ಚಿಕ್ಕಮಗಳೂರು, ಡಿಸೆಂಬರ್ 07: ತನ್ನ ಬಿಟ್ಟು ಗಂಡನ ಜತೆ ತೆರಳಿದ್ದಕ್ಕೆ ಮಕ್ಕಳ ಎದುರಲ್ಲೇ ಪ್ರಿಯಕರನಿಂದ ಮಹಿಳೆಯನ್ನು ಹತ್ಯೆಗೈದಿರುವಂತಹ (kill) ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ಘಟನೆ ನಡೆದಿದೆ. ಚಾಕುವಿನಿಂದ ಇರಿದು ತೃಪ್ತಿ(25) ಹತ್ಯೆಗೈದ ಪ್ರಿಯಕರ ಚಿರಂಜೀವಿ, ಬಳಿಕ ಕೃಷಿ ಹೊಂಡಕ್ಕೆ ಶವ ಎಸೆದು ಪರಾರಿ ಆಗಿದ್ದಾನೆ. ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ತೃಪ್ತಿ ಮತ್ತು ಚಿರಂಜೀವಿ ಫೇಸ್ಬುಕ್ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಒಂದು ತಿಂಗಳ ಹಿಂದೆ ಪತಿ ರಾಜು ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ನಾಪತ್ತೆಯಾಗಿದ್ದರು. ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಕೇಸ್ ಕೂಡ ದಾಖಲಾಗಿತ್ತು.
ಇದನ್ನೂ ಓದಿ: ಮಕ್ಕಳ ಕಾಟಕ್ಕೆ ಬೇಸತ್ತು ನಾಲ್ಕು ಮಹಡಿ ಕಟ್ಟಡದಿಂದ ಹಾರಿ ವೃದ್ಧ ತಂದೆ ಆತ್ಮಹತ್ಯೆ
ಬಿಜಾಪುರದಲ್ಲಿ ತಲೆಮರೆಸಿಕೊಂಡಿದ್ದ ತೃಪ್ತಿ ಮತ್ತು ಪ್ರಿಯಕರ ಚಿರಂಜೀವಿಯನ್ನು ಪೊಲೀಸರು ಹುಡುಕಿ ಕರೆತಂದಿದ್ದರು. ಪೋಷಕರ ಸಂಧಾನದ ಬಳಿ ಪತಿ ರಾಜುವಿನ ಜೊತೆ ತೃಪ್ತಿ ತೆರಳಿದ್ದಾರೆ. ಇದರಿಂದ ಕುಪಿತಗೊಂಡ ಚಿರಂಜೀವಿ ತೃಪ್ತಿಯನ್ನು ಹತ್ಯೆ ಮಾಡಿ ಪರಾರಿ ಆಗಿದ್ದಾನೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಬಸ್ನಿಂದ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಬಳಿ ನಡೆದಿದೆ. ತಮಿಳುನಾಡು ಮೂಲದ ದೀನಾ ದಯಾಳ್(21) ಮೃತ ವಿದ್ಯಾರ್ಥಿ.
ಇದನ್ನೂ ಓದಿ: ಬಾಲಕಿ ಮೇಲೆ ಅತ್ಯಾಚಾರ: ಸಹಾಯ ಮಾಡಿದ್ದ ಆರೋಪಿ ಸ್ನೇಹಿತನಿಗೂ ಶಿಕ್ಷೆ ವಿಧಿಸಿದ ಕೋರ್ಟ್
ಬೈಲಕುಪ್ಪೆ ಗೋಲ್ಡನ್ ಟೆಂಪಲ್ ವೀಕ್ಷಿಸಲು ಹೋಗುವಾಗ ಘಟನೆ ಸಂಭವಿಸಿದೆ. ಬಸ್ ಡೋರ್ ಲಾಕ್ ಆಗದ ಹಿನ್ನೆಲೆ ವಿದ್ಯಾರ್ಥಿ ಕೆಳಗೆ ಬಿದಿದ್ದು, ಬಿದ್ದ ತಕ್ಷಣ ಬಲವಾದ ಪೆಟ್ಟು ಬಿದ್ದು ದೀನಾ ದಯಾಳ್ ಸಾವನ್ನಪ್ಪಿದ್ದಾನೆ. ಬೈಲಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.