ಮದುವೆಗೊಪ್ಪದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಕಾದ ಕಬ್ಬಿಣದಿಂದ ಮುಖದ ಮೇಲೆ ಹೆಸರು ಬರೆದ ಹುಚ್ಚು ಪ್ರೇಮಿ

ಮದುವೆಗೆ ಒಪ್ಪಿಗೆ ನೀಡದ ಕಾರಣಕ್ಕೆ ವ್ಯಕ್ತಿಯೊಬ್ಬ 17 ವರ್ಷದ ಬಾಲಕಿಯ ಮೇಲೆ ಮೂರು ದಿನಗಳ ಕಾಲ ಅತ್ಯಾಚಾರವಿಸಗಿ, ಬಳಿಕ ಕಾದ ಕಬ್ಬಿಣದಿಂದ ಮುಖದ ಮೇಲೆ ತನ್ನ ಹೆಸರು ಬರೆದು ಕುಕೃತ್ಯ ಮೆರೆದಿದ್ದಾನೆ.

ಮದುವೆಗೊಪ್ಪದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಕಾದ ಕಬ್ಬಿಣದಿಂದ ಮುಖದ ಮೇಲೆ ಹೆಸರು ಬರೆದ ಹುಚ್ಚು ಪ್ರೇಮಿ
Follow us
ನಯನಾ ರಾಜೀವ್
|

Updated on:Apr 29, 2024 | 10:23 AM

ನಿಜವಾದ ಪ್ರೀತಿ(Love) ಎಂದರೆ ಜೀವ ತೆಗೆಯುವುದಲ್ಲ ಜೀವ ಉಳಿಸುವಂಥದ್ದು, ಇಲ್ಲೊಬ್ಬ ಹುಚ್ಚು ಪ್ರೇಮಿ ಮದುವೆಗೊಪ್ಪಲಿಲ್ಲ ಎಂದು ಅಪ್ರಾಪ್ತ ಬಾಲಕಿ ಮೇಲೆ ಮೂರು ದಿನಗಳ ಕಾಲ ಅತ್ಯಾಚಾರವೆಸಗಿ ಬಳಿಕ ಕಾದ ಕಬ್ಬಿಣದ ರಾಡ್​ನಿಂದ ಮುಖದ ಮೇಲೆ ಆಕೆಯ ಮುಖದ ಮೇಲೆ ತನ್ನ ಹೆಸರನ್ನು ಬರೆದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಮೂರು ದಿನಗಳ ಕಾಲ ಸೆರೆಯಲ್ಲಿಟ್ಟುಕೊಂಡು ಪದೇ ಪದೇ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. 7 ವರ್ಷದ ಬಾಲಕಿಯನ್ನು ಥಳಿಸಿ, ಬಿಸಿ ಕಬ್ಬಿಣದ ರಾಡ್​ನಿಂದ ಆಕೆಯ ಮುಖದ ಮೇಲೆ ಅಮನ್ ಎಂದು ಬರೆದಿದ್ದಾನೆ.

ಪೊಲೀಸರ ಪ್ರಕಾರ, ಆರೋಪಿಯನ್ನು ಹೈದರಾಬಾದ್​ನ ಸಲೂನ್​ನಲ್ಲಿ ಕೆಲಸ ಮಾಡುವ 22 ವರ್ಷದ ಯುವಕ ಎಂದು ಹೇಳಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಿದ ನಂತರ, ಪೋಕ್ಸೊ ಕಾಯ್ದೆಯ ಜೊತೆಗೆ ಅತ್ಯಾಚಾರಕ್ಕೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಎಫ್‌ಐಆರ್‌ಗೆ ಸೇರಿಸಲಾಯಿತು.

ಮತ್ತಷ್ಟು ಓದಿ: ಮದುವೆಯಾಗು ಎಂದು ಒತ್ತಾಯ, ಕೋಪದಲ್ಲಿ ಮಹಿಳೆಯ ಕೊಲೆ ಮಾಡಿದ ಟ್ಯಾಕ್ಸಿ ಡ್ರೈವರ್

ಆಕೆಯ ಐಡಿ ಕಾರ್ಡ್​ ಸಿಕ್ಕಿರದ ಕಾರಣ ಆಕೆ ಅಪ್ರಾಪ್ತಳು ಹೌದೋ ಅಲ್ಲವೋ ಎನ್ನುವ ಕುರಿತು ನಮಗೆ ಮಾಹಿತಿ ಇರಲಿಲ್ಲ. ನಾವು ಈಗ ಐಪಿಸಿ ಸೆಕ್ಷನ್ 324 ಮತ್ತು 376 (ಅತ್ಯಾಚಾರ) ಜೊತೆಗೆ ಪೋಕ್ಸೋ ಕಾಯ್ದೆಯನ್ನು ಸೇರಿಸಿದ್ದೇವೆ ಎಂದು ಎಸ್‌ಎಚ್‌ಒ (ಧೌರಾಹ್ರಾ) ದಿನೇಶ್ ಸಿಂಗ್ ಹೇಳಿದ್ದಾರೆ.

ಅವಳ ಕುಟುಂಬದ ದೂರಿನ ಆಧಾರದ ಮೇಲೆ ನಾವು ಎಫ್‌ಐಆರ್ ದಾಖಲಿಸಿದ್ದೇವೆ. ಹುಡುಗಿಯ ವೀಡಿಯೊ ಹೇಳಿಕೆಯನ್ನು ದಾಖಲಿಸಲಾಗಿದೆ, ಅದರಲ್ಲಿ ಅವರು ಅಂತಹ ಗಂಭೀರ ಆರೋಪಗಳನ್ನು ಮಾಡಲಿಲ್ಲ. ನ್ಯಾಯಾಲಯದಲ್ಲಿ ಆಕೆ ತನ್ನ ಹೇಳಿಕೆಯನ್ನು ಏಕೆ ಬದಲಾಯಿಸಿದಳು ಎಂಬುದು ನಮಗೆ ತಿಳಿದಿಲ್ಲ. ಆದರೆ, ಆಕೆಯ ಆರೋಪದ ಮೇರೆಗೆ ಇದೀಗ ತನಿಖೆ ಆರಂಭಿಸಿದ್ದೇವೆ. ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:23 am, Mon, 29 April 24