AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಮಾನ ಅನ್ನೋ ಭೂತ: ಚಾಕುವಿನಿಂದ ಚುಚ್ಚಿದ..ಕಲ್ಲಿಗೆ ಗುದ್ದಿಸಿದ..ಪಾಗಲ್ ಪತಿ ಅಟ್ಟಹಾಸ

ಜನರ ಓಡಾಟ ಇತ್ತು..ವಾಹನಗಳ ಸಂಚಾರವೂ ಕಾಣ್ತಿತ್ತು. ಆ ರಸ್ತೆ ಬ್ಯುಸಿಯಾಗಿ ಇರೋವಾಗ್ಲೇ ಅಲ್ಲಿ ಡೆಡ್ಲಿ ಅಟ್ಯಾಕ್‌ ಆಗಿತ್ತು. ಕೈಯಲ್ಲಿ ಚಾಕು ಹಿಡಿದವನು ಆಕೆಯ ಮೇಲೆ ಹತ್ತಾರು ಬಾರಿ ಅಟ್ಯಾಕ್‌ ಮಾಡಿದ್ದ. ಅಷ್ಟಕ್ಕೂ ಅಲ್ಲಿ ರಕ್ಕಸ ಕೃತ್ಯ ಎಸಗಿದ್ದು ಯಾರು..? ಅಟ್ಟಹಾಸಕ್ಕೆ ಕಾರಣ ಏನು ಅನ್ನೋ ಡಿಟೇಲ್ಸ್‌ ಇಲ್ಲಿದೆ.

ಅನುಮಾನ ಅನ್ನೋ ಭೂತ: ಚಾಕುವಿನಿಂದ ಚುಚ್ಚಿದ..ಕಲ್ಲಿಗೆ ಗುದ್ದಿಸಿದ..ಪಾಗಲ್ ಪತಿ ಅಟ್ಟಹಾಸ
ಸಾಂದರ್ಭಿಕ ಚಿತ್ರ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Oct 15, 2022 | 10:38 PM

Share

ಹೊಸಕೋಟೆ: ಈ ಘನ ಘೋರವನ್ನ ನೋಡೋಕೆ ಆಗಲ್ಲ…ಇಲ್ಲಿ ಕಾಣ್ತಿರೋ ಅಟ್ಟಹಾಸವೇ ಎದೆ ಝಲ್‌ ಎನ್ನಿಸುತ್ತೆ…ಯಾಕಂದ್ರೆ ಕೈಯಲ್ಲಿ ಚಾಕು ಹಿಡಿದಿದ್ದವನು ಪತ್ನಿಯ ಮೇಲೆಯೇ ಎರಗಿದ್ದ. ಹತ್ತಾರು ಬಾರಿ ಚುಚ್ಚಿದವನು, ಕಲ್ಲಿನಿಂದಲೂ ಅಟ್ಯಾಕ್‌ ಮಾಡಿದ್ದ. ಕೊನೆಗೆ ತಾನು ಕೂಡಾ ಸೂಸೈಡ್​ಗೆ ಯತ್ನಿಸಿದ್ದ. ಇಷ್ಟೆಲ್ಲಾ ರಕ್ತಮಯ ಸೀನ್‌ಗೆ ಕಾರಣವಾಗಿದ್ದೇ ಅನುಮಾನ ಅನ್ನೋ ಭೂತ.

ಹೌದು…ಅವರಿಬ್ಬರು ಗಂಡ ಹೆಂಡತಿ ಏಳು ವರ್ಷಗಳಿಂದೆ ಪ್ರೀತಿಸಿ ಸಪ್ತಪದಿ ತುಳಿದಿದ್ದು ಒಂದು ವರ್ಷದಿಂದೆ ಗಂಡನ ಅನುಮಾನದ ರೋಗದಿಂದ ಇಬ್ಬರು ದೂರವಾಗಿದ್ರು,. ಈ ನಡುವೆ ಎರಡು ದಿನಗಳಿಂದೆ ಪತ್ನಿ ಬೇಕು ಅಂತ ಬಂದ ಪತಿರಾಯ ಹೆಂಡತಿ ಜೊತೆ  ಚೆನ್ನಾಗಿದ್ದ. ಆದ್ರೆ ಎಲ್ಲ ಸರಿಹೋಗ್ತಿದೆ ಅಂದುಕೊಳ್ಳುವಷ್ಟರಲ್ಲೇ ಇಂದು(ಅ.15) ಪತಿ ತನ್ನ ಕ್ರೂರ ರೂಪವನ್ನ ತೋರಿಸಿದ್ದು, ಪತ್ನಿ ಸಾವು ಬದುಕಿನ ನಡುವೆ ಹೋರಾಡ್ತಿದ್ರೆ ತಾನು ಆಸ್ವತ್ರೆ ಪಾಲಾಗಿದ್ದಾನೆ.

ಶೆಡ್​ನಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರೇಮಿಗಳು: ಬಳಿಕ ನಡೆದಿದ್ದು ಘನ ಘೋರ ದುರಂತ..!

ಕೈಹಿಡಿದ ಪತ್ನಿ ಮೇಲೆಯೇ ಇವನು ಅಟ್ಯಾಕ್‌ ಮಾಡ್ತಿದ್ರೆ, ಅಲ್ಲಿದ್ದ ಜನರೆಲ್ಲಾ ಬೆದರಿನಿಂತಿದ್ರು. ಹತ್ತಿರ ಹೋದ್ರೆ ನಮಗೂ ಒಂದು ಗತಿ ಕಾಣಿಸ್ತಾನೆ ಅಂತಾ ಹೆದರಿಕೊಂಡಿದ್ರು. ಅಷ್ಟಕ್ಕೂ ಇದು ನಡೆದಿದ್ದು ಹೊಸಕೋಟೆ ಬಳಿ.

ಆಂಧ್ರ ಮೂಲದ ರಮೇಶ್ ಎಂಬಾತ ಹೊಸಕೋಟೆಯಲ್ಲೇ ವಾಸವಾಗಿದ್ದ . ಅರ್ಶಿತ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ . 7 ವರ್ಷದ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ . ಇದರ ನಡುವೆ ಪತ್ನಿ ಮೇಲೆ ಅನುಮಾನ ಪಟ್ಟ ರಮೇಶ್‌ ಆಕೆಯಿಂದ ದೂರವಾಗಿದ್ದ. ಹೀಗೆ ಇಬ್ಬರು ಡಿವೋರ್ಸ್‌ಗೆ ಸಿದ್ದವಾಗಿದ್ದರು . ಆದ್ರೆ ಎರಡು ದಿನದ ಹಿಂದೆ ರಮೇಶ್‌ ಮತ್ತೆ ಅರ್ಶಿತಾಳನ್ನ ಹುಡುಕಿಕೊಂಡು ಬಂದಿದ್ದ. ಇನ್ಮುಂದೆ ಚೆನ್ನಾಗಿ ಬಾಳೋಣ ಅಂತಾ ಹೇಳಿ ಸುತ್ತಾಡಿದ್ದ. ಆದ್ರೆ ಇವತ್ತು ಮಾತ್ರ ರಕ್ಕಸನಾಗಿದ್ದ.

ಪತ್ನಿ ಮೇಲೆ ಅಟ್ಯಾಕ್‌ ಬಳಿಕ ಅತ್ಮಹತ್ಯೆ ಯತ್ನ

ಕಳೆದ ಎರಡು ದಿನಗಳ ಹಿಂದೆ ಹೊಸಕೋಟೆಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶಕ್ಕೆ ಬಂದ ರಮೇಶ್‌, ಪತ್ನಿ ಮಕ್ಕಳ ಜೊತೆ ಇರೋದಾಗಿ ನಂಬಿಸಿ ಓಡಾಡಿಕೊಂಡಿದ್ದ. ಆದ್ರೆ ಇಂದು(ಅ.15) ಸಂಜೆ ಪಿಲ್ಲಗುಂಪೆ ಬಳಿಯ ಅಂಗಡಿಗೆ ಕರೆದುಕೊಂಡು ಬಂದ ಪತಿರಾಯ ,ಆಕೆಯ ಮೇಲೆ ಚಾಕು ಮತ್ತು ಕಲ್ಲಿನಿಂದ ನಡೆಸಿದ್ದ . 15 ಕ್ಕೂ ಹೆಚ್ಚು ಬಾರಿ ದೇಹದ ವಿವಿಧ ಭಾಗಕ್ಕೆ ಚುಚ್ಚಿ ರಕ್ತ ಹರಿಸಿದ್ದಾನೆ. ಬಳಿಕ ತಾನೂ ಕೂಡಾ ಹೊಟ್ಟೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ . ರಕ್ತದ ಮಡುವಿನಲ್ಲಿ ಬಿದ್ದಿದ್ದ ದಂಪತಿಯನ್ನ ಸೂಲಿಬೆಲೆ ಠಾಣೆ ಪೊಲೀಸರು ಆಸ್ಪತ್ರೆಗೆ ರವಾನಿಸಿದ್ದಾರೆ .

ಗಾಂಜಾ ಮತ್ತಿನಲ್ಲೇ ರಮೇಶ್‌ ಈ ಕೃತ್ಯ ಎಸಗಿರೋ ಶಂಕೆ ಇದ್ದು, ಕೇಸ್‌ ದಾಖಲಿಸಿಕೊಂಡಿರೋ ಪೊಲೀಸರು, ಇಬ್ಬರು ಚೇತರಿಸಿಕೊಂಡ ಬಳಿಕ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

Published On - 10:31 pm, Sat, 15 October 22