ಶೆಡ್​ನಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರೇಮಿಗಳು: ಬಳಿಕ ನಡೆದಿದ್ದು ಘನ ಘೋರ ದುರಂತ..!

ಹುಚ್ಚುಕೊಡಿ ವಯಸ್ಸಿನ ಪ್ರೀತಿಯಲ್ಲಿ ಮುಳಗಿದ್ದ ಬಾಲಕಿ ಹಾಗೂ ಯುವಕ ಯಮನ ಪಾದ ಸೇರಿದ್ದಾರೆ. ಈ ಸ್ಟೋರಿ ನಟ ರವಿಚಂದ್ರನ್ ಅವರ ದೃಶ್ಯ ಸಿನಿಮಾ ಮೀರಿಸುವಂತಿದೆ.

ಶೆಡ್​ನಲ್ಲಿ ರೆಡ್​ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರೇಮಿಗಳು: ಬಳಿಕ ನಡೆದಿದ್ದು ಘನ ಘೋರ ದುರಂತ..!
ಸಾವನ್ನಪ್ಪಿದ ಪ್ರೇಮಿಗಳು
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 15, 2022 | 8:36 PM

ವಿಜಯಪುರ: ಕೊಲೆ, ಸುಲಿಗೆ, ರಕ್ತಪಾತಕ್ಕೆ ಕುಖ್ಯಾತಿಯಾದ ವಿಜಯಪುರ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ವಯಸ್ಸಿನ ಮಗಳನ್ನು ಪ್ರೀತಿಸಿದ ಯುವಕನನ್ನು ಕೊಲೆ ಮಾಡಿದ್ದಾರೆ. ಹುಚ್ಚುಕೊಡಿ ವಯಸ್ಸಿನ ಪ್ರೀತಿಯಲ್ಲಿ ಮುಳಗಿದ್ದ ಬಾಲಕಿ ಹಾಗೂ ಯುವಕ ಯಮನ ಪಾದ ಸೇರಿದ್ದಾರೆ. ಥೇಟ್ ಸಿನೆಮಾ ಕಥೆಯಂತಿರೋ ಈ ಲವ್ ಸ್ಟೋರಿ ಮರ್ಯಾದೆ ಹತ್ಯೆಯಾಗುವುದರೊಂದಿಗೆ ದುರಂತ ಅಂತ್ಯ ಕಂಡಿದೆ. ಮರ್ಯಾದೆ ಹತ್ಯೆಯ ಆರೋಪಿಗಳು ಇದೀಗ ಅಂದರ್ ಆಗಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಈ ಕೆಳಗಿನಂತಿದೆ ನೋಡಿ.

ಅಪ್ರಾಪ್ತ ವಯಸ್ಸಿನ ಮಗಳು ಪ್ರಿಯಕರ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದವನಿಗೆ ತಕ್ಕ ಪಾಠ ಕಲಿಸಲು ಹೋಗಿ ದೊಡ್ಡ ಅವಾಂತರವನ್ನೇ ಮಾಡಿದ್ಧಾರೆ. ಇದೊಂದು ಎಳಸು ಪ್ರೇಮ ಕಹಾನಿ. ಬಸ್ ನಲ್ಲಿ ಹುಟ್ಟಿದ್ದ ಪ್ರೇಮಗೀತೆ ಇದೀಗ ಶೋಕಗೀತೆಯಾಗಿದೆ. ಕಾರಣ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಬಾಲಕಿಯ ತಂದೆ ಹಾಗೂ ಮಾವ ಸೇರಿ ಕೊಲೆ ಮಾಡಿದ್ದಾರೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಘೋಣಸಗಿ ಗ್ರಾಮದ 19 ವರ್ಷದ ಮಲ್ಲಿಕಾರ್ಜುನ ಜಮಖಂಡಿ ಹಾಗೂ ದ್ವಿತೀಯ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ( ಗಾಯತ್ರಿ ) ಬಾಲಕಿಗೂ ಲವ್ವಿ ಡವ್ವಿ ಕಳೆದ ಎರಡು ವರ್ಷದಿಂದ ಶುರುವಾಗಿತ್ತು.

ಪ್ರೀತಿಸಿ ಕೈಕೊಟ್ಟ ಟೀಚರ್, ಮನನೊಂದು ಆತ್ಮಹತ್ಯೆ ಮಾಡಿಕೊಂಡ 10ನೇ ಕ್ಲಾಸ್ ಸ್ಟುಡೆಂಟ್

ಕಾಲೇಜಿಗೆ ಹೋಗುವ ನೆಪದಲ್ಲಿ ಇಬ್ಬರೂ ವಿಜಯಪುರ ನಗರದ ಗೋಲಗುಮ್ಮಟ ಸೇರಿದಂತೆ ಕಂಡ ಕಂಡಲ್ಲಿ ಕೈ ಕೈ ಹಿಡಿದುಕೊಂಡು ಸುತ್ತಾಡಿದ್ದರು. ಈ ವಿಚಾರ ಇಬ್ಬರ ಮನೆಯಲ್ಲಿ ಗೊತ್ತಾಗಿತ್ತು. ಇದೇ ವಿಚಾರ ಗುರು ಹಿರಿಯರ ಸಮ್ಮುಖದಲ್ಲಿ ರಾಜೀ ಪಂಚಾಯತಿ ಆಗಿತ್ತು. ಇಲ್ಲಿಯೇ ಇದ್ದರೆ ನಮ್ಮ ಮಗಾ ದಾರಿ ಬಿಡುತ್ತಾನೆ. ಆತನನ್ನು ಸೇನೆಗೆ ಸೇರಿಸಬೇಕು ಎಂದುಕೊಂಡಿದ್ದ ಯುವಕ ಮಲ್ಲಿಕಾರ್ಜುನ ಫೋಷಕರು ನೆರೆಯ ಬಾಗಲಕೋಟೆ ಜಿಲ್ಲೆ ಬನಹಟ್ಟಿಯಲ್ಲಿರುವ ಸಂಬಂಧಿಕರಿಗೆ ಸೇರಿದ ಸೇನಾ ತರಬೇತಿ ಕೇಂದ್ರಕ್ಕೆ ಸೇರಿಸಿದ್ದರು.

ಇಷ್ಟರ ಮದ್ಯೆ ಮೊಬೈಲ್ ನಲ್ಲಿ ಮಲ್ಲಿಕಾರ್ಜುನ ಹಾಗೂ ಅಪ್ರಾಪ್ತೆ (ಗಾಯತ್ರಿ) ಸಂಪರ್ಕದಲ್ಲಿದ್ದರು. ನಂತರ ಕಳೆದ ಸಪ್ಟೆಂಬರ್ 15 ರಂದು ದ್ವಿತೀಯ ಬಿಎ ಸೆಮಿಸ್ಟರ್ ಪರೀಕ್ಷೆಗಾಗಿ ಸೇನಾ ತರಬೇತಿ ಕೇಂದ್ರದಿಂದ ಮನೆಗೆ ಬಂದಿದ್ದ ಮಲ್ಲಿಕಾರ್ಜನ ಸಪ್ಟೆಂಬರ್ 22 ರ ರಾತ್ರಿ ಬೈಕ್ ಸಮೇತ ಮನೆಯಿಂದ ರಾತ್ರಿ ಹೋದವ ನಾಪತ್ತೆಯಾಗಿದ್ದ. ಅತ್ತ ಬಾಲಕಿಯೂ ಸಹ ಆಕೆಯ ಮನೆಯಿಂದ ನಾಪತ್ತೆಯಾಗಿದ್ದಳು. ಇಬ್ಬರೂ ಎಲ್ಲಿಯೋ ಓಡಿ ಹೋಗಿದ್ದಾರೆಂದು ಎರಡೂ ಮನೆಯವರು ತಿಳಿದುಕೊಂಡಿದ್ದರು. ಜೊತೆಗೆ ಬಾಲಕಿಯ ಪೋಷಕರು ನಮ್ಮ ಮಗಳನ್ನು ಮಲ್ಲಿಕಾರ್ಜುನ ಜಮಖಂಡಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆಂದು ದೂರು ನೀಡಿದ್ದರು. ಮಲ್ಲಿಕಾರ್ಜುನ ಮನೆಯವರು ನಮ್ಮ ಮಗ ಕಾಣೆಯಾಗಿದ್ದಾನೆಂದು ತಿಕೋಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸೈನಿಕ ತರಬೇತಿ ಶಾಲೆಯ ಸೀಲ್​ನಿಂದ ಪ್ರಕರಣ ಬಯಲಿಗೆ

ನಾಪತ್ತೆಯಾಗಿದ್ದ ಯುವಕ ಮಲ್ಲಿಕಾರ್ಜುನ ಹಾಗೂ ಅಪ್ರಾಪ್ತ ಬಾಲಕಿಗಾಗಿ ತಿಕೋಟಾ ಪೊಲೀಸರು ಸಹ ತನಿಖೆ ನಡೆಸಿದ್ದರು. ಆದರೆ ಇಬ್ಬರ ಸುಳಿವು ಮಾತ್ರ ಯಾರಿಗೂ ಸಿಕ್ಕಿರಲಿಲ್ಲ. ಅದು ಅಕ್ಟೋಬರ್ 10 ನೆರೆಯ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹದರಿಹಾಳ ಗ್ರಾಮದ ಬಳಿಯ ಕೃಷ್ಣಾ ನದಿಯ ತಟದಲ್ಲಿ ಮೂಟೆಯಲ್ಲಿ ಶವವೊಂದು ಸಿಕ್ಕಿತ್ತು. ಅದನ್ನು ತೆರೆದು ನೋಡಿದ ಬೀಳಗಿ ಪೊಲೀಸರು ಶವ ಯಾರದ್ದೆಂದು ಕಂಡು ಹಿಡಿಯಲು ಮುಂದಾಗಿದ್ದರು. ಶವ ಬಹುತೇಕ ಕೊಳೆತು ಹೋಗಿತ್ತು. ಶವದ ಮೇಲಿದ್ದ ಟೀ ಶರ್ಟ್ ಮೇಲಿದ್ದ ಸೈನಿಕ ತರಬೇತಿ ಶಾಲೆಯ ಸೀಲ್ ನೋಡಿ ತರಬೇತಿ ಶಾಲೆಯ ಮುಖಸ್ಥರಿಗೆ ಕರೆ ಮಾಡಿದ್ದಾರೆ.

ಆಗ ವಿಚಾರ ಮಾಡಿದಾಗ ಕಾಣೆಯಾದ ಮಲ್ಲಿಕಾರ್ಜುನ ಜಮಖಂಡಿ ಶವವೆಂದು ಗುರುತಿಸಿದ್ದಾರೆ. ಶವದ ಮೈಮೇಲಿದ್ದ ಬಟ್ಟೆ, ಕೈಲಿದ್ದ ವಾಚ್ ಹಾಗೂ ಇತರ ವಸ್ತುಗಳನ್ನು ನೋಡಿದ ಬಾಲಕ ಪೋಷಕರು ಇದು ಮಲ್ಲಿಕಾರ್ಜುನ ಶವವೆಂದು ಗುರುತಿಸಿದ್ದಾರೆ. ಇದಕ್ಕೆಲ್ಲಾ ಕಾರಣ ಬಾಲಕಿಯ ತಂದೆ ಹಾಗೂ ಮನೆಯವರು ಎಂದು ಆರೋಪ ಮಾಡಿದ್ದಾರೆ. ನಾವು ಬೇರೆ ಜಾತಿಯವರು ಬಾಲಕಿ ಬೇರೆ ಜಾತಿಯವಳಾಗಿದ್ದಳು. ನಾವು ತುಂಬಾ ಬಡವರಾಗಿದ್ದೇವೆ. ಬಾಲಕಿಯ ತಂದೆ ಸ್ಥಿತಿವಂತರಾಗಿದ್ದಾರೆ. ಬಡವರ ಮಗ ಹಾಗೂ ಅನ್ಯ ಜಾತಿಯವನ್ನು ನಮ್ಮ ಮಗಳು ಪ್ರೀತಿಸಿದಳಲ್ಲಾ ಎಂದು ಮರ್ಯಾದೆಗಾಗಿ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಕೊಲೆಯಾದ ಬಾಲಕನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಮಲ್ಲಿಕಾರ್ಜುನನ ಶವ ಸಿಕ್ಕಿದೆ, ಆದರೆ ಗಾಯತ್ರಿ ಎಲ್ಲಿದ್ದಾಳೆ. ಆಕೆಯನ್ನೂ ಕೊಲೆ ಮಾಡಿದ್ದಾರಾ? ಅಥವಾ ಆಕೆಯನ್ನು ಬಚ್ಚಿಟ್ಟು ನಾಟಕ ಮಾಡುತ್ತಿದ್ದಾರಾ ಎಂಬಿತ್ಯಾದಿ ಪ್ರಶ್ನೆಗಳು ಕೊಲೆಯಾದ ಯುವಕನ ಪೋಷಕರು ಮಾಡಿದ್ದಾರೆ.

ಯಾವಾಗ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಹದರಿಹಾಳ ಗ್ರಾಮದ ಬಳಿಯ ಕೃಷ್ಣಾ ನದಿಯ ತಟದಲ್ಲಿ ಮೂಟೆಯಲ್ಲಿ ಮಲ್ಲಿಕಾರ್ಜುನನ ಶವ ಸಿಕ್ಕಿತೋ ಆಗ ಬೀಳಗಿ ಪೊಲೀಸರು ಬಾಲಕಯ ತಂದೆ ಮೇಲೆ ಸಂಶಯ ವ್ಯಕ್ತಪಟ್ಟಿದ್ದರು. ಜೊತೆಗೆ ಶವವಾಗಿ ಸಿಕ್ಕ ಮಲ್ಲಿಕಾರ್ಜುನ ಜಮಖಂಡಿ ಪೋಷಕರ ಆರೋಪದ ಮೇಲೆ ಬಾಲಕಿ ತಂದೆ ಗುರಪ್ಪ ಗಿಡ್ಡನ್ನವರನ್ನು ವಿಚಾರಣೆ ಕರೆದು ವಿಚಾರಿಸಿದ್ಧಾರೆ. ಪೊಲೀಸರ ವಿಚಾರಣೆಯಲ್ಲಿ ಗುರಪ್ಪ ಗಿಡ್ಡನ್ನವರ ಭಯಾನಕ ಕಥೆಯನ್ನೇ ಬಾಯಿ ಬಿಟ್ಟಿದ್ದಾನೆ.

ಅದು ಕಳೆದ ಸಪ್ಟೆಂಬರ್ 22 ರ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದೆವು. ತಡರಾತ್ರಿ ನಮ್ಮ ಮನೆಯ ಬಾಗಿಲು ತೆರೆದಂತೆಕಂಡಿತ್ತು. ಹೊರಗಡೆ ಬಂದು ನೋಡಿದಾಗ ಮನೆಯ ಪಕ್ಕದ ತಗಡಿನ ಶೆಡ್ ನಲ್ಲಿ ನನ್ನ ಮಗಳು ( ಗಾಯತ್ರಿ ) ಆಕೆಯ ಪ್ರೇಮಿ ಮಲ್ಲಿಕಾರ್ಜನನ ಜೊತೆಗಿದ್ದಳು. ಅವರಿಗೆ ನಾನು ಏನೂ ಅನ್ನದೇ ಶೆಡ್ ನ ಬಾಗಿಲನನ್ನು ಹಾಕಿ ಲಾಕ್ ಮಾಡಿದೆ. ವಿಷಯವನ್ನು ನನ್ನ ಅಳಿಯ ಅಜೀತನಿಗೆ ತಿಳಿಸಿ ಆತನನ್ನೂ ಕರೆಸಿಕೊಂಡೆ. ಹಿಂದೆ ಇವರಿಬ್ಬರ ವಿಚಾರ ಗುರು ಹಿರಿಯರ ಬಳಿ ಪಂಚಾಯತಿ ಮಾಡಿದ್ದೇ. ಈಗಾ ಮತ್ತೇ ಹಿರಿಯರನ್ನು ಕೂಡಿಸಿ ನ್ಯಾಯ ಕೇಳೋಣವೆಂದು ಅವರನ್ನು ಶೆಡ್ ನಲ್ಲೇ ಲಾಕ್ ಮಾಡಿ ಮನೆಯೊಳಗೆ ಬಂದೆವು.

ಮಗಳ ಸಾವಿಗೆ ಪ್ರತೀಕಾರ

ಒಂದು ಗಂಟೆ ಸುಮಾರು ಬಿಟ್ಟು ಶೆಡ್ ಬಳಿ ಹೋದಾಗ ನನ್ನ ಮಗಳ ಕಿರುಚಾಟ ಕೇಳಿತ್ತು. ಕೂಡಲೇ ಶೆಡ್ ಬಾಗಿಲು ತೆರೆದು ನೋಡಿದರೆ ಅದಾಗಲೇ ಆಕೆ ಶೆಡ್ ನಲ್ಲಿ ಕ್ರಿಮಿನಾಶಕ ಸೇವಿಸಿ ಬಿಟ್ಟಿದ್ದಳು. ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಬೇಕೆನ್ನುಷ್ಟರಲ್ಲಿ ಒದ್ದಾಡಿ ಒದ್ದಾಡಿ ಮೃತಪಟ್ಟಳು. ನಮ್ಮ ಮಗಳ ಸಾವಿಗೆ ಇದೇ ಯುವಕ ಕಾರಣವೆಂದು ಸಿಟ್ಟಿನಲ್ಲಿ ಯುವಕನ್ನು ಕಂಬಕ್ಕೆ ಕಟ್ಟಿ ಬಲವಂತದಿಂದ ವಿಷ ಕುಡಿಸಿದ್ದೆವು. ಆತ ಮೃತಪಟ್ಟ ಬಳಿಕ ಯಾರಿಗೂ ಗೊತ್ತಾಗದಂತೆ ಇಬ್ಬರ ಶವವನ್ನು ಪ್ಲಾಸ್ಟಿಕ್ ನಲ್ಲಿ ಪ್ಯಾಕ್ ಮಾಡಿ ಗೋಣಿ ಚೀಲದಲ್ಲಿ ಹಾಕಿ ಜಿಲ್ಲೆಯ ಕೋಲ್ಹಾರ ಪಟ್ಟಣದ ಬಳಿ ಕೃಷ್ಣಾ ನದಿಗೆ ನಿರ್ಮಿಸಿರೋ ಬೃಹತ್ ಸೇತುವೆ ಮೇಲಿಂದ ನದಿಗೆ ಎಸೆದು ಬಂದಿದ್ದೇವೆ. ಇದಕ್ಕೆ ನಮ್ಮ ಅಳಿಯ ಅಜೀತ್ ಸಾಥ್ ನೀಡಿದ್ದ. ಮಾರನೇ ದಿನ ತಿಕೋಟಾ ಪೊಲೀಸ್ ಠಾಣೆಯಲ್ಲಿ ನಮ್ಮ ಮಗಳನ್ನು ಮಲ್ಲಿಕಾರ್ಜುನ ಕಿಡ್ನ್ಯಾಪ್ ಮಾಡಿದ್ದಾನೆ ಎಂದು ದೂರು ನೀಡಿದ್ದೆವು. ಮಗಳನ್ನು ಕಳೆದುಕೊಂಡ ಹಾಗೂ ನಮ್ಮ ಮರ್ಯಾದೆ ಹೋಯಿತಲ್ಲಾ ಎಂಬ ನಿಟ್ಟಿನಲ್ಲಿ ಎಲ್ಲವನ್ನೂ ಮುಚ್ಚಿ ಹಾಕಲು ಇಬ್ಬರ ಶವಗಳನ್ನು ನದಿಗೆ ಹಾಕಿದ್ದೇವೆ ಎಂದು ಘಟನೆಯ ಕಹಾನಿಯನ್ನು ಬಾಯಿ ಬಿಟ್ಟಿದ್ದಾನೆ.

ಮಲ್ಲಿಕಾರ್ಜುನ ಜಮಖಂಡಿ ಶವ ಸಿಕ್ಕ ಬಳಿಕ ಇಡೀ ಪ್ರಕರಣ ಭೇದಿಸಿ ಹತ್ಯೆ ನಡೆಸಿದ್ದರ ಕುರಿತು ಬಾಗಲಕೋಟೆ ಎಸ್ಪಿ ಜಯಪ್ರಕಾಶ್ ಮಾಹಿತಿ ನೀಡಿದ್ದಾರೆ. ಪ್ರಮುಖ ಆರೋಪಿ ಗುರಪ್ಪ ಗಿಡ್ಡನ್ನವರ, ಅವರ ಅವಳಿಯ ಅಜೀತ್ ಎಂಬಿಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ. ಇನ್ನು ಆರೋಪಿಯ ಗುರಪ್ಪ ಮನೆಯಲ್ಲಿ ಪತ್ನಿ, ಪುಟ್ಟ ಮಕ್ಕಳು ಹಾಗೂ ವಯಸ್ಸಾದ ಮಕ್ಕಳಿದ್ದು ನಮ್ಮ ಮಗಳು ಎಲ್ಲಿದ್ದಾಳೆ ಎಂಬುದೇ ಗೊತ್ತಿಲ್ಲ. ಇತರೆ ಯಾವುದೇ ಮಾಹಿತಿ ನಮಗಿಲ್ಲಾ ಎನ್ನುತ್ತಿದ್ದಾರೆ.

ಅಪ್ರಾಪ್ತ ವಯಸ್ಸಿನ ಮಗಳು ಪ್ರಿಯಕರ ಜೊತೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದವನಿಗೆ ತಕ್ಕ ಪಾಠ ಕಲಿಸಲು ಹೋಗಿ ದೊಡ್ಡ ಅವಾಂತರವನ್ನೇ ಮಾಡಿದ್ಧಾರೆ. ಗುರು ಹಿರಿಯರ ರಾಜೀ ಪಂಚಾಯತಿ ಮಾಡಲು ಮಗಳ ಜೊತೆಗೆ ಆಕೆಯ ಪ್ರೇಮಿಯನ್ನು ಕೂಡಿ ಹಾಕಿದ್ದು ಇಲ್ಲಿ ಮತ್ತೊಂದು ಸಮಸ್ಯೆಗೆ ಕಾರಣವಾಗಿದೆ. ಮನೆಯವರ ಕೈಲಿ ಸಿಕ್ಕಿದಿವಲ್ಲ ಎಂದು ವಿಷ ಸೇವಿಸಿ ಜೀವ ಬಿಟ್ಟ ಮಗಳ ಸಾವಿಗೆ ಪ್ರತೀಕಾರವಾಗಿ ಯುವಕನನ್ನು ಕೊಲೆ ಮಾಡಿದ್ದು ಮಾತ್ರ ದುರಂತ.

ನಂತರ ಇಡೀ ಪ್ರಕರಣವನ್ನೇ ಮುಚ್ಚಿ ಹಾಕಲು ಮಗಳ ಶವದೊಂದಿಗೆ ಪ್ರೇಮಿಯ ಶವವನ್ನು ನದಿಗೆ ಹಾಕಿದ್ದು ಮತ್ತೊಂದು ಕಾನೂನು ಬಾಹೀರ ಕೃತ್ಯವಾಗಿದೆ. ಸದ್ಯ ಬಾಲಕಿಯ ಶವ ಇನ್ನೂ ಸಿಕ್ಕಿಲ್ಲ. ಆ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ. ಯುವಕನ ಕೊಲೆ ಹಾಗೂ ಸಾಕ್ಷಿನಾಶದ ಆರೋಪದ ಮೇಲೆ ಬಾಲಕಿಯ ತಂದೆ ಗುರಪ್ಪಾ ಹಾಗೂ ಮಾವ ಅಜೀತ್ ನನ್ನು ಪೊಲೀಸರು ಜೈಲಿಟ್ಟಿದ್ದಾರೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ.

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು