Crime News: ಜೀವಂತ ಹಾವಿಗೆ ಹಿಂಸೆ, ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ವಿರುದ್ಧ ದೂರು

ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸದ್ಗುರು ಹಾವನ್ನ ಹಿಡಿದಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸದ್ಯ ಈಗ ದೂರು ದಾಖಲಾಗಿದೆ.

Crime News: ಜೀವಂತ ಹಾವಿಗೆ ಹಿಂಸೆ, ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ವಿರುದ್ಧ ದೂರು
ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್
Follow us
| Updated By: ಆಯೇಷಾ ಬಾನು

Updated on:Oct 16, 2022 | 11:51 AM

ಚಿಕ್ಕಬಳ್ಳಾಪುರ: ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ವಿರುದ್ಧ ಅರಣ್ಯಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಜಗ್ಗಿ ವಾಸುದೇವ್ ಅವರು ಜೀವಂತ ಹಾವು ಕೈಯಲ್ಲಿ ಹಿಡಿದು ಪ್ರದರ್ಶನ ಮಾಡಿದ್ದ ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿಗೆ ಉರಗತಜ್ಞ ಪೃಥ್ವಿರಾಜ್ ಅವರು ದೂರು ನೀಡಿದ್ದಾರೆ.ಇತ್ತೀಚೆಗೆ ನಡೆದ ನಾಗಮಂಟಪ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸದ್ಗುರು ಹಾವನ್ನ ಹಿಡಿದಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹೀಗಾಗಿ ಉರಗತಜ್ಞ ಪೃಥ್ವಿರಾಜ್ ಸದ್ಗುರು ವಿರುದ್ಧ ದೂರು ದಾಖಲಿಸಿದ್ದಾರೆ.

ಕಲಬುರಗಿಯಲ್ಲಿ ಹೆಚ್ಚಾದ ಬೈಕ್ ಕಳ್ಳರ ಹಾವಳಿ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ. ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ‌ ರೆಕಾರ್ಡ್ ಆಗಿದೆ. ಚಿತ್ತಾಪುರ ಪಟ್ಟಣದ ಕೃಷ್ಣ ಗ್ರಾಮೀಣ ಬ್ಯಾಂಕ್ ಎದುರುಗಡೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಚಿತ್ತಾಪುರ ಪಟ್ಟಣದ ನಿವಾಸಿ ಅಮೃತ ಕ್ಷೀರಸಾಗರ ಎನ್ನುವ ವ್ಯಕ್ತಿಯ ಬೈಕನ್ನು ಕದ್ದು ಖದೀಮರು ತಮ್ಮ ಕೈ ಚಳಕ ತೋರಿಸಿದ್ದಾರೆ. ನಿನ್ನೆ ಬೈಕ್ ನಿಲ್ಲಿಸಿ ಕೃಷ್ಣ ಗ್ರಾಮೀಣ ಬ್ಯಾಂಕ್​ಗೆ ಹೋಗಿ ಬರುವಷ್ಟರಲ್ಲಿಯೇ ಬೈಕ್ ಕಳ್ಳತನವಾಗಿದೆ. ವ್ಯಕ್ತಿಯೋರ್ವ ಬೈಕ್ ಕಳ್ಳತನ ಮಾಡಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Viral Video: ಮೈ ರೋಮ ನೆಟ್ಟಗಾಗುವಂತೆ ಮಾಡುತ್ತಿದೆ ಭೀಕರ ಅಪಘಾತದ ವಿಡಿಯೋ

ಬೈಕ್ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಕಳ್ಳ

ಗದಗ: ನಗರದ ಮುಳಗುಂದ ನಾಕಾದಲ್ಲಿ ಬೈಕ್ ಕಳ್ಳತನ ಮಾಡುವಾಗ ಸಿಕ್ಕಿಬಿದ್ದ ಖದೀಮನಿಗೆ ಸ್ಥಳೀಯರು ಥಳಿಸಿದ್ದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸರಾಫ್ ಬಜಾರ್​ನಲ್ಲಿ ಪಾರ್ಕ್ ಮಾಡಿದ್ದ ಬೈಕ್ ಎಗರಿಸಿದ್ದ ಕಳ್ಳನನ್ನ ಬೆನ್ನಟ್ಟಿ ಸ್ಥಳೀಯರು ಹಿಡಿದು ಥಳಿಸಿದ್ದಾರೆ. ಗದಗ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರೌಡಿಶೀಟರ್ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್​ ರಾಜು ಕಠಾರೆ ಅಲಿಯಾಸ್​​ ಬೆಂಗಳೂರು ರಾಜಾನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆ ಕಾಂತಾ ಕಠಾರಿ ಌಂಡ್​ ಗ್ಯಾಂಗ್ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ರಾಜು ಕಠಾರಿ ಕಿಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: Hassan Accident: ಯಾವ ದೇವರಿಗೂ ಕಣ್ಣಿಲ್ಲ, ಎಲ್ರೂ ಹೋಗ್​ಬಿಟ್ರು; ನಿಲ್ಲುತ್ತಿಲ್ಲ ಮಕ್ಕಳ ಶವ ಕಂಡವರ ಕಣ್ಣೀರು

ಮಾಚಕನೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

ಬಾಗಲಕೋಟೆ: ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಈ ಚಿರತೆ ಒಂದು ಮೇಕೆ ಹಾಗೂ ಒಂದು ಕುರಿ ಬೇಟೆಯಾಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ದೌಡಾಯಿಸಿದ್ದು ಹೆಜ್ಜೆ ಗುರುತಿನ ಮೂಲಕ ಚಿರತೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ. ಮಾಚಕನೂರು ಹಾಗೂ ಬುದ್ನಿ ಬಿಕೆ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಜನರು ಎಚ್ಚರದಿಂದ ಇರುವಂತೆ ಗ್ರಾಮ ಪಂಚಾಯತಿ ಡಂಗುರ ಸಾರಿಸುವ ಮೂಲಕ ತಿಳಿಸಿದೆ. ಹೊಲದಲ್ಲಿ ವಸತಿ ಇರುವ ಜನರಿಗೆ ರಾತ್ರಿ ಹೊತ್ತು ಅಡ್ಡಾಡದಂತೆ ಎಚ್ಚರಿಕೆ ನೀಡಲಾಗಿದೆ.

ಅಕ್ರಮ ಗಾಂಜಾ ಗಿಡ ಬೆಳೆದ ಆರೋಪ ವ್ಯಕ್ತಿ ವಶಕ್ಕೆ

ಮೈಸೂರು: ಟಿ.ನರಸೀಪುರ ತಾಲೂಕಿನ ದೊಡ್ಡೇಬಾಗಿಲು ಮೋಳೆ ಗ್ರಾಮದ ಬಳಿ ತೋಟದಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಶಂಕರಶೆಟ್ಟಿ ಬಂಧಿಸಲಾಗಿದೆ. ನಂಜನಗೂಡು ವಿಭಾಗದ ಅಬಕಾರಿ ಅಧಿಕಾರಿಗಳು 4 ಕೆಜಿಗೂ ಹೆಚ್ಚು ಮೌಲ್ಯದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.

Published On - 11:51 am, Sun, 16 October 22

ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಆ್ಯಪಲ್ ಐಫೋನ್ 15 ಜತೆ ₹6,900 ಮೌಲ್ಯದ ಬೀಟ್ಸ್ ಬಡ್ಸ್ ಫ್ರೀ!
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಮೈಸೂರು ದಸರಾ 2024: ಬಗೆ ಬಗೆಯ ರಂಗೋಲಿಗಳಿಂದ ಶೃಂಗಾರಗೊಂಡ ಅರಮನೆ ಆವರಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಜಿಟಿ ದೇವೇಗೌಡರ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ನೇಹಮಯಿ ಕೃಷ್ಣ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ಗೃಹಲಕ್ಷ್ಮೀಯರಿಗೆ ದಸರಾ ಗಿಫ್ಟ್: ನವರಾತ್ರಿಗೆ ಮಹಿಳೆಯರ ಖಾತೆಗೆ ಹಣ ಜಮೆ
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ವಿಡಿಯೋ: ಅಲ್ಲೂರಿ ಜಿಲ್ಲೆಯ ನದಿಯಲ್ಲಿ ತೇಲಿಬಂದ ಆಂಜನೇಯ ಸ್ವಾಮಿ ವಿಗ್ರಹ!
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಕುಮಾರಸ್ವಾಮಿ ವಿರುದ್ಧ ಎಫ್​ಐಆರ್: ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದೇನು?
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೈಸೂರು ದಸರಾ: ಹೇಗಿದೆ ನೋಡಿ ಹಳೇ ಬೈಕ್​ಗಳ ಸವಾರಿ!
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
ಮೃಗಗಳಂತೆ ವರ್ತಿಸಿದ ಸ್ಪರ್ಧಿಗಳಿಗೆ ಬಿಗ್ ಬಾಸ್ ನೀತಿ ಪಾಠ
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
Daily Devotional: ನಂಬಿಕೆ ದ್ರೋಹ ಮಾಡಿದ್ರೆ ಪರಿಣಾಮ ಹೇಗಿರುತ್ತೆ ಗೊತ್ತಾ?
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ 2ನೇ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ