ಹೊಸಕೋಟೆ: ಕಾಣೆಯಾಗಿದ್ದ ದಲಿತ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ; ಆಕೆಯಿಂದ ಅವಮಾನವಾಯ್ತೆಂದು ಕೊಲೆ?
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಲಿತ ಬಾಲಕಿಯೊಬ್ಬಳು ನಾಪತ್ತೆಯಾಗಿದ್ದಳು. ಕುರಿಗಾಹಿಗಳು ಕುರಿ ಕಾಯಲು ಹೋದ ವೇಳೆ ಬಾಲಕಿ ಕೊಲೆಯಾದ ಸ್ಥಿತಿಯಲ್ಲಿ ಕಂಡು ಪೋಷಕರಿಗೆ ಮಾಹಿತಿ ನೀಡಿದ್ದರು. ದಲಿತ ಬಾಲಕಿಯಿಂದ ಅವಮಾನವಾಯ್ತು ಅಂತ ಸವರ್ಣಿಯ ಗುಂಪಿಗೆ ಸೇರಿದ ಯುವಕನಿಂದ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ದೇವನಹಳ್ಳಿ, ಫೆ.9: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಲಿತ ಬಾಲಕಿ ಕೊಲೆಯಾದ (Murder) ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿದ್ದು, ದಲಿತ ಬಾಲಕಿಯಿಂದ ಅವಮಾನವಾಯ್ತು ಅಂತ ಸವರ್ಣಿಯ ಗುಂಪಿಗೆ ಸೇರಿದ ಯುವಕನಿಂದ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
ಬಾಲಕಿ 20 ದಿನಗಳ ಹಿಂದೆ ಶಾಲೆಗೆ ಹೋಗುತ್ತಿದ್ದಾಗ ನಿತಿನ್ ಎಂಬಾತ ಚುಡಾಯಿಸಿದ್ದನು. ಇದನ್ನು ಪ್ರಶ್ನಿಸಿದ್ದಕ್ಕೆ ನಿತಿನ್ ಬಾಲಕಿ ಮೇಲೆ ಹಲ್ಲೆ ನಡೆಸಿದ್ದನು. ಈ ವಿಚಾರವನ್ನು ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದಳು. ಅದರಂತೆ ಮಾಲೂರು ಠಾಣಾ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಈ ವೇಳೆ ಎರಡು ಗ್ರಾಮದ ಹಿರಿಯರು ಸೇರಿ ಇಬ್ಬರ ನಡುವೆ ರಾಜಿ ಪಂಚಾಯಿತಿ ನಡೆಸಿದ್ದರು.
ಇದನ್ನೂ ಓದಿ: ಮಗಳಿಗೆ ವರನನ್ನು ಹುಡುಕಲು ಕೊಲೆ ಆರೋಪಿಗೆ 45 ದಿನಗಳ ಮಧ್ಯಂತರ ಜಾಮೀನು ನೀಡಿದ ಸುಪ್ರೀಂಕೋರ್ಟ್
ರಾಜಿ ಪಂಚಾಯತಿ ನಡೆದ ಮೂರು ದಿನಗಳ ಬಳಿಕ ಬಾಲಕಿ ನಾಪತ್ತೆಯಾಗಿದ್ದಳು. ನಿನ್ನೆ ಕುರಿಹಾಗಿಗಳು ಕುರಿ ಕಾಯಲು ಹೋಗಿದ್ದಾಗ ಬಾಲಕಿಯ ಶವಕಂಡು ಪೋಷಕರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈಟ್ ಫಿಲ್ಡ್ನ ವೈದೇಹಿ ಆಸ್ವತ್ರೆಗೆ ರವಾನಿಸಿದ್ದಾರೆ.
ಅವಮಾನಕ್ಕೆ ಬಾಲಕಿಯ ಕೊಲೆ
ದಲೊತ ಬಾಲಕಿಯಿಂದ ಅವಮಾನವಾಯ್ತು ಅಂತ ಸವರ್ಣಿಯ ಗುಂಪಿಗೆ ಸೇರಿದ ಯುವಕ ನಿತಿನ್ ಕೊಲೆ ಆರೋಪ ಕೇಳಿಬಂದಿದೆ. ಕೊಲೆ ನಂತರ ಆರೋಪಿ ಗ್ರಾಮದಲ್ಲೇ ಒಡಾಡಿಕೊಂಡಿದ್ದನು. ಕೊಲೆ ವಿಚಾರ ಬಯಲಿಗೆ ಬರುತ್ತಿದ್ದಂತೆ ನಿತಿನ್ ಕತ್ತುಕೊಯ್ದುಕೊಂಡಿದ್ದಾನೆ. ಕೊಲೆ ಮಾಡಿ ಕತ್ತು ಕೊಯ್ದುಕೊಂಡು ಡ್ರಾಮ ಮಾಡುತ್ತಿದ್ದಾನೆ ಅಂತ ಮೃತ ಬಾಲಕಿ ಕುಟುಂಬಸ್ಥರು ಆರೋಪಿಸಿದ್ದು, ಆರೋಪಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದ ಕಾರಣ ಬಾಲಕಿ ಕೊಲೆಯಾಗಿದೆ ಅಂತ ಆಕ್ರೋಶ ಹೊರಹಾಕಿದ್ದಾರೆ. ಪ್ರಕರಣ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ