ಮುಂಬೈ ರೈಲು ನಿಲ್ದಾಣದಲ್ಲಿ ವ್ಯಕ್ತಿಯನ್ನು ಥಳಿಸಿ, ಎದುರಿನಿಂದ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿದ್ರು

|

Updated on: Aug 17, 2023 | 2:15 PM

ಮುಂಬೈ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ, ಎದುರಿನಿಂದ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿರುವ ಘಟನೆ ನಡೆದಿದೆ. ಮುಂಬೈನ ಸಿಯಾನ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ನಿಲ್ದಾಣದಲ್ಲಿ ಇಬ್ಬರು ಜಗಳವಾಡುತ್ತಿದ್ದರು, ಕೋಪದಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬನನ್ನು ಸಬ್​ಅರ್ಬನ್ ರೈಲು ಬರುವ ವೇಳೆಗೆ ಸರಿಯಾಗಿ ಕೆಳಗೆ ತಳ್ಳಿದ್ದಾನೆ, ದಿನೇಶ್ ರಾಥೋಡ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಂಬೈ ರೈಲು ನಿಲ್ದಾಣದಲ್ಲಿ ವ್ಯಕ್ತಿಯನ್ನು ಥಳಿಸಿ, ಎದುರಿನಿಂದ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿದ್ರು
ರೈಲು
Image Credit source: Wikipedia
Follow us on

ಮುಂಬೈ ರೈಲ್ವೆ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಥಳಿಸಿ, ಎದುರಿನಿಂದ ಬರುತ್ತಿದ್ದ ರೈಲಿನ ಕೆಳಗೆ ತಳ್ಳಿರುವ ಘಟನೆ ನಡೆದಿದೆ. ಮುಂಬೈನ ಸಿಯಾನ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ನಿಲ್ದಾಣದಲ್ಲಿ ಇಬ್ಬರು ಜಗಳವಾಡುತ್ತಿದ್ದರು, ಕೋಪದಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬನನ್ನು ಸಬ್​ಅರ್ಬನ್ ರೈಲು ಬರುವ ವೇಳೆಗೆ ಸರಿಯಾಗಿ ಕೆಳಗೆ ತಳ್ಳಿದ್ದಾನೆ, ದಿನೇಶ್ ರಾಥೋಡ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಭಾನುವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಅವಿನಾಶ್ ಮಾನೆ (31) ಮತ್ತು ಅವರ ಪತ್ನಿ ಶೀತಲ್ ಮಾನೆ (30) ಅವರನ್ನು ಬಂಧಿಸಲಾಗಿದೆ. ದಂಪತಿ ಸಿಯಾನ್ ನಿಲ್ದಾಣದಲ್ಲಿ ಉಪನಗರ ರೈಲಿನಿಂದ ಇಳಿದರು, ಅಲ್ಲಿ ಶೀತಲ್ ಮಾನೆ ಅವರು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (MSRTC) ಉದ್ಯೋಗಿ ರಾಥೋಡ್ ಅವರೊಂದಿಗೆ ಜಗಳವಾಡಿದ್ದಾರೆ.

ಮಹಿಳೆಯ ಪತಿ ಅವಿನಾಶ್ ಮಾನೆ ರಾಥೋಡ್ ತನ್ನ ಹೆಂಡತಿಯನ್ನು ನಿಂದಿಸುತ್ತಿರುವುದನ್ನು ಕಂಡು ಏನಾಗುತ್ತಿದೆ ಎಂದು ತಿಳಿಯಲು ಬಂದರು ಎಂದು ಅಧಿಕಾರಿ ಹೇಳಿದರು.

ಮತ್ತಷ್ಟು ಓದಿ: India’s first underwater stretch: ಹೂಗ್ಲೀ ನದಿ ಜಲಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿದ ಕೊಲ್ಕತ್ತಾ ಮೆಟ್ರೋ, ಮಾಧ್ಯಮದವರಿಗೊಂದು ಜಾಯ್ ರೈಡ್!

ಅವಿನಾಶ್ ಮಾನೆ ಮತ್ತು ರಾಥೋಡ್ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾತಿನ ಚಕಮಕಿಯಲ್ಲಿ, ಅವಿನಾಶ್ ಮಾನೆ ಕೋಪದ ಭರದಲ್ಲಿ, ಬ್ಯಾಲೆನ್ಸ್ ಕಳೆದುಕೊಂಡ ರಾಥೋಡ್​ಗೆ ಹೊಡೆದಿದ್ದಾರೆ, ಹಳಿಗಳ ಮೇಲೆ ಬಿದ್ದು ಚಲಿಸುತ್ತಿದ್ದ ಉಪನಗರ ರೈಲಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಎಸ್‌ಟಿ ಸಿಬ್ಬಂದಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಠಾಣೆಯ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಅವಿನಾಶ್ ಮಾನೆಯನ್ನು ಬಂಧಿಸಿದ್ದಾರೆ ಮತ್ತು ನಂತರ ಅವರ ಪತ್ನಿಯನ್ನೂ ಬಂಧಿಸಿದ್ದಾರೆ ಎಂದು ಅವರು ಹೇಳಿದರು.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ