ವೃತ್ತಿ ಜೀವನದ ಕೊನೆಯಲ್ಲಿ ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿದ್ದ ಮಹಿಳಾ ಪಿಎಸ್​​ಐ ಇನ್ನಿಲ್ಲ

ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣೆಯ ಮಹಿಳಾ ಪಿಎಸ್​ಐ ತಮ್ಮ ವೃತ್ತಿ ಜೀವನದ ಕೊನೆಯಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕೆಜಿಎಫ್ ಎಸ್​ಪಿ ಶಾಂತರಾಜು, ಡಿವೈಎಸ್​ಪಿ ಪಾಂಡುರಂಗ ಸೇರಿದಂತೆ ಪೊಲೀಸರಿಂದ ಸಂತಾಪ ಸೂಚಿಸಲಾಗಿದೆ.

ವೃತ್ತಿ ಜೀವನದ ಕೊನೆಯಲ್ಲಿ ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿದ್ದ ಮಹಿಳಾ ಪಿಎಸ್​​ಐ ಇನ್ನಿಲ್ಲ
ವೃತ್ತಿ ಜೀವನದ ಕೊನೆಯಲ್ಲಿ ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿದ್ದ ಮಹಿಳಾ ಪಿಎಸ್​​ಐ ಇನ್ನಿಲ್ಲ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 04, 2024 | 2:52 PM

ಕೋಲಾರ, ಸೆಪ್ಟೆಂಬರ್​​ 04: ಜಿಲ್ಲೆಯ ಕೆಜಿಎಫ್ ನಗರದ ರಾಬರ್ಟ್​​ ಸನ್​​ ಪೇಟೆ ಪೊಲೀಸ್ ಠಾಣೆಯ ಮಹಿಳಾ ಪಿಎಸ್​ಐ (psi) ಕ್ಯಾನ್ಸರ್​​ ಕಾಯಿಲೆನಿಂದ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಗಾಯತ್ರಿ (51) ಕ್ಯಾನ್ಸರ್​ಗೆ ಮೃತಪಟ್ಟ ಪಿಎಸ್​ಐ. ಕಳೆದ 30 ವರ್ಷಗಳಿಂದ ಕೆಜಿಎಫ್ ಪೊಲೀಸ್ ಇಲಾಖೆಯಲ್ಲಿ ಗಾಯತ್ರಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಗಾಯತ್ರಿ ಅವರು ಕೆಜಿಎಫ್ ನಗರದ ರಾಬರ್ಟ್‌ ಸನ್ ಪೇಟೆಯಲ್ಲಿ ನಿವಾಸಿಯಾಗಿದ್ದಾರೆ. ಇನ್ನೂ 9 ವರ್ಷಗಳ ಸೇವಾವಧಿ ಇತ್ತು. ಕೆಜಿಎಫ್​ ಎಸ್​ಪಿ ಶಾಂತರಾಜು, ಡಿವೈಎಸ್​ಪಿ ಪಾಂಡುರಂಗ ಸೇರಿದಂತೆ ಕೆಜಿಎಫ್ ಪೊಲೀಸರಿಂದ ಸಂತಾಪ ಸೂಚಿಸಲಾಗಿದೆ.

ಪೆಟ್ರೋಲ್ ಹಾಕಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ: ಕೊಲೆ ಶಂಕೆ

ಕಾರವಾರ: ಪೆಟ್ರೋಲ್ ಹಾಕಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಆಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡ ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ಪತ್ತೆ ಆಗಿದೆ. ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 35 ವರ್ಷ ವಯಸ್ಸು ಆಸುಪಾಸಿನ ಮಹಿಳೆ ಶವವೆಂದು ಗುರುತಿಸಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಅನಿವಾಸಿ ಭಾರತೀಯ ವೈದ್ಯೆ ಮೇಲೆ ಯೋಗ ಗುರು ಅತ್ಯಾಚಾರ ಪ್ರಕರಣ, ಎಫ್​ಐಆರ್​ನಲ್ಲಿ ಅಚ್ಚರಿಯ ಮಾಹಿತಿ

ಪ್ಯಾಂಟ್ ಧರಿಸಿರುವ ಸ್ಥಿತಿಯಲ್ಲಿರುವ ಮಹಿಳೆ ಶವ ಪತ್ತೆಯಾಗಿದ್ದು, ತಲೆ ಹಾಗೂ ಬೆನ್ನಿನ ಭಾಗ ಸುಟ್ಟು ಕರಕಲಾಗಿದೆ. ಸೊಂಟದ ಮೇಲ್ಭಾಗದಲ್ಲಿ ಯಾವುದೇ ಬಟ್ಟೆ ಇಲ್ಲಿ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಡಾಗ್ ಸ್ಕ್ವಾಡ್​ನಿಂದ ಆರೋಪಿಗಳ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.

ಸರಣಿ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ

ದಾವಣಗೆರೆ: ಸರಣಿ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಹಲವು ದಿನಗಳಿಂದ ಸರಣಿ ಕಳ್ಳತನ ಪ್ರಕರಣದಿಂದ ಜನರು ಭಯಭೀತರಾಗಿದ್ದರು. ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ನ್ಯಾಮತಿ ಟೌನ್, ಸುರಹೊನ್ನೆ, ಗಂಜೇನಹಳ್ಳಿ, ಚಟ್ನಹಳ್ಳಿ, ಗ್ರಾಮಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು.

ಚಿಕ್ಕಬೆನ್ನೂರಿನ ರಾಮು ಅಲಿಯಾಸ್​ ಬುಡ್ಡರಾಮ(40), ಮಾವಿನ ಕಟ್ಟೆಯ ಸಂತೋಷ್(48) ಸೇರಿ ನಾಲ್ಕು ಜನರು ಕಳ್ಳತನ ಮಾಡುತ್ತಿದ್ದರು ರಾಮು ಅಲಿಯಾಸ್​ ಬುಡ್ಡರಾಮನ ಮೇಲೆ ಚಿಕ್ಕಜಾಜೂರು, ಹೊಳಲ್ಕೆರೆ, ಚಿತ್ರದುರ್ಗ ಗ್ರಾಮಾಂತರ, ಅನವಟ್ಟಿ, ಭದ್ರಾವತಿ, ಹರಿಹರ, ಮಾಯಕೊಂಡ, ಚನ್ನಗಿರಿ ಸಂತೆಬೆನ್ನೂರು ಸೇರಿದಂತೆ 25 ಕಳ್ಳತನ ಪ್ರಕಗಳು ದಾಖಲಾಗಿವೆ.

ಇದನ್ನೂ ಓದಿ: ವಸತಿ ಶಾಲೆಯಲ್ಲಿ SSLC ವಿದ್ಯಾರ್ಥಿನಿ ನೇಣಿಗೆ ಶರಣು: ನದಿಯಲ್ಲಿ ಮುಳುಗಿ ಗ್ರಾ.ಪಂ ಸದಸ್ಯ ಸಾವು

ಸದ್ಯ ಆರೋಪಿತಗಳಿಂದ 6.20 ಲಕ್ಷ ಮೌಲ್ಯದ 80.740 ಗ್ರಾಂ ಚಿನ್ನ, 810 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಇನ್ನೂಳಿದ ಆರೋಪಗಳ ಪತ್ತೆಗೆ ನ್ಯಾಮತಿ ಠಾಣೆ ಪೊಲೀಸರು ಮುಂದಾಗಿದ್ದಾರೆ. ನ್ಯಾಮತಿ ಪೊಲೀಸರನ್ನು ಎಸ್​ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ