Crime News: ಡಿಜಿ ಹಳ್ಳಿಯಲ್ಲಿ ಲಾಂಗ್ ಬೀಸಿ ದಾಂಧಲೆ ಮಾಡುತ್ತಿದ್ದ ರೌಡಿ ಅರೆಸ್ಟ್

| Updated By: ಡಾ. ಭಾಸ್ಕರ ಹೆಗಡೆ

Updated on: Dec 12, 2022 | 1:12 PM

ರೌಡಿ ಆಸಾಮಿ ಸುಹೇಲ್ ಅಲಿಯಾಸ್ ಪಪ್ಪಾಯನ್ನು ಡಿಜಿ ಹಳ್ಳಿ ಪೊಲೀಸರು ಇಂದು (ಸೋಮವಾರ 12)ಬಂಧನ ಮಾಡಿದ್ದಾರೆ. ಉತ್ತರ ಬೆಂಗಳೂರು ಡಿಜಿ ಹಳ್ಳಿ ಏರಿಯಾದಲ್ಲಿ ಸುಹೇಲ್ ಮಾಡ್ತಿದ್ದ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಆಧಾರ ಮೇಲೆ ದೂರು ದಾಖಲು ಮಾಡಲಾಗಿದೆ.

Crime News: ಡಿಜಿ ಹಳ್ಳಿಯಲ್ಲಿ ಲಾಂಗ್ ಬೀಸಿ ದಾಂಧಲೆ ಮಾಡುತ್ತಿದ್ದ ರೌಡಿ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು; ರೌಡಿ ಆಸಾಮಿ ಸುಹೇಲ್ ಅಲಿಯಾಸ್ ಪಪ್ಪಾಯನನ್ನು ಡಿಜಿ ಹಳ್ಳಿ ಪೊಲೀಸರು ಇಂದು (ಸೋಮವಾರ 12)ಬಂಧಸಿದ್ದಾರೆ. ಉತ್ತರ ಬೆಂಗಳೂರು ಡಿಜಿ ಹಳ್ಳಿ ಏರಿಯಾದಲ್ಲಿ ಸುಹೇಲ್ ಮಾಡ್ತಿದ್ದ ಪುಂಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಆಧಾರ ಮೇಲೆ ದೂರು ದಾಖಲು ಮಾಡಲಾಗಿದೆ. ಈತ ಮಚ್ಚು ಹಿಡಿದು ನಡು ರಸ್ತೆಯಲ್ಲಿ ಓಡಾಡುತ್ತಾ ಅಂಗಡಿಗೆ ಪುಂಡರನ್ನ ಕರೆದೊಯ್ದು ಲಾಂಗ್ ಬೀಸಿ ದಾಂಧಲೆ ನಡೆಸುತ್ತಿದ್ದ.

ಇದೇ ರೀತಿ ಏರಿಯಾದಲ್ಲಿ ಪುಂಡಾಟ ಮಾಡ್ತಿದ್ದ ಸುಹೇಲ್ ಪೊಲೀಸರ ಅತಿಥಿಯಾಗಿದ್ದಾನೆ. ಸದ್ಯ ಈ ಪ್ರಕರಣದ ಬೆನ್ನಲ್ಲೆ ಆರೋಪಿಯನ್ನ ಬಂಧಿಸಿ, ಈ ಪ್ರದೇಶದಲ್ಲಿ ಪೊಲೀಸರು ಮೆರವಣಿಗೆ ಮಾಡಿದ್ದಾರೆ.

ಇದನ್ನು ಓದಿ: ಶೂಟೌಟ್ ಪ್ರಕರಣ: ಚುರುಕುಗೊಂಡ ತನಿಖೆ, ಮೂವರ ರೌಡಿಗಳ ಬಂಧನ

ಬೈಕಿಗೆ ಲಾರಿ ಡಿಕ್ಕಿ, ರೈತ ಸಾವು

ದಾವಣಗೆರೆ: ವಿಂಡ್​ ಫ್ಯಾನ್​ ಕಂಪನಿಗೆ ಸೇರಿದ ಲಾರಿ ಡಿಕ್ಕಿ, ರೈತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬುಳ್ಳನಳ್ಳಿ ಬಳಿ ನಡೆದಿದೆ. ಲಾರಿ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳ್ತಿದ್ದ ರೈತ ಮೂರ್ತ್ಯಪ್ಪ(36) ಸಾವನ್ನಪಿದ್ದಾರೆ.

ಬೈಕ್​ನಲ್ಲಿ ರೈತ ಮೂರ್ತ್ಯಪ್ಪ ಜಮೀನಿಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಮಣ್ಣು ಸಾಗಣೆ ಮಾಡುತ್ತಿದ್ದ ವಿಂಡ್​ ಫ್ಯಾನ್ ಕಂಪನಿಗೆ ಸೇರಿದ ಲಾರಿ, ರೈತನಿಗೆ ಡಿಕ್ಕಿ ಹೊಡೆದಿದೆ. ಜಗಳೂರು ತಾಲೂಕಿನಲ್ಲಿ ವಿಂಡ್ ಫ್ಯಾನ್ ಕಂಪನಿ ಲಾರಿಗಳ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ, ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಮಣ್ಣು ಸಾಗಣೆ ಹೆಸರಿನಲ್ಲಿ ನಿತ್ಯ ನೂರಾರು ಲಾರಿಗಳ ಸಂಚಾರ ಮಾಡುತ್ತಿದೆ. ಈ ಘಟನೆ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣದ ಬಗ್ಗೆ ಜಗಳೂರು ಪೊಲೀಸ್ ದೂರು ದಾಖಲಿಸಿಕೊಂಡಿದ್ದಾರೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:41 pm, Mon, 12 December 22