Breaking News ಕಾಲೇಜು ವಿದ್ಯಾರ್ಥಿ ಶವ ಚರಂಡಿಯಲ್ಲಿ ಪತ್ತೆ
ಕಾಲೇಜು ವಿದ್ಯಾರ್ಥಿ ಶವ ಚರಂಡಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಐವರು ವಿದ್ಯಾರ್ಥಿಗಳನ್ನು ಸಿಲುಕಿಕೊಂಡಿದ್ದಾರೆ.
ನವದೆಹಲಿ: ಕಾಲೇಜು ವಿದ್ಯಾರ್ಥಿ ಶವ ಚರಂಡಿಯಲ್ಲಿ ಪತ್ತೆಯಾಗಿದ್ದು, ಕೊಲೆ ಮಾಡಿ ಬಳಿಕ ಮೃತದೇಹವನ್ನು ಚರಂಡಿಗೆ ಎಸೆದಿದ್ದಾರೆ.
ಖಾಸಗಿ ವಿಶ್ವವಿದ್ಯಾಲಯದ 21 ವರ್ಷದ ಯಶಸ್ವಿ ರಾಜ್ ಎನ್ನುವ ವಿದ್ಯಾರ್ಥಿಯ ಶವ ಗ್ರೇಟರ್ ನೋಯ್ಡಾದ ಇನ್ಸ್ಟಿಟ್ಯೂಟ್ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹೊಡೆದಾಡಿಕೊಂಡು ಬಳಿಕ ಯಶಸ್ವಿ ರಾಜ್ ನನ್ನು ಕೊಂದಿದ್ದಾರೆ. ಹತ್ಯೆ ಮಾಡಿದ ಐವರು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯಶಸ್ವಿ ರಾಜ್ ಅಕ್ಟೋಬರ್ 12 ರಂದು ತನ್ನ ಇಬ್ಬರು ಸ್ನೇಹಿತರ ಜೊತೆ ಹೊರಗೆ ಹೋಗಿದ್ದರು, ನಂತರ ಅವರು ಮನೆಗೆ ಹಿಂದಿರುಗಿಲ್ಲ ಎಂದು ಮೃತ ವಿದ್ಯಾರ್ಥಿಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸ್ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Published On - 6:57 pm, Sat, 15 October 22