ಒಬ್ಬರನ್ನೊಬ್ಬರು ಬಿಟ್ಟಿರಲಾಗದ ನಂಟು: ಪೋಷಕರು ಬೇಡ ಸ್ನೇಹಿತನೇ ಬೇಕೆಂದ ಯುವತಿ ಮನೆ ಬಿಟ್ಟು ಬಂದ್ಳು!

ಇವರಿಬ್ಬರು ಕಾಲೇಜು ಫ್ರೆಂಡ್ಸ್. ಒಬ್ಬರನ್ನೊಬ್ಬರು ಬಿಟ್ಟಿರಲಾಗದ ನಂಟು. ಪೋಷಕರು ಬೇಡ ಸ್ನೇಹಿತನೇ ಬೇಕೆಂದು ಯುವತಿ ಮನೆ ಬಿಟ್ಟು ಬಂದ್ಳು. ಇಲ್ಲಿದೆ ಇದು ಸ್ನೇಹನಾ ಪ್ರೀತಿನಾ.... ಸ್ಟೋರಿ...

ಒಬ್ಬರನ್ನೊಬ್ಬರು ಬಿಟ್ಟಿರಲಾಗದ ನಂಟು: ಪೋಷಕರು ಬೇಡ ಸ್ನೇಹಿತನೇ ಬೇಕೆಂದ ಯುವತಿ ಮನೆ ಬಿಟ್ಟು ಬಂದ್ಳು!
ಪ್ರಾತಿನಿಧಿಕ ಚಿತ್ರ
Updated By: ರಮೇಶ್ ಬಿ. ಜವಳಗೇರಾ

Updated on: Oct 16, 2022 | 10:59 PM

ಬೆಂಗಳೂರು:  ಹರ್ಷ ಹಾಗೂ ಸ್ನೇಹಾ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಎನ್ನುವ ಯುವಕ-ಯುವತಿ ಬೆಂಗಳೂರಿನ ಖಾಸಗಿ ಕಾಲೇಜ್​ವೊಂದರಲ್ಲಿ ಪ್ರಥಮ ವರ್ಷದ ಡಿಗ್ರಿ ವ್ಯಾಸಾಂಗ ಮಾಡುತ್ತಿದ್ದಾರೆ. ಇಬ್ಬರು ಸ್ನೇಹಿತರಾಗಿದ್ರು. ಆದ್ರೆ, ಇವರಿಬ್ಬರ ಸ್ನೇಹ ಒಬ್ಬರನ್ನು ಒಬ್ಬರು ಬಿಟ್ಟು ಬದುಕಲು ಸಾಧ್ಯವೇ ಇಲ್ಲ ಎಂಬಂತೆ ಗಟ್ಟಿಯಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಸ್ನೇಹಾಳಿಗೆ ತನ್ನ ಪೋಷಕರು ಬೇಕಿಲ್ಲ. ಸ್ನೇಹಿತ ಹರ್ಷ ಬೇಕಂತೆ.

ಹೌದು….ಸ್ನೇಹಿತನಿಗೋಸ್ಕರವಾಗಿ ಸ್ನೇಹಾ ತನ್ನ ಹೆತ್ತ ಪೋಷಕರು ಬೇಡ ಎಂದು ಧಿಕ್ಕರಿಸಿ ಮನೆಬಿಟ್ಟು ಹರ್ಷನ ಮನೆಗೆ ಬಂದಿದ್ದಾಳೆ. ಆದ್ರೆ, ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಗಳನ್ನ ತಮ್ಮ ಜತೆ ಕಳಿಸಿಕೊಡುವಂತೆ ಸ್ನೇಹಾಳ ಪೋಷಕರು ಚಾಮರಾಜಪೇಟೆ ಪೊಲೀಸರಿಗೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

ಶೆಡ್​ನಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರೇಮಿಗಳು: ಬಳಿಕ ನಡೆದಿದ್ದು ಘನ ಘೋರ ದುರಂತ..!

ಆದ್ರೆ, ಸ್ನೇಹಾ ಪೊಲೀಸರ ಮುಂದೆ ಪೋಷಕರ ಜೊತೆ ತೆರಳಲು ನಿರಾಕರಿಸಿದ್ದಾಳೆ. ಹಾಗಾಗಿ ಕೊನೆಗೆ ಚಾಮರಾಜಪೇಟೆ ಪೊಲೀಸರು ಸ್ನೇಹಾಳನ್ನ ರಾಜ್ಯ ಮಹಿಳಾ ವಸತಿ ಗೃಹದ ಸುಪರ್ದಿಗೆ ಒಪ್ಪಿಸಿದ್ದಾರೆ. ಇದರಿಂದ ಮಗಳು ತಮ್ಮ ಜೊತೆ ಬರಲಿಲ್ಲ ಎಂದು ಪೋಷಕರು ನಿರಾಸೆಯಿಂದ ಮನೆಗೆ ವಾಪಸ್ ಆಗಿದ್ದಾರೆ.

ಇತ್ತ ಇಕ್ಕಟ್ಟಿಗೆ ಸಿಲುಕಿದ ಸ್ನೇಹಾಳ ಸ್ನೇಹಿತನಿಗೆ ದಿಕ್ಕುತೋಚದಂತಾಗಿ 15 ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, 10-15 ಪ್ಯಾರಾಸಿಟಮಲ್‌ ಮಾತ್ರೆ ಒಟ್ಟಿಗೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಹರ್ಷ ಅಸ್ವಸ್ಥನಾಗಿದ್ದು, ಆತನನ್ನು ಇದೀಗ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಹರ್ಷ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿರೋಧದ ಮಧ್ಯೆ ಪ್ರೀತಿಸಿ ಮದ್ವೆಯಾದ ಯುವ ಜೋಡಿ ಒಂದೂವರೆ ವರ್ಷಕ್ಕೆ ಪಯಣ ಮುಗಿಸಿತು

ಇಬ್ಬರ ಸ್ನೇಹವನ್ನ ತಪ್ಪು ತಿಳಿದು ಯುವತಿಗೆ ಪೋಷಕರು ಕಿರುಕುಳ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ನೇಹಾ ಪೋಷಕರನ್ನ ಬಿಟ್ಟು ಹರ್ಷ ಮನೆ ಸೇರಿದ್ದಳು ಎಂದು ಎನ್ನಲಾಗಿದೆ. ಈ ಪ್ರಕರಣ ಪೊಲೀಸರಿಗೆ ದಿಕ್ಕುತೋಚದಂತಾಗಿದೆ. ಸದ್ಯ ಯುವತಿ ಪೋಷಕರೊಂದಿಗೆ ಹೋಗಲು ನಿರಾಕರಿಸಿದ್ದಕ್ಕೆ ಅನಿವಾರ್ಯವಾಗಿ ಮಹಿಳಾ ಕೇಂದ್ರಕ್ಕೆ ಕಳುಹಿಸಿದ್ದಾರೆ. ಇನ್ನು ಇಬ್ಬರಿಗೂ ಮದ್ವೆ ಮಾಡಿಸಬೇಕಂದ್ರೆ ಅವರಿಗಿನ್ನೂ ವಯಸ್ಸಾಗಿಲ್ಲ. ಇದರಿಂದ ಪೊಲೀಸರು ಮುಂದೆ ಯಾವ ಸ್ಟೆಪ್ ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಒಟ್ಟಿನಲ್ಲಿ ಹೆತ್ತ-ಹೊತ್ತು ಬೆಳೆಸಿದ ಪೋಷರನ್ನೇ ಧಿಕ್ಕರಿಸಿ ಬಂದಿದ್ದು, ಇದು ಸ್ನೇಹನಾ ಪ್ರೀತಿನಾ…..ಎಂದು ತಿಳಿಯದಂತಾಗಿದೆ.

Published On - 9:25 pm, Sun, 16 October 22