ಬೆಂಗಳೂರು: ನಗರದಲ್ಲಿ ಅಪರಾಧದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ, ಹಣಕ್ಕಾಗಿ ಉದ್ಯಮಿಯ ಪುತ್ರನ ಅಪಹರಣ ಮಾಡಿರುವ ಘಟನೆ ಭಾರತಿನಗರದಲ್ಲಿ ನಡೆದಿದೆ.
ಭಾರತಿನಗರದ ನಿವಾಸಿಯಾಗಿದ್ದ ಉದ್ಯಮಿ ಮೊಹಮ್ಮದ್ ಸಾದಿಕ್ರ 11 ವರ್ಷದ ಮಗ ಮನೆ ಮುಂದೆ ಆಟವಾಡ್ತಿದ್ದ ವೇಳೆ ಅಪಹರಣಕಾರರು ಬಾಲಕನನ್ನು ಕಿಡ್ನ್ಯಾಪ್ ಮಾಡಿದ್ದರು. ಜೊತೆಗೆ, ಸಾದಿಕ್ರ ಬಳಿ 2 ಕೋಟಿ ರೂಪಾಯಿಗೆ ಬೇಡಿಕೆ ಸಹ ಇಟ್ಟಿದ್ದರು.
ಹಾಗಾಗಿ, ಉದ್ಯಮಿ ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಕ್ರಮಕ್ಕೆ ಮುಂದಾದ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ 5 ವಿಶೇಷ ತಂಡಗಳನ್ನು ರಚಿಸಿದರು. ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆಗೆ ಮುಂದಾದರು.
ಇದೀಗ, ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದ್ದು ಕಿಡ್ನಾಪ್ ಆಗಿದ್ದ ಬಾಲಕನನ್ನ ಖಾಕಿ ರಕ್ಷಣೆ ಮಾಡಿದ್ದಾರೆ. ತುಮಕೂರು ಬಳಿ ಕಿಡ್ನಾಪರ್ಸ್ನ ಪೊಲೀಸರು ಬೆನ್ನತ್ತಿ ಹಿಡಿದಿದ್ದಾರೆ. ಸದ್ಯ, ಪೂರ್ವ ವಿಭಾಗ ಪೊಲೀಸರಿಂದ ಮೂವರು ಕಿಡ್ನಾಪರ್ಸ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.