ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಹಿನಾಯ ಕೃತ್ಯ; ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

ಆ ಏರಿಯಾದ ಜನ ರೊಚ್ಚಿಗೆದಿದ್ರು. ಅದೊಬ್ಬನ ವಿರುದ್ಧ ತಿರುಗಿಬಿದ್ದಿದ್ರು. ಪೊಲೀಸ್ ಠಾಣೆ ಎದುರೇ ಜಮಾಯಿಸಿ ಆಕ್ರೋಶ ಹೊರ ಹಾಕಿದ್ರು. ಯಾರ ಮಾತನ್ನೂ ಕೇಳದೆ ಬಿಗಿಪಟ್ಟು ಹಿಡಿದಿದ್ರು. ಯಾಕಂದ್ರೆ, ನೀಚನೊಬ್ಬ ಪುಟ್ಟ ಕಂದನ ಮೇಲೆ ಎರಗಿದ್ದಾನೆ ಅಂತಾ ಜನ ಕೆಂಡಾಮಂಡಲರಾಗಿದ್ರು.

ರಾಜಧಾನಿ ಬೆಂಗಳೂರಲ್ಲಿ ಮತ್ತೊಂದು ಹಿನಾಯ ಕೃತ್ಯ; ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Ayesha Banu

Sep 20, 2021 | 7:22 AM

ಬೆಂಗಳೂರು: ನಿನ್ನೆ(ಸೆಪ್ಟೆಂಬರ್ 19) ಮಧ್ಯಾಹ್ನ ಪೊಲೀಸರಿಗೆ ಒಂದು ದೂರು ಬಂದಿತ್ತು. ಬೆಂಗಳೂರಿನ ಸಂಜಯನಗರ ಏರಿಯಾದಲ್ಲಿ ಐದು ವರ್ಷದ ಪುಟ್ಟ ಬಾಲಕಿ ಮೇಲೆ ನೀಚನೊಬ್ಬ ಎರಗಿದ್ದಾನೆ ಅಂತಾ ಪೋಷಕರು ಆರೋಪಿಸಿದ್ರು. ತಕ್ಷಣ ಅಲರ್ಟ್ ಆದ ಪೊಲೀಸರು ಸ್ಪಾಟ್ಗೆ ವಿಸಿಟ್ ಕೊಟ್ಟಿದ್ರು. ಆರೋಪಿಯನ್ನ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲು ಮುಂದಾಗಿದ್ರು. ಆದ್ರೆ, ಸಂಜಯ್ ನಗರ ಏರಿಯಾದ ಜನ ಒಂದ್ಕಡೆ ಜಮಾಯಿಸಿ, ಆಕ್ರೋಶ ಹೊರ ಹಾಕಿದ್ರು. ಆರೋಪಿಗೆ ಗಲ್ಲು ಶಿಕ್ಷೆ ಆಗ್ಬೇಕು ಅಂತಾ ಘೋಷಣೆ ಕೂಗಿದ್ರು.

ಕಿರಾತಕನ ವಿರುದ್ಧ ಠಾಣೆ ಎದುರೇ ಭುಗಿಲೆದ್ದ ಕಿಚ್ಚು ಪುಟ್ಟ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಸುದ್ದಿ ಗೊತ್ತಾಗ್ತಿದ್ದಂತೆ, ಇಡೀ ಏರಿಯಾದ ಜನ ರೊಚ್ಚಿಗೆದ್ದಿದ್ರು. ನೂರಾರು ಜನ ಪೊಲೀಸ್ ಠಾಣೆ ಎದುರು ಜಮಾಯಿಸಿ, ಆರೋಪಿಯನ್ನ ನಮಗೆ ಒಪ್ಪಿಸಿಬಿಡಿ ನಾವ್ ಅವನಿಗೆ ಶಿಕ್ಷೆ ಕೊಡ್ತೀವಿ ಅಂತಾ ಕಿಡಿಕಾರಿದ್ರು. ಇಷ್ಟೇ ಅಲ್ಲ, ಕ್ಷಣ ಕ್ಷಣಕ್ಕೂ ಪರಿಸ್ಥಿತಿ ಕೈಮೀತಿ ಹೋಗಿತ್ತು. ಈ ನಡುವೆಯೇ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಠಾಣೆ ಬಳಿ ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ಮಾಡಿದ್ರು. ಮತ್ತೊಂದ್ಕಡೆ, ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರು ಪ್ರತಿಭಟನಾ ನಿರತರ ಮನವೊಲಿಸಿ, ಆರೋಪಿ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ರು. ನಾಳೆ ಆರೋಪಿಯನ್ನು ಜಡ್ಜ್‌ ಮುಂದೆ ಹಾಜರುಪಡಿಸಲಾಗುತ್ತೆ.

ಇನ್ನು, ಸಂಜಯ್ ನಗರ ಏರಿಯಾದಲ್ಲಿ ಇತ್ತೀಚೆಗೆ ಗಾಂಜಾ ಗ್ಯಾಂಗ್ನ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರಿಗೆ ಎಷ್ಟೇ ಮನವಿ ಮಾಡಿದ್ರೂ ಕೇರ್ ಮಾಡಿಲ್ಲ. ಆರೋಪಿ ವಿರುದ್ಧ ಪೊಲೀಸರು ಕ್ರಮ ಜರುಗಿಸ್ತಾರಾ ಅನ್ನೋ ನಂಬಿಕೆ ಇಲ್ಲ. ಹೀಗಾಗಿ ಆರೋಪಿಯನ್ನ ನಮಗೆ ಒಪ್ಪಿಸಿ, ನಾವ್ ಶಿಕ್ಷೆ ಕೊಡ್ತೀವಿ ಅಂತಾ ಜನ ಪಟ್ಟು ಹಿಡಿದಿದ್ರು.

ಸದ್ಯ ಆರೋಪಿ 25 ವರ್ಷದ ಪಶ್ಚಿಮ ಬಂಗಾಳದ ಮೂಲದವನಾಗಿದ್ದು, ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ. ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ವರದಿ ವೈದ್ಯರಿಂದ ಪಡೆದ ಕೂಡಲೇ ಪೋಕ್ಸೋ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿ ಮುಂದಿನ ಕಾನೂನು ಕ್ರಮಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: ಮುಂಬೈ ರೇಪ್​ ಕೇಸ್​: ‘ಸಂತ್ರಸ್ತೆ-ಆರೋಪಿಗೆ ಮೊದಲೇ ಪರಿಚಯ ಇತ್ತು..‘-ಪೊಲೀಸರು ಬಿಚ್ಚಿಟ್ಟ ಭಯಾನಕ ಮಾಹಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada