Crime News: ಹಿರಿ ಸಹೋದರನನ್ನು ಕೊಲೆ ಮಾಡಿದವನ ಬಂಧನ, ಕೃಷಿ ಹೊಂಡದಲ್ಲಿ ತಾಯಿ-ಮಗನ ಶವ ಪತ್ತೆ

| Updated By: shivaprasad.hs

Updated on: Mar 26, 2022 | 10:46 AM

ಕಲಬುರಗಿಯಲ್ಲಿ ಸಹೋದರರನ್ನು ಕೊಲೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ತಾಯಿ ಹಾಗೂ ಮಗನ ಶವ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ. ತುಮಕೂರಿನಲ್ಲಿ ಹೊಟ್ಟೆನೋವು ತಾಳಲಾರದೆ ವೃದ್ಧರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಪರಾಧ ಸುದ್ದಿಗಳ ವಿವರ ಇಲ್ಲಿದೆ.

Crime News: ಹಿರಿ ಸಹೋದರನನ್ನು ಕೊಲೆ ಮಾಡಿದವನ ಬಂಧನ, ಕೃಷಿ ಹೊಂಡದಲ್ಲಿ ತಾಯಿ-ಮಗನ ಶವ ಪತ್ತೆ
ಸಾಂದರ್ಭಿಕ ಚಿತ್ರ
Follow us on

ಕಲಬುರಗಿ: ತನ್ನ ಹಿರಿ ಸಹೋದರನನ್ನೇ ಕೊಲೆ ಮಾಡಿದ ಸಹೋದರನೋರ್ವನನ್ನು ಬಂಧಿಸಲಾಗಿದೆ. ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ಸುಶಿಲ್​ನನ್ನು ಬಂಧಿಸಲಾಗಿದೆ. ಇದೇ ಮಾರ್ಚ್ 16 ರಂದು ಕಲಬುರಗಿ ತಾಲೂಕಿನ ತಾಜಸುಲ್ತಾನಪುರದಲ್ಲಿ ಮನೋಹರ್ (35) ಕೊಲೆಯಾಗಿದ್ದ. ಗ್ರಾಮದ ಹೊರವಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕೊಲೆ ಆರೋಪದ ಮೇಲೆ ಸುಶಿಲ್ ಮತ್ತು ಕೃಷ್ಣಾ ಎನ್ನುವ ಇಬ್ಬರ ಬಂಧನವಾಗಿದೆ. ಸುಶಿಲ್ ಕೊಲೆಯಾದ ಮನೋಹರನ ಸಹೋದರ. ಆಸ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಸಹೋದರನನ್ನೇ ಕೊಲೆ ಮಾಡಿರೋ ಸುಶಿಲ್, ಬಳಿಕ ಹೈಡ್ರಾಮಾ ಮಾಡಿದ್ದ. ಶವದ ಬಳಿ ಬಂದು ಕಣ್ಣೀರು ಹಾಕಿದ್ದ ಸುಶಿಲ್​ನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ತಾಯಿ-ಮಗನ ಶವ ಪತ್ತೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿಯ ಕೃಷಿ ಹೊಂಡದಲ್ಲಿ ತಾಯಿ-ಮಗನ ಶವ ಪತ್ತೆಯಾಗಿದೆ. ಹರಳಹಳ್ಳಿಯ ನವಲತಾ(25) ಹಾಗೂ ಅವರ ಪುತ್ರ ಅಂಜನ್‌ ಗೌಡ(6) ಶವ ಪತ್ತೆಯಾಗಿದ್ದು, ಮೃತಳ ಪತಿ ಕುಟುಂಬಸ್ಥರು ಕಿರುಕುಳ ನೀಡಿದ್ದಾರೆಂದು ಮೃತಳ ಪೋಷಕರಿಂದ ಆರೋಪಿಸಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹೊಟ್ಟೆನೋವು ತಾಳಲಾರದೆ ವೃದ್ಧರೋರ್ವರು ಆತ್ಮಹತ್ಯೆ

ತುಮಕೂರು: ಹೊಟ್ಟೆನೋವು ತಾಳಲಾರದೆ ವೃದ್ದರೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವೀರಸಾಗರ ಗ್ರಾಮದಲ್ಲಿ ಘಟನೆ ನಡೆದಿದೆ. ರಂಗಶಾಮಯ್ಯ 65 ಮೃತ ದುರ್ದೈವಿ. ಹಲವು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು: ಆಗರ ಕ್ರಾಸ್ ಬಳಿ ಕಾಡಾನೆಗೆ ಬಸ್​ ಡಿಕ್ಕಿ; ಬಸ್​ನ ಮುಂಭಾಗ ಜಖಂ

ಬೆಂಗಳೂರು: ಕನಕಪುರ ಮುಖ್ಯ ರಸ್ತೆಯ ಆಗರ ಕ್ರಾಸ್ ಬಳಿ ಕಾಡಾನೆಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಆನೆ ಗುದ್ದಿದ ರಭಸಕ್ಕೆ ಬಸ್​​ನ ಮುಂಭಾಗ ಜಖಂಗೊಂಡಿದೆ.

ಇದನ್ನೂ ಓದಿ:

‘ದಿ ಕಾಶ್ಮೀರ್​ ಫೈಲ್ಸ್​’ ಹೆಸರು ಹೇಳದೇ ಒಂದೇ ಒಂದು ಟ್ವೀಟ್​ ಮಾಡಿ ಟ್ರೋಲ್​ ಆದ ನಟ ಆದಿಲ್​ ಹುಸೇನ್​

ಉಕ್ರೇನ್​​ನಲ್ಲಿ ಆಸ್ಪತ್ರೆಗಳ ಮೇಲೆ 34 ಬಾರಿ ದಾಳಿ ನಡೆಸಿದ ರಷ್ಯಾ ಸೇನಾ ಪಡೆ; ವಾರ್​ ಕ್ರೈಂ ನಡೆಯುತ್ತಿರುವುದಕ್ಕೆ ಇದು ಪುರಾವೆ

Published On - 8:37 am, Sat, 26 March 22