Crime News: ಶೂಟೌಟ್ ಪ್ರಕರಣ: ಚುರುಕುಗೊಂಡ ತನಿಖೆ, ಮೂವರ ರೌಡಿಗಳ ಬಂಧನ
ಕೆ.ಆರ್ ಪುರಂನಲ್ಲಿ ರೌಡಿ ಶೀಟರ್ ಮೇಲೆ ನಡೆದ ಶೂಟೌಟ್ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶೂಟರ್ಸ್ಗಳು ನಾಲ್ಕು ದಿನದ ಹಿಂದೆಯೇ ಶೂಟೌಟ್ ನಡೆದ ಕೆ.ಆರ್ ಪುರಂ ಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಕೆ.ಆರ್ ಪುರಂನಲ್ಲಿ ರೌಡಿ ಶೀಟರ್ ಮೇಲೆ ನಡೆದ ಶೂಟೌಟ್ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಶೂಟರ್ಸ್ಗಳು ನಾಲ್ಕು ದಿನದ ಹಿಂದೆಯೇ ಶೂಟೌಟ್ ನಡೆದ ಕೆ.ಆರ್ ಪುರಂ ಗೆ ಬಂದಿದ್ದರು ಎಂದು ಹೇಳಲಾಗುತ್ತಿದೆ. ನಾಲ್ಕು ದಿನದಿಂದ ಗಾಯಾಳು ಶಿವಶಂಕರ್ ರೆಡ್ಡಿ ಸೈಟ್ ಸುತ್ತ ಮುತ್ತಲಿನ ಸ್ಥಳದಲ್ಲಿಯೇ ಓಡಾಟ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಕೆ.ಆರ್ ಪುರಂ ಹೊರಹೊಲಯದ ಭಾಗದಲ್ಲಿ ಆರೋಪಿಗಳು ತಂಗಿದ್ದ ಮಾಹಿತಿಯನ್ನು ಪೊಲೀಸ್ ಅಧಿಕಾರಗಳು ಕಳೆಹಾಕಿದ್ದಾರೆ.
ಶಿವಶಂಕರ್ ರೆಡ್ಡಿಗೆ ಮೂರು ದಿನ ಸ್ಕೆಚ್ ಹಾಕಿದ್ರು, ಆತ ಇವರ ಕೈ ಸಿಕ್ಕಿರಲಿಲ್ಲ. ನಾಲ್ಕನೇ ದಿನ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಶೂಟೌಟ್ ಬಳಿಕ ಸ್ಥಳದಲ್ಲೇ ಪೊನಾಲಿ ಶಂಕರ್ಗೆ ಡೆತ್ ಕನ್ಪರ್ಮ್ ಅಂತ ಮನೋಜ್ ಕರೆ ಮಾಡಿದ್ದಾರೆ. ನಂತರ ಬೈಕ್ಗಳಲ್ಲಿ ಹೊಸಕೋಟೆಗೆ ಹೋಗಿ, ಟೋಲ್ ಬಳಿ ಬೈಕ್ನ್ನು ಪೊದೆಯಲ್ಲಿ ಬಿಟ್ಟು ಕಾರಲ್ಲಿ ಎಸ್ಕೇಪ್ ಆಗಿದ್ದಾರೆ. ಇವತ್ತು ಮೂವರು ಆರೋಪಿಗಳನ್ನ ಕರೆದೊಯ್ದು ಸ್ಥಳದಲ್ಲಿ ಈ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಪಲ್ಲಿ ರೌಡಿ ಶೀಟರ್ ಪೊನಾಲಿ ಶಂಕರ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಪ್ರಮುಖ ಆರೋಪಿ ಪೊನಾಲಿ ಶಂಕರ್ ಸೇರಿ ಐವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಗನ್ ಖರೀದಿ ಎಲ್ಲಿ ಮಾಡಿದ್ದಾರೆ? ಹಣಕಾಸಿನ ವಹಿವಾಟು ಎಷ್ಟು ? ಎಂಬುದರ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ.
ಪೊನಾಲಿ ಶಂಕರ್ಗೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದ ಗಾಯಾಳು ಶಿವಶಂಕರ್ ರೆಡ್ಡಿ, ಇದೇ ಕಾರಣಕ್ಕೆ ಪೊನಾಲಿ ಶಂಕರ್ ಸುಪಾರಿ ಕೊಟ್ಟು ಕೊಲೆಗೆ ಪ್ಲಾನ್ ರೂಪಿಸಿದ್ದ ಎಂದು ಹೇಳಲಾಗಿದೆ. ಸದ್ಯ ಮೂರು ವಿಶೇಷ ತಂಡಗಳಿಂದ ಆಂಧ್ರಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ: ಸಮೀಪ ಲಾರಿ-ಕಾರು ಮುಖಾಮುಖಿಯಲ್ಲಿ ಮೂವರ ಸಾವು, ಬೆಂಗಳೂರು ಕ್ಯಾಸಿನೊ ಮೇಲೆ ಪೊಲೀಸರ ದಾಳಿ
ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಖದೀಮರ ಬಂಧನ
ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಅಡ್ಡಗಟ್ಟಿ ನಿಲ್ಲಿಸುತ್ತಿದ್ದ ನಾಲ್ವರನ್ನ ಪೊಲೀಸರು ಇಂದು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಎಡ ದಂಡೆ ಕಾಲುವೆ ಬಳಿ ಅರೆಸ್ಟ್ ಮಾಡಲಾಗಿದೆ.
ರಸ್ತೆಗೆ ಅಡ್ಡ ಕಲ್ಲು ಹಾಕಿ ಕೈಯಲ್ಲಿ ಮಾರಾಕಸ್ತ್ರ ಹಿಡಿದು ವಾಹನ ನಿಲ್ಲಿಸುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ವಾಹನಗಳನ್ನ ನಿಲ್ಲಿಸಿ ದರೋಡೆ ಮಾಡಲು ಯತ್ನಿಸಿರುವ ಶಂಕೆ ವ್ಯಕ್ತವಾಗಿತ್ತು, ಈ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸಲು ಮುಂದಾದರೂ, ಇದೀಗ ಈ ನಾಲ್ವರು ಖದೀಮರ ಪೊಲೀಸರ ವಾಹನ ನಿಲ್ಲಿಸಲು ಹೋಗಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾರೆ, ಆದರೆ ಇದರಲ್ಲಿ ಇಬ್ಬರು ಪರಾರಿಯಾಗಿದ್ದಾರೆ.
ಬಂಧಿತರಲ್ಲಿ ಇಬ್ಬರು ವಿಜಯಪುರ, ಒಬ್ಬ ಧಾರವಾಡ ಹಾಗೂ ಇನ್ನೊಬ್ಬ ಯಾದಗಿರಿ ಮೂಲದ ಆರೋಪಿಗಳು ಎಂದು ಗುರುತಿಸಲಾಗಿದೆ. ಬಂಧಿಸುವ ವೇಳೆ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಂಧಿತರಿಂದ 25 ಸಾವಿರ ನಗದು, 2 ಬೈಕ್, ಒಂದು ಕಬ್ಬಿಣದ ತಲ್ವಾರ್, ಒಂದು ಮಚ್ಚು ಹಾಗೂ ಕಾರದ ಪುಡಿ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Mon, 12 December 22