ನಕಲಿ ಐಡಿ ಕಾರ್ಡ್ಗಳ ತಯಾರಿಸಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುತ್ತಿದ್ದವ CCB ಬಲೆಗೆ
ಸಿಸಿಬಿ ತಂಡ ಕಾರ್ಯಾಚರಣೆ ವೇಳೆ ರಾಜಸ್ಥಾನ ಮೂಲದ ಕಮಲೇಶ್ನನ್ನು ಬಂಧಿಸಿದ್ದು, ಬಂಧಿತ ಆರೋಪಿ ಕನಕಪುರ ರಸ್ತೆಯ ಹೆರಿಟೇಜ್ ಅಪಾರ್ಟ್‌ಮೆಂಟ್‌ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ಆರ್‌ಸಿ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮುಂತಾದವುಗಳಿಗೆ ಸರ್ಕಾರದ ನಕಲಿ ಚಿಹ್ನೆಗಳನ್ನು ಮುದ್ರಿಸುತ್ತಿದ್ದ.
ಬೆಂಗಳೂರು: ಸರ್ಕಾರದ ನಕಲಿ ಮುದ್ರೆ ತಯಾರಿಸಿ, ಅಕ್ರಮವಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ಆರ್‌ಸಿ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮಾಡಿಕೊಡುತ್ತಿದ್ದವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ವಂಚನೆ ಮಾಡುತ್ತಿದ್ದ ಬೃಹತ್ ಜಾಲವನ್ನು ಸಿಸಿಬಿ ಪೊಲೀಸರು ಬೇಧಿಸಿದ್ದು, ರಾಜಸ್ಥಾನ ಮೂಲದ ಕಮಲೇಶ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ಅವರಿಂದ ಹೆಸರು ವಿಳಾಸವಿಲ್ಲದ 28,000 ನಕಲಿ ಚುನಾವಣಾ ಗುರುತಿನ ಚೀಟಿ, 9,000 ನಕಲಿ ಆಧಾರ್ ಕಾರ್ಡ್ಗಳು, 9,000 ಪಾನ್ ಕಾರ್ಡ್ಗಳು, 12,200 ಆರ್‌ಸಿ ಕಾರ್ಡ್ಗಳು, 2 ಪ್ರಿಂಟರ್ ಹಾಗೂ ಕಂಪ್ಯೂಟರ್ಗಳನ್ನು ವಶ ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿ ಕನಕಪುರ ರಸ್ತೆಯ ಹೆರಿಟೇಜ್ ಅಪಾರ್ಟ್‌ಮೆಂಟ್‌ನಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚಾಲನಾ ಪರವಾನಗಿ, ಆರ್‌ಸಿ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮುಂತಾದವುಗಳಿಗೆ ಸರ್ಕಾರದ ನಕಲಿ ಚಿಹ್ನೆಗಳನ್ನು ಮುದ್ರಿಸುತ್ತಿದ್ದ. ಇದು ಪಕ್ಕಾ ಅಸಲಿ ಐಡಿ ಕಾರ್ಡ್ಗಳಂತೆ ಗೋಚರಿಸುತ್ತಿತ್ತು.
ಸಾಯುವುದಕ್ಕೂ ಮೊದಲು 3 ಲಕ್ಷಕ್ಕೆ ಜೀವವಿಮೆ ಖರೀದಿಸಿದ್ದ ತಾಲಿಬಾನ್ ಮುಖ್ಯಸ್ಥ!