Parappana Agrahara Jail: ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ; ಗಾಂಜಾ ಸೇದುವ ಚಿಲುಮೆ ಪತ್ತೆ!
ರಾಜಧಾನಿಯ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು:ರಾಜಧಾನಿಯ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪದ ಮೇಲೆ ಮತ್ತು ಮೊಬೈಲ್, ಗಾಂಜಾ, ಇತರೆ ವಸ್ತುಗಳ ಪೂರೈಕೆ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಗಾಂಜಾ ಸೇದುವ ಚಿಲುಮೆ ಪತ್ತೆ! ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ದಾಳಿ ವೇಳೆ ಗಾಂಜಾ ಮತ್ತು ಗಾಂಜಾ ಸೇದುವ ಚಿಲುಮೆ ಪತ್ತೆಯಾಗಿದೆ. ಬೆಳಗ್ಗೆ 6 ಗಂಟೆಯಿಂದಲೂ ಸಿಸಿಬಿ ಪೊಲೀಸರು ಪರಿಶೀಲನೆ ನಡೆಯುತ್ತಿದ್ದಾರೆ. ಈ ಹಿಂದೆ ದಾಳಿ ನಡೆಸಿದಾಗಲೂ ಗಾಂಜಾ ಪತ್ತೆಯಾಗಿತ್ತು. ಆದರೆ ಗಾಂಜಾ ಸೇದುವ ಚಿಲುಮೆ ಪತ್ತೆ ಆಗಿರಲಿಲ್ಲ. ಸದ್ಯ ಸಿಸಿಬಿ ಪೊಲೀಸರು ಮತ್ತಷ್ಟು ಹುಡುಕಾಟವನ್ನ ಮುಂದುವರಿಸಿದ್ದಾರೆ.
ಆನೇಕಲ್ ಸಮೀಪದ ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ಪರಿಶೀಲನೆ ಮುಂದುವರಿದಿದೆ. ಸಿಸಿಬಿ ಪೊಲೀಸರು ಕಳೆದ ಮೂರು ಗಂಟೆಗಳಿಂದ ಜೈಲಿನಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಗಾಂಜಾ, ಮೊಬೈಲ್ ಸೇರಿದಂತೆ ಇನ್ನಿತರ ಅಕ್ರಮ ವಸ್ತುಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೈದಿಗಳು ಜೈಲಿನಲ್ಲಿಯೇ ಕೂತು ಅನೇಕ ಅಪರಾಧ ಕೃತ್ಯದಲ್ಲಿ ತೊಡಗಿರುವುದು ಸಹ ಪತ್ತೆಯಾಗಿದೆ. ಜೈಲಿನೊಳಗೆ ಮೊಬೈಲ್ ಸೇರಿದಂತೆ ಗಾಂಜಾ ಸೇವನೆ ಬಗ್ಗೆ ಟಿವಿ 9 ವರದಿ ಮಾಡಿತ್ತು. ಇದೀಗ ಸಿಸಿಬಿ ಪೊಲೀಸರು ಜೈಲಿನ ಕೋಣೆ ಕೋಣೆಯನ್ನೂ ಸರ್ಚ್ ಮಾಡುತ್ತಿದ್ದಾರೆ.
ಸಿಸಿಬಿ ಮುಖ್ಯಸ್ಥ, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ಇಂದು ಬೆಳಗ್ಗೆ ಆರು ಗಂಟೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಾಳಿ ನಡೆಸಲಾಗಿದೆ. 2 ಡಿಸಿಪಿ, 15 ಇನ್ಸ್ಪೆಕ್ಟರ್ಗಳು ದಾಳಿ ನಡೆಸಿದ್ದರು. ದಾಳಿ ವೇಳೆ ಹಲವು ಗಾಂಜಾ ಪ್ಯಾಕೆಟ್‌ಗಳು ದೊರಕಿವೆ. ಈ ವೇಳೆ ಗಾಂಜಾ ಪ್ಯಾಕೇಟ್ ಸಿಕ್ಕಿದೆ. ಆರರಿಂದ ಏಳು ಗಾಂಜಾ ಪೈಪ್ ಗಳು ಸಿಕ್ಕಿವೆ. ಇನ್ನೂ ಕೂಡ ದಾಳಿ ಮುಂದುವರಿದಿದೆ. ನಂತರ ಏನೇನ್ ಸಿಕ್ಕಿದೆ ಎಂಬುದ ಮಾಹಿತಿ ಸಿಗಲಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಪತ್ನಿ ಮಕ್ಕಳ ಜೊತೆ ಮದುವೆಯಿಂದ ಬರುವಾಗ ಪಲ್ಟಿಯಾಗಿದ್ದ ಆಟೋಗೆ ಬೈಕ್ ಡಿಕ್ಕಿ, ಸವಾರ ಸಾವು: ಮೈಸೂರು -ಪಲ್ಟಿಯಾಗಿದ್ದ ಆಪೇ ಆಟೋಗೆ ಬೈಕ್ ಡಿಕ್ಕಿ ಹೊಡೆದು, ಬೈಕ್ ಸವಾರ ಸಾವಿಗೀಡಾಗದ್ದಾನೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಹೊಸ ಅಗ್ರಹಾರದ ಬಳಿ ಅಪಘಾತ ನಡೆದಿದೆ. ಬೆಕ್ಯಾ ಗ್ರಾಮದ ನಿವಾಸಿ ಸತೀಶ್ (35) ಮೃತ ದುರ್ದೈವಿ. ಪತ್ನಿ ಮಕ್ಕಳ ಜೊತೆ ಮದುವೆ ಕಾರ್ಯಕ್ರಮ ಮುಗಿಸಿ ಹೋಗುವಾಗ ಅಪಘಾತ ಸಂಭವಿಸಿದೆ. ಪತ್ನಿ ಪಾರ್ವತಿ ಮತ್ತು ಮಗಳು ಖುಷಿ ಮಗ ಜೀವನ್‌ಗೆ ಗಂಭೀರ ಗಾಯಗಳಾಗಿವೆ. ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ
ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಅರಣ್ಯಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಿದಿರುತಳ ಗ್ರಾಮಕ್ಕೆ ಹೋಗಿದ್ದ ಬಾಳೂರು ಗ್ರಾಮದ ನಾಗೇಶ್ ಆಚಾರ್ (46) ಕಣ್ಮರೆಯಾಗಿದ್ದಾರೆ. ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ನಾಗೇಶ್ ಅವರು ಕೃಷ್ಣೇಗೌಡ ಎಂಬುವರ ಜೊತೆ ಜೀಪ್ ನಲ್ಲಿ ಹೋಗಿದ್ದರು. ಕಣ್ಮರೆಯಾಗುವ ವ್ಯಕ್ತಿಗಾಗಿ ಚಾರ್ಮಾಡಿ ಘಾಟ್ ನಲ್ಲಿ ಸ್ಥಳೀಯರಿಂದ ಹುಡುಕಾಟ ನಡೆದಿದೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 7:58 am, Tue, 30 November 21