ಬೆಂಗಳೂರು: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದವನ ಮೇಲೆ ಕುಟುಂಬಸ್ಥರ ಹಲ್ಲೆ, ವೃದ್ಧ ಸಾವು
ಹದಿನಾರು ವರ್ಷದ ಬಾಲಕಿ ಮೇಲೆ 73 ವರ್ಷದ ಕುಪ್ಪಣ್ಣ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಬಾಲಕಿ ಕುಟುಂಬಸ್ಥರು ಆತನ ಮೇಲೆ ಹಲ್ಲೆ ನಡೆಸಿದ್ದರು. ದೂರಿನ ಬಳಿಕ ಪೊಲೀಸರು ಮನೆಗೆ ಬಂದಾಗ ಕುಪ್ಪಣ್ಣ ಶವ ಪತ್ತೆಯಾಗಿದೆ.
ಬೆಂಗಳೂರು: ನಗರದ ಹೆಣ್ಣೂರಿನ ಬಾಬುಸಾಪಾಳ್ಯದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಹದಿನಾರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನ ಮಾಡಿದ್ದ ಕುಪ್ಪಣ್ಣ(73) ಎಂಬಾತನ ಮೇಲೆ ಕೆಲವರು ಹಲ್ಲೆ ನಡೆಸಿದ್ದು ಕುಪ್ಪಣ್ಣ ಮೃತಪಟ್ಟಿದ್ದಾನೆ. ಮಧು ಸೇರಿದಂತೆ ಮೂವರು ಆರೋಪಿಗಳು ಕೈ ಕಾಲಿನಿಂದ ಹೊಡೆದು ಕುಪ್ಪಣ್ಣನನ್ನು ಕೊಂದಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಆರೋಪಿ ಮಧು ವಶಕ್ಕೆ ಪಡೆದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
73 ವರ್ಷದ ಕುಪ್ಪಣ್ಣ, ಹದಿನಾರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನ ಮಾಡಿದ್ದ. ಬಾಲಕಿಗೆ ಮಧ್ಯದ ಜೊತೆಗೆ ಬೇರೆ ಏನನ್ನೋ ಮಿಶ್ರಣ ಮಾಡಿ ಕುಡಿಸಿ ಬಳಿಕ ಆ ಬಾಲಕಿ ಮೇಲೆ ಅತ್ಯಾಚಾರ ಯತ್ನ ಮಾಡಿದ್ದ. ಬಾಲಕಿ ಕಾಣದಿದ್ದಾಗ ಮನೆಯವರು ಹುಡುಕಾಟ ನಡೆಸಿದ್ದರು. ಆಗ ಬಾಲಕಿ ಅರೆ ನಗ್ನಾ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ತಕ್ಷಣ ಕುಟುಂಬದವರು ಆಗಮಿಸಿ ಕುಪ್ಪಣ್ಣನ ಮೇಲೆ ಹಲ್ಲೆ ನಡೆಸಿದ್ದರು. ಬಾಲಕಿ ಕುಟುಂಬಸ್ಥರು ರಾತ್ರಿ ಕುಪ್ಪಣ್ಣನಿಗೆ ಹಲ್ಲೆ ಮಾಡಿ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಬೆಳಗ್ಗೆ ಪೊಲೀಸ್ ಠಾಣೆಗೆ ಅಗಮಿಸಿ ಬಾಲಕಿಗೆ ಅತ್ಯಾಚಾರ ಯತ್ನ ನಡೆದಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ದೂರು ಪಡೆದ ಬಳಿಕ ಪೊಲೀಸರು ಕುಪ್ಪಣ್ಣ ಮನೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕುಪ್ಪಣ್ಣ ಮೃತಪಟ್ಟಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಮೈಸೂರು ಶಾತಗಳ್ಳಿ ಡಿಪೋ ಬಳಿ ಅಧಿಕಾರಿ ವಿರುದ್ಧ ಕಾಂಗ್ರೆಸ್ ಮುಖಂಡ ಶಫಿ ಮತ್ತವರ ಪತ್ನಿಯ ಮಚ್ಚು ಹಿಡಿದು ಬೈದಾಟ!
ಬಾಲಕಿ ತನ್ನ ಶಾಲೆ ಸಮವಸ್ತ್ರವನ್ನು ಒಗಣಲು ಹಾಕಿದ್ದಳು. ಬಟ್ಟೆಯನ್ನು ತೆಗದುಕೊಳ್ಳಲು ಬಂದಾಗ ಕುಪ್ಪಣ್ಣ ಕೃತ್ಯ ಎಸಗಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಮಧು ವಶಕ್ಕೆ ಪಡೆದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಬಳಿಕವಷ್ಟೇ ಸತ್ಯ ಹೊರ ಬರಲಿದೆ.
ಬೆಂಗಳೂರು ನಗರದಲ್ಲಿ ಮತ್ತೊಬ್ಬ ಡ್ರಗ್ ಪೆಡ್ಲರ್ ಬಂಧನ
ಅಕ್ರಮವಾಗಿ MDMA ಕ್ರಿಸ್ಟಲ್ ಡ್ರಗ್ಸ್ ಮಾರಟ ಮಾಡ್ತಿದ್ದ ನೈಜೀರಿಯಾ ಮೂಲದ ಕ್ನೇಚುವಾ ಡೇನಿಲ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ 5 ಲಕ್ಷ ಮೌಲ್ಯದ 125 ಗ್ರಾಂ MDMA ವಶಕ್ಕೆ ಪಡೆಯಲಾಗಿದೆ. ಡಿಸೆಂಬರ್ 11 ರಂದು ಬಾಣಾಸವಾಡಿ ಠಾಣಾ ವ್ಯಾಪ್ತಿಯ ಅಗ್ನಿಶಾಮಕ ಠಾಣೆ ಸಮೀಪ ಮಾರಾಟಕ್ಕೆ ಯತ್ನಿಸುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿ ಆರೋಪಿ ವಶಕ್ಕೆ ಪಡೆದು ಪರಿಶೀಲನೆಗೆ ಒಪ್ಪಿಸಲಾಗಿದೆ.
ಆರೋಪಿ 2020 ರಲ್ಲಿ ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದಿದ್ದ. ರಾಜಗೋಪಾಲನಗರ, ಯಲಹಂಕ ಠಾಣಾ ವ್ಯಾಪ್ತಿಯಲ್ಲಿಯೂ ಬಂಧಿತನಾಗಿ ಜಾಮೀನಿನ ಮೇಲೆ ಹೊರ ಬಂದಿದ್ದ. ಯಲಹಂಕದ ಹುಣಸಮಾರನಹಳ್ಳಿ ಬೃಂದಾವನ ಲೇಔಟ್ನಲ್ಲಿ ನೆಲೆಸಿದ್ದ ಈತನನ್ನು ಬಂಧಿಸಲಾಗಿದೆ. ಆರೋಪಿ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ NDPS ಆಕ್ಟ್ ಅಡಿ ಕೇಸ್ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:38 pm, Mon, 12 December 22