ಭರೂಚ್: ಹೆತ್ತವರ ಮೂಢನಂಬಿಕೆಗಳಿಂದ ಮಗುವೊಂದು ತನ್ನ ಪ್ರಾಣವನ್ನೇ ಕಳೆದುಕೊಂಡಿದೆ. ಅಮ್ಮನ ಪಕ್ಕ ಮಲಗಿದ್ದ ಮಗುವಿಗೆ ಹಾವು ಕಚ್ಚಿದೆ. ಆದರೆ, ಆ ಮಗುವಿನ ಅಪ್ಪ-ಅಮ್ಮ ಹಾವು ಕಚ್ಚಿದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬದಲು ದೆವ್ವ ಬಿಡಿಸುವವರ ಬಳಿ ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಮಗು ಸಾವನ್ನಪ್ಪಿದೆ. ಕಳೆದ ಶುಕ್ರವಾರ ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಈ ದಾರುಣ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗುಜರಾತಿನ ಭರೂಚ್ ಜಿಲ್ಲೆಯ ಅಮೋದ್ ತಾಲೂಕಿನ ಡೋರಾ ಗ್ರಾಮದ ಬರೋಟಾ ರಸ್ತೆಯ ಗುರು ಗೋಬಿಂದ್ ಸಿಂಗ್ ನಗರ ಪ್ರದೇಶದಲ್ಲಿ ಶುಕ್ರವಾರ ಬೆಳಗಿನ ಜಾವ ವಿಷಪೂರಿತ ಹಾವೊಂದು ಮನೆಗೆ ನುಗ್ಗಿದೆ. ಬಳಿಕ ಆ ಮನೆಯ 9 ತಿಂಗಳ ಗಂಡು ಮಗುವಿಗೆ ಕಚ್ಚಿದೆ. ಆದರೆ, ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಮಂತ್ರವಾದಿಯ ಬಳಿ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಬ್ಯಾಗ್ನಲ್ಲಿ 6 ದಿನದ ಹೆಣ್ಣು ಮಗುವಿನ ಶವ ಪತ್ತೆ; ಹೆತ್ತವಳೇ ಹಂತಕಿ
ವೆಲ್ಡಿಂಗ್ ಶಾಪ್ ನಡೆಸುತ್ತಿರುವ ಮಗುವಿನ ತಂದೆ ರಾತ್ರಿ ಊಟ ಮಾಡಿ ಕೋಣೆಯಲ್ಲಿ ಮಲಗಿದ್ದರು. ನೆಲದ ಮೇಲೆ ಹಾಸಿಗೆಗಳನ್ನು ಹಾಕಲಾಯಿತು. ಅದರಲ್ಲಿ ಎಲ್ಲರೂ ಮಲಗಿದರು. ಈ ವೇಳೆ ಕಳೆದ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಲ್ಲಿ ವಿಷಪೂರಿತ ಹಾವೊಂದು ಕೋಣೆಗೆ ನುಗ್ಗಿದೆ. ಅದೇ ಸಮಯದಲ್ಲಿ, ಮಗು ತಾಯಿಯ ಪಕ್ಕದಲ್ಲಿ ಹಾಸಿಗೆಯ ಮೇಲೆ ಮಲಗಿತ್ತು. ಹಾವು ಮನೆಗೆ ನುಗ್ಗಿ ಮಗುವಿಗೆ ಕಚ್ಚಿದೆ. ಹಾವು ಹಿಂದಕ್ಕೆ ಹೋಗುತ್ತಿದ್ದಾಗ ಅದರ ಬಾಲ ಮಗುವಿನ ತಾಯಿಗೆ ಬಡಿದಿದೆ. ಗಾಬರಿಯಿಂದ ತಲೆಯೆತ್ತಿ ನೋಡಿದ ಆಕೆ ವಿಷಪೂರಿತ ಹಾವು ತಿರುಗಾಡುವುದನ್ನು ಕಂಡು ಕಿರುಚಿದ್ದಾಳೆ.
ನಂತರ, ಪಕ್ಕದಲ್ಲಿದ್ದ ಮಗುವಿಗೆ ಕಿವಿಯಿಂದ ರಕ್ತ ಬರುತ್ತಿರುವುದನ್ನು ಗಮನಿಸಿದ ಆಕೆಗೆ ಹಾವು ತನ್ನ ಮಗುವಿಗೆ ಕಚ್ಚಿರುವುದು ಗೊತ್ತಾಗಿದೆ. ಆ ಬಳಿಕ ಹಾವು ಕೊಠಡಿಯಿಂದ ಹೊರಬರುವವರೆಗೂ ಕಾದು ಕುಳಿತ ಆ ಮಹಿಳೆ ಮಗುವನ್ನು ಕರೆದುಕೊಂಡು ದೆವ್ವ ಬಿಡಿಸುವವರ ಬಳಿ ಓಡಿದ್ದಾಳೆ. ಮೂಢನಂಬಿಕೆಗಳಿಂದ ಕಣ್ಣು ಮುಚ್ಚಿ ಕುಳಿತಿದ್ದ ಮಗುವಿನ ಪೋಷಕರು ಪರಿಸ್ಥಿತಿಯನ್ನು ಹದಗೆಡಿಸಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದ ಕಾರಣ ಮಗು ಸಾವನ್ನಪ್ಪಿದೆ.
ಇದನ್ನೂ ಓದಿ: Crime News: ಮಹಿಳೆಯ ಮೇಲೆ ಅತ್ಯಾಚಾರ, ಬೆತ್ತಲೆಯಾಗಿ ಡ್ಯಾನ್ಸ್ ಮಾಡಿಸಿದ ಕಾಮುಕರು
ಈ ಘಟನೆ ಕುರಿತು ವಿಜ್ಞಾನಜಾತ ಸಂಸ್ಥೆಯ ಅಧ್ಯಕ್ಷ ಜಯಂತ್ ಪಾಂಡ್ಯ ಮಾತನಾಡಿ, ದೆವ್ವ ಬಿಡಿಸುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಇತ್ತೀಚಿಗೆ ಬ್ಲಾಖ್ ಮ್ಯಾಜಿಕ್ ವಿರೋಧಿ ಮಸೂದೆಯನ್ನು ಗುಜರಾತ್ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಸರಕಾರ ತಂದಿರುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸರಕಾರದ ಜವಾಬ್ದಾರಿಯೂ ಆಗಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 pm, Wed, 4 September 24