ಚಿಕ್ಕಬಳ್ಳಾಪುರ: ಮಹಿಳೆಯ ಬರ್ಬರ ಕೊಲೆ ಮಾಡಿದ ಪ್ರಿಯಕರ ರೂಮ್​ಗೆ ಬೀಗ ಜಡಿದು ಪರಾರಿ

ಚಿಕ್ಕಬಳ್ಳಾಪುರ ನಗರದ ಚಾಮರಾಜಪೇಟೆ ವಾರ್ಡ್‌ನಲ್ಲಿ ಬಾಡಿಗೆ ರೂಮ್‌ನಲ್ಲಿ ಕತ್ತು ಕೊಯ್ದು ಮಹಿಳೆಯ ಬರ್ಬರ ಕೊಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಪ್ರಿಯಕರ ದಿವಾಕರ್‌ ಎಂಬಾತ ಕೊಲೆ ಮಾಡಿದ ಶಂಕೆ ವ್ಯಕ್ತವಾಗಿದೆ. ಫೆ.7ರಂದು ದೀಪಾಳನ್ನು ಕೊಂದು ರೂಮ್‌ಗೆ ಬೀಗ ಜಡಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ: ಮಹಿಳೆಯ ಬರ್ಬರ ಕೊಲೆ ಮಾಡಿದ ಪ್ರಿಯಕರ ರೂಮ್​ಗೆ ಬೀಗ ಜಡಿದು ಪರಾರಿ
ಚಿಕ್ಕಬಳ್ಳಾಪುರ: ಮಹಿಳೆಯ ಬರ್ಬರ ಕೊಲೆ ಮಾಡಿದ ಪ್ರಿಯಕರ ರೂಮ್​ಗೆ ಬೀಗ ಜಡಿದು ಪರಾರಿ
Edited By:

Updated on: Feb 10, 2024 | 10:28 PM

ಚಿಕ್ಕಬಳ್ಳಾಪುರ, ಫೆ.20: ಬಾಡಿಗೆ ರೂಮ್‌ನಲ್ಲಿ ಕತ್ತು ಕೊಯ್ದು ಮಹಿಳೆಯನ್ನು ಬರ್ಬರವಾಗಿ ಕೊಲೆ (Murder) ಮಾಡಿದ ಪ್ರಕರಣ ಚಿಕ್ಕಬಳ್ಳಾಪುರ (Chikkaballapur) ನಗರದ ಚಾಮರಾಜಪೇಟೆ ವಾರ್ಡ್‌ನಲ್ಲಿ ನಡೆದಿದೆ. ದೀಪಾ (40) ಕೊಲೆಯಾದ ವಿವಾಹಿತ ಮಹಿಳೆಯಾಗಿದ್ದು, ತಮಿಳುನಾಡು ಮೂಲದ ಪ್ರಿಯಕರ ದಿವಾಕರ್‌ ಎಂಬಾತ ಕೊಲೆ ಮಾಡಿ ರೂಮ್​ಗೆ ಬೀಗ ಹಾಕಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.

ರೂಮ್​ನಿಂದ ಕೆಟ್ಟ ವಾಸನೆ ಬರುತ್ತಿರುವ ಹಿನ್ನೆಲೆ ಅನುಮಾನಗೊಂಡ ಕಟ್ಟಡದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೂಮ್​ ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್​ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೂಮ್​ ಮಾಲಿಕರಿಂದ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಧಾರವಾಡದಲ್ಲಿ ಚಿಕ್ಕಮ್ಮನನ್ನೇ ಕೊಂದ ಕೊಲೆಗಾರ ಅಂದರ್​; ಹತ್ಯೆಗೆ ಕಾರಣ ಬಾಯ್ಬಿಟ್ಟ ಹಂತಕ

ಮೃತ ದೀಪಾಳನ್ನು ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯಾಗೆ ಮದುವೆ ಮಾಡಿಕೊಡಲಾಗಿತ್ತು. ಮಕ್ಕಳ ಜೊತೆ ತವರು ಮನೆ ಚಿಕ್ಕಬಳ್ಳಾಫುರದಲ್ಲಿ ವಾಸವಿದ್ದ ದೀಪಾಳಿಗೆ ತನ್ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ದೀವಾಕರ್ ಜೊತೆ ಅನೈತಿಕ ಸಂಬಂಧ ಇತ್ತು ಎನ್ನುವ ಆರೋಪ ಕೇಳಿಬಂದಿದೆ. ಆಗಾಗ ಪ್ರೀಯಕರ ದಿವಾಕರ್ ರೂಮಿಗೆ ಬಂದು ಹೋಗುತ್ತಿದ್ದಳು. ಇತ್ತೀಚೆಗೆ ರೂಮ್​ಗೆ ಬಂದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ದೀಪಾಳನ್ನು ದಿವಾಕರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ