ಚಿಂಚೋಳಿ: ನಾಲ್ವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ಚಿಂಚೋಳಿ ಪೊಲೀಸರು. ಬಂಧಿತರಿಂದ 3 ಲಕ್ಷ ನಗದು ಸೇರಿ 20 ಲಕ್ಷ ಮೌಲ್ಯದ ವಸ್ತುಗಳು ಕಲಬುರಗಿ ಜಿಲ್ಲೆಯ ಚಿಂಚೋಳಿ ಪೊಲೀಸ್ ಜಪ್ತಿ ಮಾಡಿದ್ದಾರೆ.
ಬಂಧಿತರನ್ನು ರಾಮಾ ಸುಬ್ಬರಾವ್, ಸೂರಜ್, ಗಣೇಶ್, ಬಬ್ಬನ್ ಎಂದು ಗುರುತಿದಲಾಗಿದೆ. ಈ ಕಳ್ಳರು ಮಹಾರಾಷ್ಟ್ರ ರಾಜ್ಯದ ವಿವಿಧ ಹಳ್ಳಿಯ ನಿವಾಸಿಗಳು ಎಂದು ಹೇಳಲಾಗಿದೆ. ಲಾರಿಗಳಲ್ಲಿ ಬಂದು ಟೈರ್ ಅಂಗಡಿಗಳ ಶೆಟರ್ ಮುರಿದು ಟೈರ್ ಗಳನ್ನು ಕದಿಯುತ್ತಿದ್ದ ಗ್ಯಾಂಗ್ ಕಳೆದ ಜುಲೈ ತಿಂಗಳಲ್ಲಿ ಚಿಂಚೋಳಿಯಲ್ಲಿ ಟೈರ್ ಕಳ್ಳತನ ಮಾಡಿದ್ದರು ಈ ಬಗ್ಗೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ ಕಾರ್ಯಚರಣೆ ನಡೆಸಿ ಇದೀಗ ಅವರನ್ನು ಬಂಧಿಸಲಾಗಿದೆ.
ಮಕ್ಕಳ ಕಳ್ಳನೆಂದು ಭಾವಿಸಿ ಅಪರಿಚಿತ ವ್ಯಕ್ತಿಗೆ ಥಳಿಸಿ ಗ್ರಾಮಸ್ಥರು
ಇಂಡಿ: ಮಕ್ಕಳ ಕಳ್ಳನೆಂದು ಭಾವಿಸಿ ಅಪರಿಚಿತ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಇಂಗಳಗಿಯಲ್ಲಿ ನಡೆದಿದೆ. ತಮಿಳುನಾಡಿನ ವಿ.ದಾಮೋತಿರನ್ ಎಂಬುವವರ ಮೇಲೆ ಹಲ್ಲೆ ಮಾಡಲಾಗಿದೆ. ಮಕ್ಕಳ ಕಳ್ಳನೆಂದು ಭಾವಿಸಿ ಕಟ್ಟಿ ಹಾಕಿ ಗ್ರಾಮಸ್ಥರು ಥಳಿಸಿದ್ದಾರೆ. ಇಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಸ್ ವಿಳಂಬ ಪ್ರಶ್ನಿಸಿದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿ
ಕುಷ್ಟಗಿ: ಬಸ್ ವಿಳಂಬ ಪ್ರಶ್ನಿಸಿದಕ್ಕೆ ಪ್ರಯಾಣಿಕನ ಮೇಲೆ ದರ್ಪ ತೋರಿಸಿದ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು. ನಿನ್ಯಾವನಲೇ ಕೇಳೋಕೆ, ಬಸ್ ಬಿಡೋಲ್ಲ ಎನ್ ಮಾಡ್ಕೋತಿ ಎಂದು ಪ್ರಯಾಣಿಕನ ಮೇಲೆ ಹಲ್ಲೆಗೆ ಯತ್ನಿಸಿಲಾಗಿದೆ. ಕೊಪ್ಪಳದ ಕುಷ್ಟಗಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಳಿಗ್ಗೆ 6 ಗಂಟೆಯಿಂದ 7:30 ಆದರೂ ಕೊಪ್ಪಳಕ್ಕೆ ಬಸ್ ಬಿಡದ ಕೆ.ಎಸ್.ಆರ್‌ಟಿ.ಸಿ ಸಿಬ್ಬಂದಿಗಳನ್ನು ಪ್ರಶ್ನೆ ಮಾಡಿದ್ದಾರೆ. ಬಸ್ಗಾಗಿ ಕಾದು ಕಾದು ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ವಿದ್ಯಾರ್ಥಿಗಳ ಪರವಾಗಿ ಬಸ್ ಬಿಡುವಂತೆ ಮನವಿ ಮಾಡಿದ ಪ್ರಯಾಣಿಕನ ಮೇಲೆ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಮುಗಿಬಿದಿದ್ದಾರೆ. ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳು ಈ ಘಟನೆಯ ಬಗ್ಗೆ ಮೊಬೈಲ್ನಲ್ಲಿ ವಿಡಿಯೋ ಮಾಡದಂತೆ ಅವಾಜ್ ಹಾಕಿದ್ದಾರೆ.
Published On - 12:42 pm, Fri, 14 October 22