ಸೀನ ಅಲಿಯಾಸ್ ಸೀಗಡಿಸೀನ ಮೇಲೆ ಪೊಲೀಸ್ ಫೈರಿಂಗ್

|

Updated on: Feb 16, 2020 | 9:41 AM

ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳ್ಳಗ್ಗೆ ಪೊಲೀಸರ ತುಪಾಕಿ ಸದ್ದು ಮಾಡಿದೆ. ರೌಡಿಶೀಟರ್ ಸೀನ ಅಲಿಯಾಸ್ ಸೀಗಡಿಸೀನ ಮೇಲೆ ಜಾಲಹಳ್ಳಿ ಬಳಿ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಸೀನ ರಸ್ತೆ ಬದಿ ನಿಲ್ಲಿಸಿದ್ದ 11 ಆಟೋ ಹಾಗೂ 4 ಕಾರಿನ ಗಾಜು ಹೊಡೆದು ವಾಹನಗಳನ್ನು ಜಖಂಗೊಳಿಸಿದ್ದ. ಈ ಪ್ರಕರಣ ಸಂಬಂಧಿಸಿ ಖಚಿತ ಮಾಹಿತಿ ಮೇರೆಗೆ ಆರೋಪಿ ಸೀನ ಬಂಧನಕ್ಕೆ ತೆರಳಿದ್ದ ವೇಳೆ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸ್ ಪೇದೆ ಕೈಗೆ […]

ಸೀನ ಅಲಿಯಾಸ್ ಸೀಗಡಿಸೀನ ಮೇಲೆ ಪೊಲೀಸ್ ಫೈರಿಂಗ್
Follow us on

ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳ್ಳಗ್ಗೆ ಪೊಲೀಸರ ತುಪಾಕಿ ಸದ್ದು ಮಾಡಿದೆ. ರೌಡಿಶೀಟರ್ ಸೀನ ಅಲಿಯಾಸ್ ಸೀಗಡಿಸೀನ ಮೇಲೆ ಜಾಲಹಳ್ಳಿ ಬಳಿ ಪೊಲೀಸರಿಂದ ಗುಂಡಿನ ದಾಳಿ ನಡೆದಿದೆ. ರಾಜಗೋಪಾಲನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಸೀನ ರಸ್ತೆ ಬದಿ ನಿಲ್ಲಿಸಿದ್ದ 11 ಆಟೋ ಹಾಗೂ 4 ಕಾರಿನ ಗಾಜು ಹೊಡೆದು ವಾಹನಗಳನ್ನು ಜಖಂಗೊಳಿಸಿದ್ದ.

ಈ ಪ್ರಕರಣ ಸಂಬಂಧಿಸಿ ಖಚಿತ ಮಾಹಿತಿ ಮೇರೆಗೆ ಆರೋಪಿ ಸೀನ ಬಂಧನಕ್ಕೆ ತೆರಳಿದ್ದ ವೇಳೆ ಪೇದೆ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸ್ ಪೇದೆ ಕೈಗೆ ಡ್ಯಾಗರ್‌ ಇರಿದು ಹಲ್ಲೆಗೆ ಯತ್ನಿಸಿದ್ದಾನೆ ಈ ವೇಳೆ ಆತ್ಮರಕ್ಷಣೆಗಾಗಿ ರಾಜಗೋಪಾಲನಗರ ಇನ್ಸ್‌ಪೆಕ್ಟರ್‌ ದಿನೇಶ್‌ ಪಾಟೀಲ್‌ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ.

ರೌಡಿಶೀಟರ್ ಸೀಗಡಿ ಸೀನ ಕಾಲಿಗೆ ಗುಂಡು ತಗುಲಿದ್ದು, ಪರಾರಿಯಾಗಲಾರದೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ವೇಳೆ ಪೇದೆ ವೀರಭದ್ರಪ್ಪನ ಬಲಗೈಗೆ ಸೀನ ತಿವಿದು ಹಲ್ಲೆಗೆ ಯತ್ನಿಸಿರುವುದರಿಂದ ಪೇದೆಗೆ ಗಾಯಗಳಾಗಿವೆ. ಸದ್ಯ ಆರೋಪಿ ಮತ್ತು ಪೇದೆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.