Published On - 1:55 pm, Fri, 25 March 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ