Chikkamagaluru: ಗಂಡನೊಂದಿಗೆ ಮನಸ್ತಾಪ: ಬಟ್ಟೆ ತೊಳೆಯಲು ಹೋಗಿದ್ದ ಪತ್ನಿಯನ್ನು ಹತ್ಯೆಗೈದ ಪತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 29, 2024 | 3:46 PM

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಬಟ್ಟೆ ತೊಳೆಯಲು ತೆರಳಿದ್ದಾಗ ಮಚ್ಚಿನಿಂದ ಕೊಚ್ಚಿ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಗಂಡನೊಂದಿಗೆ ಮನಸ್ತಾಪ ಹಿನ್ನೆಲೆ ಪತ್ನಿ ತಾಯಿಯ ಜೊತೆಗಿದ್ದರು. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಚರಣ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

Chikkamagaluru: ಗಂಡನೊಂದಿಗೆ ಮನಸ್ತಾಪ: ಬಟ್ಟೆ ತೊಳೆಯಲು ಹೋಗಿದ್ದ ಪತ್ನಿಯನ್ನು ಹತ್ಯೆಗೈದ ಪತಿ
ಮೃತ ಪತ್ನಿ ಮೇಘಾ
Follow us on

ಚಿಕ್ಕಮಗಳೂರು, ಏಪ್ರಿಲ್ 29: ತನ್ನಿಂದ ದೂರವಾಗಿದ್ದ ಪತ್ನಿಯನ್ನು ಪತಿ (Husband) ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಬಟ್ಟೆ ತೊಳೆಯಲು ತೆರಳಿದ್ದಾಗ ಮಚ್ಚಿನಿಂದ ಕೊಚ್ಚಿ (murder) ಹಲ್ಲೆಗೈಯಲಾಗಿದೆ. ಮೇಘಾ(20) ಮೃತ ಪತ್ನಿ, ಚರಣ್ ಹತ್ಯೆಗೈದ ಪತಿ. ಪ್ರೀತಿಸಿ ಕುಟುಂಬದ ಒಪ್ಪಿಗೆ ಪಡೆದು 2 ವರ್ಷದ ಹಿಂದೆ ಚರಣ್ ಜೊತೆ ಮೇಘಾ ವಿವಾಹವಾಗಿದ್ದರು. ಗಂಡನೊಂದಿಗೆ ಮನಸ್ತಾಪ ಹಿನ್ನೆಲೆ ಮೇಘಾ ತಾಯಿ ಜೊತೆಗಿದ್ದರು. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಚರಣ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ತಂದೆ‌ ಮಗಳಿಗೆ ಗುದ್ದಿ ಕಾರು ಚಾಲಕ ಪರಾರಿ

ರಾಮನಗರ: ಕನಕಪುರ ತಾಲೂಕಿನ ನಾರಾಯಣಪ್ಪನ ಕೆರೆ ಬಳಿ ರಸ್ತೆ ಬದಿ ಬೈಕ್​ ನಿಲ್ಲಿಸಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ತಂದೆ ಸಾವನ್ನಪ್ಪಿದ್ದು, ಮಗಳ ಮೆದುಳು ನಿಷ್ಕ್ರಿಯವಾಗಿರುವಂತಹ ದಾರುಣ ಘಟನೆ ನಡೆದಿದೆ. ಅಪಘಾತದಲ್ಲಿ ಮಂಜುನಾಥ್(41) ಮೃತ ತಂದೆ. 9 ವರ್ಷದ ಮೋಹಿತಾ ಮೆದುಳು ನಿಷ್ಕ್ರಿಯವಾಗಿದೆ.

ಇದನ್ನೂ ಓದಿ: ಶಿವಮೊಗ್ಗ: ಮೆಂಟಲ್ ಸೂರಿ ಹತ್ಯೆ ಪ್ರಕರಣ; ಮೃತನ ಮಗನೂ ಸೇರಿ ಮೂವರ ಬಂಧನ

ಕಬ್ಬಾಳು ದೇವಸ್ಥಾನಕ್ಕೆ ತಂದೆ-ಮಗಳು ತೆರಳಿದ್ದರು. ಐಸ್ ಬೇಕು ಎಂದು ಮಗಳು ಕೇಳಿದ್ದಕ್ಕೆ ರಸ್ತೆ ಪಕ್ಕ ಬೈಕ್​ ನಿಲ್ಲಿಸಿದ್ದಾಗ ಕಾರು ಡಿಕ್ಕಿಯಾಗಿದೆ. ಅಪಘಾತದ ಬಳಿಕ ಕಾರು ನಿಲ್ಲಿಸದೇ ಚಾಲಕ ಎಸ್ಕೇಪ್​ ಆಗಿದ್ದಾನೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿಡಿಲು ಬಡಿದು ಹದಿನಾರು ವರ್ಷದ ಬಾಲಕ ಸಾವು

ಕೊಪ್ಪಳ: ಸಿಡಿಲು ಬಡಿದ ಪರಿಣಾಮ ಹದಿನಾರು ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದಲ್ಲಿ ಕುರಿ ಮೇಯಿಸುತ್ತಿದ್ದ ಶ್ರೀನಿವಾಸ್ ಗೊಲ್ಲರ್​ಗೆ ಸಿಡಿಲು ಬಡಿದಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲಬುರ್ಗಾ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಕರಡಿ ದಾಳಿಗೆ ಮತ್ತೋರ್ವ ರೈತ ಬಲಿ

ಕೊಪ್ಪಳ ಜಿಲ್ಲೆಯಲ್ಲಿ ಕರಡಿ ದಾಳಿಗೆ ಮತ್ತೋರ್ವ ಬಲಿಯಾಗಿದ್ದಾನೆ. ಕಳೆದ ಎರಡು ದಿನದಲ್ಲಿ ಇದು ಕರಡಿ ದಾಳಿಗೆ ಎರಡನೇ ಬಲಿಯಾಗಿದೆ. ಕೊಪ್ಪಳ ತಾಲೂಕಿನ ನಾಗೇಶನಹಳ್ಳಿ ಗ್ರಾಮದ ನಿವಾಸಿಯಾಗಿದ್ದ ಈರಪ್ಪ(32) ಕರಡಿ ದಾಳಿಗೆ ತುತ್ತಾಗಿ ಬಲಿಯಾದ ರೈತ.

ಇದನ್ನೂ ಓದಿ: ದಾವಣಗೆರೆ: ಪತ್ನಿ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ ಪತಿ; ವಿಷಯ ತಿಳಿದ ಮಗನಿಂದ ತಂದೆಯ ಬರ್ಬರ ಹತ್ಯೆ

ಜಿಲ್ಲೆಯಲ್ಲಿ ನಿರಂತರವಾಗಿ ಜನರ ಮೇಲೆ ಕರಡಿಗಳು ದಾಳಿ ಮಾಡುತ್ತಿದ್ದು, ಮೇಲಿಂದ ಮೇಲೆ ಅನೇಕರ ಜೀವಗಳು ಹೋಗುತ್ತಿವೆ. ಹೀಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಜನರ ಆಕ್ರೋಶ ಕೂಡ ಹೆಚ್ಚಾಗುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:39 pm, Mon, 29 April 24