ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟೋರಿಯಸ್ ರೌಡಿಶೀಟರ್ ಮೇಲೆ ಎಫ್ಐಆರ್ ದಾಖಲು, ಏನವನ ಒಳ ಮಸಲತ್ತು?
Parappana Aghrahara Jail: ಜೈಲಿನಲ್ಲಿ ಸಿಕ್ಕ ಮಾದಕ ವಸ್ತು, ರಾಡ್, ಚಾಕು ಮಾರಕಾಸ್ತ್ರಗಳು, ಮೊಬೈಲ್ ಫೋನ್ ಪತ್ತೆಯಾದ್ದರ ಬಗ್ಗೆ ತನಿಖೆ ನಡೆದಿದೆ. ಸಿಸಿಬಿ ಅಧಿಕಾರಿಗಳು ಸಿಮ್ ಕಾರ್ಡ್ಗಳು, ನಗದು ವಶಪಡಿಸಿಕೊಂಡಿದ್ದರು. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಇದೀಗ ದೂರು ದಾಖಲಾಗಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಮೇರೆ ಮೀರುತ್ತಿದ್ದ ಹಿನ್ನೆಲೆ ರಾಜಧಾನಿ ಪೊಲೀಸರು ಕಳೆದ ವಾರಾಂತ್ಯ ಇಡೀ ಬೆಂಗಳೂರಿನಲ್ಲಿ ರೌಡಿಗಳಿಗೆ ಚಳಿ ಇಡಿಸಿದ್ದರು. ರೌಡಿಗಳಿಗಂತೂ ನಿಂತ ನಿಲುವಿನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳೇ ಥಂಡಾ ಹೊಡೆಸಿದ್ದರು. ನೂರಿನ್ನೂರು ಅಲ್ಲ; ಸಾವಿರಾರು ರೌಡಿಗಳನ್ನು ಡ್ರಿಲ್ ಮಾಡಿಸಿದ್ದರು. ಅಷ್ಟೇ ಸಾಲದು ಅಂತಾ ಪರಪ್ಪನ ಅಗ್ರಹಾರ ಜೈಲಿಗೂ ಸಿಸಿಬಿ ಅಧಿಕಾರಿಗಳು ಎಟ್ರಿ ಕೊಟ್ಟು, ದಾಳಿ ನಡೆಸಿದ್ದರು. ಅಲ್ಲಿದ್ದಿ ಇನ್ ಹೌಸ್ ರೌಡಿಗಳಿಗೆ ಸರಿಯಾಗಿ ವಿಚಾರಿಸಿಕೊಂಡಿದ್ದರು. ಜೈಲಿನಲ್ಲೇ ಇದ್ದುಕೊಂಡು ರೌಡಿಗಳು ಕಾರುಬಾರು ನಡೆಸಿದ್ದರು. ಅದೆಲ್ಲ ದಾಳಿ ವೇಳೆ ಬಟಾಬಯಲಾಗಿತ್ತು.
ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಪ್ರಕರಣದಲ್ಲಿ ಇಂದು ಜೈಲಿನಲ್ಲಿರುವ ನಟೋರಿಯಸ್ ರೌಡಿಶೀಟರ್ ಮೇಲೆ ಎಫ್ಐಆರ್ (FIR) ದಾಖಲಿಸಲಾಗಿದೆ. ಜೈಲಿನಲ್ಲಿದ್ದುಕೊಂಡೇ ಬಾಂಬೆ ಸಲೀಂ ಎಂಬ ಕುಖ್ಯಾತ ಅಕ್ರಮ ದಂಧೆ ನಡೆಸುತ್ತಿದ್ದನಂತೆ. ಇವನ ವಿರುದ್ಧ ಸಿಸಿಬಿ ಇನ್ಸ್ಪೆಕ್ಟರ್ ದೀಪಕ್ ಅವರು ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಜೈಲಿನಲ್ಲಿ ಸಿಕ್ಕ ಮಾದಕ ವಸ್ತು, ರಾಡ್, ಚಾಕು ಮಾರಕಾಸ್ತ್ರಗಳು, ಮೊಬೈಲ್ ಫೋನ್ ಪತ್ತೆಯಾದ್ದರ ಬಗ್ಗೆ ತನಿಖೆ ನಡೆದಿದೆ. ಸಿಸಿಬಿ ಅಧಿಕಾರಿಗಳು ಸಿಮ್ ಕಾರ್ಡ್ಗಳು, ನಗದು ವಶಪಡಿಸಿಕೊಂಡಿದ್ದರು. ಇದರ ಬಗ್ಗೆ ತನಿಖೆ ನಡೆಸಬೇಕೆಂದು ಇದೀಗ ದೂರು ದಾಖಲಾಗಿದೆ.
ಬೆಂಗಳೂರಿನಲ್ಲಿ 1,500 ರೌಡಿಗಳು ಪೊಲೀಸರ ವಶಕ್ಕೆ; 2 ಸಾವಿರ ರೌಡಿ ಶೀಟರ್ಸ್ ಮನೆ ಮೇಲೆ ದಾಳಿ

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟೋರಿಯಸ್ ರೌಡಿಶೀಟರ್ ಮೇಲೆ ಎಫ್ಐಆರ್ ದಾಖಲು, ಏನವನ ಒಳ ಮಸಲತ್ತು?
(CCB raid on parappana aghrahara jail fir lodged against notorious rowdy sheeter bombay saleem)