ಕೊನೆಗೂ ದರ ಕಡಿಮೆ ಮಾಡಿದ ಓಲಾ, ಊಬರ್ ಕಂಪನಿ: ಇಂದಿನಿಂದ ಮಿನಿಮಮ್ ದರ ಪಡೆಯಲು ಹೈಕೋರ್ಟ್ ಸೂಚನೆ
ಮುಂದಿನ 15 ದಿನಗಳವರೆಗೆ ಮಿನಿಮಮ್ ದರ ಪಡೆದುಕೊಳ್ಳಬೇಕು. ಪ್ರಯಾಣಿಕರ ಸಭೆ ಮಾಡಿ, ದರ ನಿಗದಿ ಮಾಡಲು ಹೈಕೋರ್ಟ್ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಬೆಂಗಳೂರು: ಇಂದಿನಿಂದ ಮಿನಿಮಮ್ ದರ ಪಡೆಯಲು ಊಬರ್ (Uber) ಕಂಪನಿ ಮುಂದಾಗಿದ್ದು, 2 ಕಿ.ಮೀ. ದೂರಕ್ಕೆ ಕೇವಲ 30-35 ರೂ. ಮಾತ್ರ ಚಾರ್ಜ್ ಮಾಡಲು ನಿರ್ಧರಿಸಿದೆ. ದುಪ್ಪಟ್ಟು ದರ ವಸೂಲಿ ಬಗ್ಗೆ ಟಿವಿ9 ಮೊದಲು ಸುದ್ದಿ ಮಾಡಿತ್ತು. ನಿರಂತರ ವರದಿಯಿಂದ ಓಲಾ (Ola), ಊಬರ್ ಕಂಪನಿ ಕೊನೆಗೂ ದರ ಕಡಿಮೆ ಮಾಡಿದೆ. ನಿನ್ನೆ ಹೈಕೋರ್ಟ್ ನ್ಯಾಯಾಧೀಶರು 2021ರ ದರವನ್ನು ಮಾತ್ರ ಪಡೆದುಕೊಳ್ಳುವುದರ ಜೊತೆಗೆ 10% ಹೆಚ್ಚಿನ ದರ ಮತ್ತು ಜಿಎಸ್ಟಿ ಸೇರಿಸಿ ಪ್ರಯಾಣಿಕರಿಂದ ಹಣ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಮುಂದಿನ 15 ದಿನಗಳವರೆಗೆ ಮಿನಿಮಮ್ ದರವನ್ನು ಮಾತ್ರ ಪ್ರಯಾಣಿಕರಿಂದ ತೆಗೆದುಕೊಳ್ಳಬೇಕು. ನಂತರ ಓಲಾ, ಊಬರ್ ಮತ್ತು ರ್ಯಾಪಿಡೋ ಕಂಪನಿ ಜೊತೆಗೆ ಆರ್ಟಿಓ ಅಧಿಕಾರಿಗಳು, ಆಟೋ ಸಂಘಟನೆಗಳು ಹಾಗೂ ಪ್ರಯಾಣಿಕರ ಸಭೆ ಮಾಡಿ, ದರ ನಿಗದಿ ಮಾಡಲು ಹೈಕೋರ್ಟ್ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ವಾಣಿವಿಲಾಸ ರೋಡ್ನಿಂದ ದೊಡ್ಡ ಗಣಪತಿ ದೇವಸ್ಥಾನಕ್ಕೆ 33.29 ಪೈಸೆ ಮಾತ್ರ. ಆದರೆ 1.7 ಕಿಮೀ ದೂರವಿರುವ ಮಾರ್ಗಕ್ಕೆ ಊಬರ್ ಕಂಪನಿ ನಿನ್ನೆ ಮೊನ್ನೆ 80 ರಿಂದ 100 ರೂ. ಚಾರ್ಜ್ ಮಾಡಿದೆ ಎನ್ನಲಾಗುತ್ತಿದೆ.
ಹೈ ಕೋರ್ಟ್ ಆದೇಶಕ್ಕೂ ಡೊಂಟ್ ಕೇರ್ ಎಂದ ಓಲಾ!
ಇನ್ನು ಮುಂದಿನ ಹದಿನೈದು ದಿನಗಳವರೆಗೆ ಮಿನಿಮಮ್ ದರವನ್ನು ಮಾತ್ರ ಚಾರ್ಜ್ ಮಾಡಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದು, ಹೈ ಕೋರ್ಟ್ ಆದೇಶಕ್ಕೂ ಓಲಾ ಕಂಪನಿ ಡೊಂಟ್ ಕೇರ್ ಎನ್ನುತ್ತಿದೆ. ಇಂದು ಬೆಳಿಗ್ಗಿನಿಂದಲೇ ಊಬರ್ ಕಂಪನಿ ದರವನ್ನು ಇಳಿಸಿ ಕೋರ್ಟ್ ಸೂಚನೆ ಪಾಲನೆ ಮಾಡಿದರೆ, ಇತ್ತ ಓಲಾ ಕಂಪನಿ ಮಾತ್ರ ಹಿಂದಿನಂತೆ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ಹಾಗಾದರೆ ಹೈ ಕೋರ್ಟ್ ಆದೇಶಕ್ಕೆ ಓಲಾ ಕಂಪನಿ ಗೌರವ ನೀಡುತ್ತಿಲ್ಲ ಎನ್ನಲಾಗುತ್ತಿದೆ. ವಾಣಿ ವಿಲಾಸ ರೋಡ್ನಿಂದ ದೊಡ್ಡ ಗಣಪತಿ ದೇವಸ್ಥಾನಕ್ಕೆ ಊಬರ್ನಲ್ಲಿ 33 ರೂ. ಆದರೆ ಅದೇ ಮಾರ್ಗಕ್ಕೆ ಓಲಾ ಮಾತ್ರ ಬರೋಬ್ಬರಿ 59 ರೂ. ವಸೂಲಿ ಮಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Sat, 15 October 22