ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ: ಖಚಿತಪಡಿಸಿದ ಸಚಿವ ಸುಧಾಕರ್

First Zika Virus Found in Raichur: ರಾಯಚೂರು ಜಿಲ್ಲೆಯಲ್ಲಿ 5 ವರ್ಷದ ಬಾಲಕಿಗೆ ಝೀಕಾ ಸೋಂಕು ತಗುಲಿದೆ. ಝೀಕಾ ವೈರಸ್‌ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್‌ ಪತ್ತೆ: ಖಚಿತಪಡಿಸಿದ ಸಚಿವ ಸುಧಾಕರ್
ಸಚಿವ ಸುಧಾಕರ್
Follow us
TV9 Web
| Updated By: ಆಯೇಷಾ ಬಾನು

Updated on:Dec 12, 2022 | 6:10 PM

ಬೆಂಗಳೂರು: ರಾಜ್ಯದಲ್ಲಿ ಮೊದಲ ಝೀಕಾ ವೈರಸ್‌(Zika Virus) ಸೋಂಕು ಇರುವುದು ದೃಢಪಟ್ಟಿದೆ ಎಂದು ಬೆಂಗಳೂರಿನ ಆರೋಗ್ಯಸೌಧದಲ್ಲಿ ಸಚಿವ ಡಾ.ಕೆ.ಸುಧಾಕರ್‌(Dr K Sudhakar) ಸ್ಪಷ್ಟ ಪಡಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ 5 ವರ್ಷದ ಬಾಲಕಿಗೆ ಝೀಕಾ ಸೋಂಕು ತಗುಲಿದೆ. ಝೀಕಾ ವೈರಸ್‌ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ರಾಯಚೂರು ಹಾಗೂ ನೆರೆಯ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ. ಝೀಕಾ ವೈರಸ್‌ ಸೋಂಕಿನ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ. ಝೀಕಾ ವೈರಸ್‌ ಸೋಂಕಿನ ಬಗ್ಗೆ ಸಂಜೆ ಪ್ರತ್ಯೇಕ ಗೈಡ್‌ಲೈನ್ಸ್ ರಿಲೀಸ್ ಮಾಡಲಾಗುತ್ತೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಆರೋಗ್ಯಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಡಾ.ಕೆ.ಸುಧಾಕರ್‌, ರಾಯಚೂರು ಜಿಲ್ಲೆಯಲ್ಲಿ 5 ವರ್ಷದ ಬಾಲಕಿಗೆ ಝೀಕಾ ಸೋಂಕು ತಗುಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಪುಣೆ ವೈರಾಲಜಿ ಲ್ಯಾಬ್‌ನಿಂದ ಪಾಸಿಟಿವ್ ರಿಪೋರ್ಟ್‌ ಬಂದಿದೆ. ಝೀಕಾ ವೈರಸ್‌ ಸೋಂಕಿನ ಬಾಲಕಿ ಮೇಲೆ ತೀವ್ರ ನಿಗಾ ವಹಿಸಿದ್ದೇವೆ. ಇನ್ನು ಝೀಕಾ ಸೋಂಕು ಪತ್ತೆಯಾದ ಬಾಲಕಿ ಟ್ರಾವೆಲ್ ಹಿಸ್ಟರಿ ಈವರೆಗೂ ಲಭ್ಯವಾಗಿಲ್ಲ. ಹೀಗಾಗಿ ರಾಯಚೂರು ಜಿಲ್ಲಾಡಳಿತ ಬಾಲಕಿ ಟ್ರಾವೆಲ್ ಹಿಸ್ಟರಿ ಪತ್ತೆ ಮಾಡುತ್ತಿದೆ.

ಇದನ್ನೂ ಓದಿ: Migraine: ಮೈಗ್ರೇನ್ ಸಮಸ್ಯೆ ಇರುವಾಗ ಯಾವ ಆಹಾರವನ್ನು ದೂರ ಇಡಬೇಕು

ಸೊಳ್ಳೆ ಕಡಿತದಿಂದ ಬರುವ ಝೀಕಾ ವೈರಸ್‌, ಆಂಧ್ರ, ತೆಲಂಗಾಣ ಸೇರಿ ರಾಜ್ಯದ ಬೇರೆ ಯಾವ ಜಿಲ್ಲೆಯ ಲಿಂಕ್ ಇದೆ ಅನ್ನೋದರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕೇಂದ್ರದ ವೈದ್ಯರ ತಂಡ ಏಕಾಏಕಿ‌ ದಿಢೀರ್ ಭೇಟಿ ನೀಡಿ ಝೀಕಾ ವೈರಸ್‌ಗೆ ಒಳಗಾದ ಬಾಲಕಿ ಹಾಗೂ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಸಿದೆ. ಮೆಡಿಕಲ್ ರಿಪೋರ್ಟ್ಸ್, ಪುಣೆಯ ಲ್ಯಾಬ್ ರಿಪೋರ್ಟ್​ನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದ ಬಾಲಕಿ

ಇನ್ನು ಕಳೆದ 15 ದಿನಗಳಿಂದ ಜ್ವರ, ವಾಂತಿ, ಭೇದಿಯಿಂದ ಬಳಲುತ್ತಿದ್ದ ಬಾಲಕಿಗೆ ನ.13ರಂದು ಜ್ವರ ಕಾಣಿಸಿಕೊಂಡಿತ್ತು. ಮೊದಲು ಸಿಂಧನೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು. ಬಳಿಕ ಡೆಂಘೀ ಜ್ವರ ದೃಢ ಹಿನ್ನೆಲೆ ವಿಜಯನಗರದ ವಿಮ್ಸ್ ಆಸ್ಪತ್ರೆಗೆ ಶಿಫ್ಟ್‌ ಮಾಡಿ ನ.15 ರಿಂದ 18 ವರೆಗೆ ಚಿಕಿತ್ಸೆ ನೀಡಲಾಗಿತ್ತು. ವಿಜಯನಗರದ ವಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರು ಸ್ಯಾಂಪಲ್ ಸಂಗ್ರಹಿಸಿ ಪುಣೆಯ ವೈರಾಲಜಿ ಲ್ಯಾಬ್‌ಗೆ ಸ್ಯಾಂಪಲ್ ಕಳಿಸಿದ್ದರು. ಪುಣೆಯ ವೈರಾಲಜಿ ಲ್ಯಾಬ್‌ನಿಂದ ಪಾಸಿಟಿವ್ ರಿಪೋರ್ಟ್‌ ಬಂದಿದೆ. ಡಿಸೆಂಬರ್ 9ರಂದು ಬಾಲಕಿಗೆ ಝೀಕಾ ಸೋಂಕು ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೈಅಲರ್ಟ್ ಆಗಿದೆ. ಬಾಲಕಿಯ ಕುಟುಂಬಸ್ಥರ ರಕ್ತ ಹಾಗೂ ಯೂರಿನ್‌ ಸ್ಯಾಂಪಲ್‌ ಸಂಗ್ರಹಿಸಲಾಗಿದ್ದು ಐದು ಜನರ ಸ್ಯಾಂಪಲ್ ನೆಗೆಟಿವ್ ಬಂದಿದೆ. ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:38 pm, Mon, 12 December 22