ಪಾಕಿಸ್ತಾನದ ISI ಅಧಿಕಾರಿ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾದ ಬೆಂಗಳೂರಿನ ಬಟ್ಟೆ ವ್ಯಾಪಾರಿ ಅರೆಸ್ಟ್​

| Updated By: ಸಾಧು ಶ್ರೀನಾಥ್​

Updated on: Sep 20, 2021 | 2:02 PM

ಆರ್ಮಿ ಕಮಾಂಡೊ ಯುನಿಫಾರ್ಮ್ ಧರಿಸಿ ಆಪರೇಟ್ ಮಾಡ್ತಿದ್ದ ಆರೋಪಿ ಜಿತೆಂದರ್ ಸಿಂಗ್ ವಾಟ್ಸ್ ಆಪ್ ವಿಡಿಯೋ, ವಾಟ್ಸ್ ಆಪ್ ಮೆಸೆಜ್, ವಾಟ್ಸ್ ಆಪ್ ಕಾಲ್ ಮೂಲಕ ಸಂಪರ್ಕ ಹೊಂದಿದ್ದ.

ಪಾಕಿಸ್ತಾನದ ISI ಅಧಿಕಾರಿ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾದ ಬೆಂಗಳೂರಿನ ಬಟ್ಟೆ ವ್ಯಾಪಾರಿ ಅರೆಸ್ಟ್​
ಆರೋಪಿ ಜಿತೆಂದರ್ ಸಿಂಗ್ ಮತ್ತು ಬೆಂಗಳೂರು‌ ಸಿಸಿಬಿ ಮುಖ್ಯಸ್ಥ ಸಂದೀಪ್​ ಪಾಟೀಲ್
Follow us on

ಬೆಂಗಳೂರು: ಬೆಂಗಳೂರು ಸಿಸಿಬಿ ಮತ್ತು ಮಿಲಿಟರಿ ಗುಪ್ತಚರದ ದಕ್ಷಿಣ ಕಮಾಂಡೊ ಟೀಂ ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮಹೊಲ್ಲಾದಲ್ಲಿ ಆಪರೇಶನ್ ನಡೆಸಿದ್ದು, ಆರೋಪಿ ಜಿತೆಂದರ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಈತ ಮೂಲತಃ ಭಾರತದ ಗಡಿಯಾದ ರಾಜಸ್ಥಾನದ ಬಾರ್ಮೆರ್ ನವನು. ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ. ಈತ ಪಾಕಿಸ್ತಾನದ ISI ಅಧಿಕಾರಿ ಜೊತೆ ಸಂಪರ್ಕ ಹೊಂದಿದ್ದ ಎಂಬ ಆರೋಪ ಕೇಳಿಬಂದಿದೆ.

ಆರ್ಮಿ ಕಮಾಂಡೊ ಯುನಿಫಾರ್ಮ್ ಧರಿಸಿ ಆಪರೇಟ್ ಮಾಡ್ತಿದ್ದ ಆರೋಪಿ ಜಿತೆಂದರ್ ಸಿಂಗ್ ವಾಟ್ಸ್ ಆಪ್ ವಿಡಿಯೋ, ವಾಟ್ಸ್ ಆಪ್ ಮೆಸೆಜ್, ವಾಟ್ಸ್ ಆಪ್ ಕಾಲ್ ಮೂಲಕ ಸಂಪರ್ಕ ಹೊಂದಿದ್ದ. ಈತ ಬಾರ್ಮೆರ್ ಮಿಲಿಟರಿ ಸ್ಟೆಶನ್ ಹಾಗೂ ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದ ಎನ್ನಲಾಗಿದೆ. ಆರ್ಮಿಗೆ ಸಂಬಂಧಿಸಿದ ಫೋಟೊಸ್ ಮತ್ತು ಮಾಹಿತಿ ರವಾನಿಸಿದ್ದ ಅರೋಪಿ.

ಭಾರತೀಯ ಸೇನೆಗೆ ಸಂಬಂಧಿಸಿದ ಅಂತರಾಷ್ಟ್ರೀಯ ಗಡಿ ಪ್ರದೇಶದ ಫೋಟೊಗಳನ್ನು ಈತ ರವಾನಿಸುತ್ತಿದ್ದ. ಭಾರತೀಯ ಸೇನೆಯ ಯೂನಿಫಾರ್ಮ್ ಹಾಕಿಕೊಂಡು ತಾನೂ ಕಮಾಂಡೊ ಅಂತ ಗುರುತಿಸಿಕೊಂಡು ಕೃತ್ಯ ಎಸಗಿದ್ದಾನೆ. ಈತ ಬಾರ್ಮೆರ್ ಮಿಲಿಟರಿ ಸ್ಟೆಶನ್ ಹಾಗೂ ಮಿಲಿಟರಿ ವಾಹನಗಳ ಓಡಾಟದ ಬಗ್ಗೆ ಮಾಹಿತಿ ನೀಡಿದ್ದ.

ಮಿಲಿಟರಿ ಇಂಟೆಲಿಜೆನ್ಸ್ ಮಾಹಿತಿ ಮೇಲೆ ಬೆಂಗಳೂರು‌ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಜಿತೆಂದರ್ ಸಿಂಗ್ ದೇಶದ ಆಯಕಟ್ಟಿನ ಸ್ಥಳಗಳು, ಕಟ್ಟಡ, ರಕ್ಷಣಾ ಸಂಸ್ಥೆಯ ಫೋಟೋ ತೆಗೆಯುತ್ತಿದ್ದ. ಈತ ರಾಜಸ್ಥಾನ ಮೂಲದ ವ್ಯಕ್ತಿ. ತಾನು ತೆಗೆದ ಫೋಟೋಗಳನ್ನು ವಿದೇಶಿ ಏಜೆನ್ಸಿಗಳಿಗೆ ಕಳುಹಿಸಿದ್ದ.

ಆರೋಪಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಕುಕೃತ್ಯ ಎಸಗಿದ್ದ ಎಂದು ತಿಳಿದುಬಂದಿದೆ. ಆದರೆ ಕರ್ನಾಟಕದಲ್ಲಿ ಈ ಕೃತ್ಯ ನಡೆಸಿರಲಿಲ್ಲ. ಬೇರೆ ಕಡೆ ಕೃತ್ಯ ಮಾಡಿಬಂದು ಬೆಂಗಳೂರಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಫಿಶಿಯಲ್ ಸೀಕ್ರೆಟ್‌ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಅಸಲಿಗೆ ಈತನೊಬ್ಬನೆ ಕಾರ್ಯಾಚರಣೆ ಎಸಗಿಲ್ಲ. ಹಲವು ಮಂದಿಗೆ ಈತ ಗಾಳ ಹಾಕಿದ್ದ ಆರೋಪವಿದೆ. ಉತ್ತರ ಭಾರತದಲ್ಲಿ ಪ್ರತ್ಯೇಕ ಕೇಸ್ ಗಳಲ್ಲಿ ಇಬ್ಬರು ನಕಲಿ ಆರ್ಮಿಗಳ ಬಂಧನವಾಗಿತ್ತು. ಇದೇ ಮಾದರಿ ಜೈಪುರ್ ನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಒಬ್ಬನ ಸೆರೆಯಾಗಿತ್ತು. ಹಾಗೂ ಡೆಲ್ಲಿಯಲ್ಲಿ ಜೂನ್ ತಿಂಗಳಿಲ್ಲಿ ಓರ್ವ ಇದೇ ಮಾದರಿ ನಕಲಿ ಆರ್ಮಿಯವನನ್ನು ಬಂಧಿಸಲಾಗಿತ್ತು.

(cloth merchant jitender singh with allegedly pakistan isi links arrested in bangalore)

Published On - 1:38 pm, Mon, 20 September 21