ಚಿತ್ರದುರ್ಗ: ಕೆಜಿಗೆ 300 ರೂ ಏರಿಕೆ ಬೆನ್ನಲೇ 6 ಲಕ್ಷ ಮೌಲ್ಯದ ಬೆಳ್ಳುಳ್ಳಿ ಕಳ್ಳತನ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 13, 2023 | 4:54 PM

ಬೆಳ್ಳುಳ್ಳಿ ದರ ಹೆಚ್ಚಾಗುತ್ತಿದ್ದಂತೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸುಮಾರು 6 ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನಲ್ಲಿರುವ ದಂಡಿನ ಕುರುಬರಹಳ್ಳಿ ಗ್ರಾಮದ ಬಳಿಯ ಗೋದಾಮಿನಲ್ಲಿ ನಡೆದಿದೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಚಿತ್ರದುರ್ಗ: ಕೆಜಿಗೆ 300 ರೂ ಏರಿಕೆ ಬೆನ್ನಲೇ 6 ಲಕ್ಷ ಮೌಲ್ಯದ ಬೆಳ್ಳುಳ್ಳಿ ಕಳ್ಳತನ
ಬೆಳ್ಳುಳ್ಳಿ ಕಳ್ಳತನ
Follow us on

ಚಿತ್ರದುರ್ಗ, ಡಿಸೆಂಬರ್​​ 13: ಕೆಲ ತಿಂಗಳ ಹಿಂದೆ ಟೊಮೆಟೊ (Tomato) ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಅದೇ ರೀತಿ ಈರುಳ್ಳಿ ಬೆಲೆ ಕೂಡ ಜಾಸ್ತಿ ಆಗಿತ್ತು. ಹಾಗಾಗಿ ಯಾರೂ ಕಳ್ಳತನ ಮಾಡಬಾರದು ಎಂದು ಕಾವಲುಗಾರರನ್ನು ನೇಮಿಸಿದ್ದರು. ಆದರೂ ಹಲವೆಡೆ ಕಳ್ಳತನ ನಡೆದಿದ್ದವು. ಇದೀಗ ಬೆಳ್ಳುಳ್ಳಿ (Garlic) ದರ ಹೆಚ್ಚಾಗುತ್ತಿದ್ದಂತೆ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸುಮಾರು 6 ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನಲ್ಲಿರುವ ದಂಡಿನ ಕುರುಬರಹಳ್ಳಿ ಗ್ರಾಮದ ಬಳಿಯ ಗೋದಾಮಿನಲ್ಲಿ ನಡೆದಿದೆ.

ಜಯಶೀಲರೆಡ್ಡಿ ಎಂಬುವರ ಗೋದಾಮಿನಲ್ಲಿದ್ದ ಬೆಳ್ಳುಳ್ಳಿಯನ್ನು ಕಳ್ಳರು ಕದ್ದೊಯ್ದಿದ್ದಾರೆ. ವ್ಯಾಪಾರಿ ಬಸವ ಕಿರಣ್​​ಗೆ ಸೇರಿದ ಬೆಳ್ಳುಳ್ಳಿ ಇದಾಗಿತ್ತು. ​ಮಧ್ಯ ಪ್ರದೇಶದಿಂದ ಖರೀದಿಸಿ ತಂದು ಗೋದಾಮಿನಲ್ಲಿರಿಸಿದ್ದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗಗನಕ್ಕೇರಿದೆ ಬೆಳ್ಳುಳ್ಳಿ ದರ

ಬೀದರ್: ಜಿಲ್ಲೆಯಲ್ಲಿ ಬೆಳ್ಳುಳ್ಳಿ ದರ ಗಗನಕ್ಕೇರಿದೆ. ಪ್ರತಿ ಕೆಜಿಗೆ 320 ರಿಂದಾ 400 ರವರೆಗೂ ದರ ಏರಿಕೆಯಾಗಿದ್ದು ಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಗ್ರಾಹಕರು ಒಂದು ಕೆಜಿಯಷ್ಟು ಬೆಳ್ಳುಳ್ಳಿ
ಖರೀದಿಸುತ್ತಿದ್ದವರು ಇಂದು ನೂರು ಇನ್ನೂರು ಗ್ರಾಮ ಬೆಳ್ಳುಳ್ಳಿ ಖರೀದಿಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟೊಮೆಟೊ ತುಂಬಿದ್ದ ವಾಹನ ಕಳ್ಳತನ ಪ್ರಕರಣ; ತಮಿಳುನಾಡು ಮೂಲದ ಇಬ್ಬರು ಆರೋಪಿಗಳ ಬಂಧನ

ಬೆಳ್ಳುಳ್ಳಿ ದರ ಏರಿಕೆಯಾಗಿದ್ದು ವ್ಯಾಪಾರಿಗಳಿಗೂ ಕೂಡ ಸಮಸ್ಯೆಯಾಗಿದೆ. ಈ ಬಗ್ಗೆ ವ್ಯಾಪಾರಿಗಳನ್ನ ಕೇಳಿದರೆ ಮಾರುಕಟ್ಟೆಗೆ ಬೆಳ್ಳುಳ್ಳಿ ಬರುವುದು ಕಡಿಮೆಯಾಗಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಕಳುವಾದ ಒಂದು ಬೈಕ್ ಪತ್ತೆಗೆ ತೆರಳಿದ್ದ ಪೊಲೀಸರಿಗೆ ಪತ್ತೆಯಾಗಿದ್ದು 17 ಬೈಕ್

ಶಿವಮೊಗ್ಗ: ದೊಡ್ಡಪೇಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳತನ ನಡೆಸುತ್ತಿದ್ದ ಅಪ್ರಾಪ್ತ ಬಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು 10 ಲಕ್ಷದ 55 ಸಾವಿರ ರೂ ಮೌಲ್ಯದ ವಿವಿಧ ಕಂಪನಿಯ 17 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅಪ್ರಾಪ್ತ ಬಾಲಕ ಹಾಗೂ ಜಬೀವುಲ್ಲಾ ಎಂಬ ಆರೋಪಿ ಇಬ್ಬರು ಸೇರಿಕೊಂಡು ಶಿವಮೊಗ್ಗ, ದಾವಣಗೆರೆ, ಮೈಸೂರು, ಹಾಸನ, ತಿಪಟೂರು ಸೇರಿದಂತೆ ಹಲವೆಡೆ ಬೈಕ್ ಕಳವು ಮಾಡಿದ್ದರು.

ಇದನ್ನೂ ಓದಿ: ಬಂಪರ್ ಬೆಲೆ ನಡುವೆ ಟೊಮೆಟೊ ಬೆಳೆ ನಾಶ ಮಾಡಿದ ಕಿಡಿಗೇಡಿಗಳು, ಕಣ್ಣೀರಾದ ರೈತ ಮಹಿಳೆ

ಶಿವಮೊಗ್ಗದ ಹೋಟೆಲ್ ವೊಂದರ ಬಳಿ ಮೊಪೆಡ್ ಬೈಕ್ ಕಳುವಾಗಿರುತ್ತದೆ. ಈ ಕುರಿತು ಬೈಕ್ ಮಾಲೀಕ ದೊಡ್ಡಪೇಟೆ ಠಾಣೆಗೆ ದೂರು ಸಲ್ಲಿಸಿರುತ್ತಾನೆ. ದೂರು ಸ್ವೀಕರಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಗಳು ಕಳವು ಮಾಡಿದ ಬೈಕ್​ಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಅಪ್ರಾಪ್ತ ಬಾಲಕನಾಗಿದ್ದು, ಆತನ ಜೊತೆಗಿದ್ದ ಜಬೀವುಲ್ಲಾ ಎಂಬ ಮತ್ತೊಬ್ವ ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.