ಛತ್ತೀಸ್‌ಗಢದ ಧಮ್ತಾರಿಯಲ್ಲಿ ಮಹಿಳೆ, ಆಕೆಯ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆಯ ಶಂಕೆ

|

Updated on: Jun 13, 2024 | 7:06 PM

Chhattisgarh Crime News: ಛತ್ತೀಸ್​ಗಢದ ಧಮ್ತಾರಿಯಲ್ಲಿ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಚೌಕ್‌ನಲ್ಲಿರುವ ಮನೆಯಲ್ಲಿ ಖುಷ್ಬು ಶರ್ಮಾ ಮತ್ತು ಅವರ 13 ವರ್ಷದ ಮಗಳ ಶವಗಳು ಪತ್ತೆಯಾಗಿವೆ.

ಛತ್ತೀಸ್‌ಗಢದ ಧಮ್ತಾರಿಯಲ್ಲಿ ಮಹಿಳೆ, ಆಕೆಯ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ; ಆತ್ಮಹತ್ಯೆಯ ಶಂಕೆ
ಪೊಲೀಸರು
Image Credit source: istock
Follow us on

ಧಮ್ತಾರಿ: ಛತ್ತೀಸ್‌ಗಢದ (Chhattisgarh) ಧಮ್ತಾರಿ ನಗರದಲ್ಲಿ 35 ವರ್ಷದ ಮಹಿಳೆ ಮತ್ತು ಆಕೆಯ ಹದಿಹರೆಯದ ಮಗಳು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಂದು (ಗುರುವಾರ) ತಿಳಿಸಿದ್ದಾರೆ. ಖುಷ್ಬು ಶರ್ಮಾ ಮತ್ತು ಅವರ 13 ವರ್ಷದ ಮಗಳ ಶವಗಳು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಚೌಕ್ ನಿವಾಸದಲ್ಲಿ ಬುಧವಾರ ರಾತ್ರಿ ಪತ್ತೆಯಾಗಿವೆ.

ಖುಷ್ಬು ಶರ್ಮಾ 6 ವರ್ಷಗಳ ಹಿಂದೆ ತನ್ನ ಪತಿಗೆ ವಿಚ್ಛೇದನ ನೀಡಿದ್ದು, ಮಗಳೊಂದಿಗೆ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪ್ರಾಥಮಿಕ ಮಾಹಿತಿಯು ಸೂಚಿಸುತ್ತದೆ. ಇತ್ತೀಚೆಗಷ್ಟೇ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಕಳೆದುಕೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವಿಗೆ ನಿಖರ ಕಾರಣ ದೃಢಪಟ್ಟಿದ್ದರೂ ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಕೊಲೆಗೂ ಮುನ್ನ ದರ್ಶನ್​ ಗ್ಯಾಂಗ್ ಜೊತೆ ರೇಣುಕಾ ಸ್ವಾಮಿ ಮಾತು; ವಿಡಿಯೋ ವೈರಲ್​

ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಕಂಡುಬಂದಿಲ್ಲ. ಆದರೂ ಪ್ರಾಥಮಿಕವಾಗಿ ನೋಡಿದರೆ ಆರ್ಥಿಕ ಸಮಸ್ಯೆಗಳು ಮಹಿಳೆಯನ್ನು ಈ ತೀವ್ರ ಕ್ರಮಕ್ಕೆ ಪ್ರೇರೇಪಿಸಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ