3 ವರ್ಷದ ಹಿಂದೆ ನಡೆದ ಆ ದುರ್ಘಟನೆಯೇ ತಾಯಿಯ ಹತ್ಯೆಗೆ ಮೂಲವಾಯಿತಾ!?
ಬೆಂಗಳೂರು: ನಗರದ ಕೆ ಆರ್ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್ಗಾಗಿ ಅಂಡಮಾನ್ಗೆ ಎಸ್ಕೇಪ್ ಆಗಿದ್ದ ಅಮೃತಾ- ಶ್ರೀಧರ್ ಪ್ರಕರಣಕ್ಕೆ ಟ್ವಿಸ್ಟ್ಗೆ ಸಿಕ್ಕಿದೆ. ಅಂಡಮಾನ್ನಲ್ಲಿ ಬೈಕ್ ರೈಡ್ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್ ಪುರಂ ಇನ್ಸ್ಪೆಕ್ಟರ್ ಅಂಬರೀಷ್ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ. ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ […]
ಬೆಂಗಳೂರು: ನಗರದ ಕೆ ಆರ್ ಪುರಂನಲ್ಲಿ ನಸುಕಿನ ವೇಳೆ ಹೆತ್ತಮ್ಮನನ್ನು ಸಾಯಿಸಿ, ಪ್ರಿಯತಮನ ಜೊತೆ ಜಾಲಿ ರೈಡ್ಗಾಗಿ ಅಂಡಮಾನ್ಗೆ ಎಸ್ಕೇಪ್ ಆಗಿದ್ದ ಅಮೃತಾ- ಶ್ರೀಧರ್ ಪ್ರಕರಣಕ್ಕೆ ಟ್ವಿಸ್ಟ್ಗೆ ಸಿಕ್ಕಿದೆ. ಅಂಡಮಾನ್ನಲ್ಲಿ ಬೈಕ್ ರೈಡ್ನಲ್ಲಿದ್ದ ಅಮೃತಾ- ಶ್ರೀಧರ್ ಇಬ್ಬರನ್ನೂ ಕೆ ಆರ್ ಪುರಂ ಇನ್ಸ್ಪೆಕ್ಟರ್ ಅಂಬರೀಷ್ ತಂಡ ಕರೆದುತರುವಾಗ ವಿಮಾನ ಪ್ರಯಾಣದುದ್ದಕ್ಕೂ ಇಬ್ಬರೂ ಹಲವಾರು ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದಾರೆ.
ತನ್ನ ಹೆತ್ತಮ್ಮ ನಿರ್ಮಲಾರನ್ನು ಸಾಯಿಸಿದ್ದು ತಾನೇ ಎಂದು ಇದೇ ಸಂದರ್ಭದಲ್ಲಿ ಆರೋಪಿ ಅಮೃತಾ ಚಂದ್ರಶೇಖರ್ ಒಪ್ಪಿಕೊಂಡಿದ್ದಾಳೆ. ಆಕೆಯ ಪ್ರಿಯಕರ ಶ್ರೀಧರ್ ಸಹ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೂ ಪ್ರಕರಣದ ಸಂಪೂರ್ಣ ವಿವರ, ವಿವಿಧ ಆಯಾಮಗಳು ಬಯಲಿಗೆ ಬರಬೇಕಿವೆ ಎಂದೂ ಪೊಲೀಸರು ಹೇಳಿದ್ದಾರೆ.
ಮೂರು ವರ್ಷಗಳ ಹಿಂದೆ ಏನಾಗಿತ್ತೆಂದ್ರೆ..
2017ರಲ್ಲಿ ಹೊಸಕೋಟೆ ಬಳಿ ಕಾರು ಅಪಘಾತವೊಂದು ನಡೆದಿತ್ತು. ವೇಗವಾಗಿ ಕಾರ್ ಚಲಾಯಿಸಿ ಮೇಲಿನ ಇಬ್ಬರೂ ಆರೋಪಿಗಳು ಆ ಕೃತ್ಯ ಎಸಗಿದ್ದರು. ಪ್ರಕರಣವೊಂದರಲ್ಲಿ ಮೂವರು ಮೃತಪಟ್ಟು, ಒಬ್ಬರಿಗೆ ಗಂಭೀರ ಗಾಯವಾಗಿತ್ತು. ಪ್ರಕರಣದಲ್ಲಿ ಕಾರು ಸಂಪೂರ್ಣವಾಗಿ ಜಖಂ ಆಗಿತ್ತು. ಅಪಘಾತ ಪ್ರಕರಣ ಮತ್ತು ಕಾರಿಗಾಗಿ ಲಕ್ಷಾಂತರ ರೂ. ಖರ್ಚು ತಗುಲಿತ್ತು. ಈ ಖರ್ಚಿಗಾಗಿ ಅಮೃತಾ ₹15 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಆ ಪ್ರಕರಣದಿಂದಾಗಿಯೇ ಅಮ್ಮನನ್ನು ಸಾಯಿಸುವ ಪ್ರಮೇಯ ಬಂತು ಎಂದು ಅಮೃತಾ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.
https://www.facebook.com/Tv9Kannada/videos/2972775902754961/
Published On - 4:24 pm, Thu, 6 February 20