AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಮೀನು ಸರ್ವೆ: ಕೋರ್ಟ್ ಆದೇಶ ಪಾಲನೆಗೆ ವಿಳಂಬ, ಪಾಂಡವಪುರ ತಹಶೀಲ್ದಾರ್‌ಗೆ 3 ಲಕ್ಷ ರೂ. ದಂಡ

ಜಮೀನು ಸರ್ವೆ ಸಂಬಂಧ ಕೋರ್ಟ್ ಆದೇಶ ಪಾಲನೆ ವಿಳಂಬ ಮಾಡಿದಕ್ಕೆ ಪಾಂಡವಪುರ ತಹಶೀಲ್ದಾರ್‌ಗಳಿಗೆ 3 ಲಕ್ಷ ದಂಡ ವಿಧಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಜಮೀನು ಸರ್ವೆ: ಕೋರ್ಟ್ ಆದೇಶ ಪಾಲನೆಗೆ ವಿಳಂಬ, ಪಾಂಡವಪುರ ತಹಶೀಲ್ದಾರ್‌ಗೆ 3 ಲಕ್ಷ ರೂ. ದಂಡ
ಕರ್ನಾಟಕ ಹೈಕೋರ್ಟ್
TV9 Web
| Edited By: ಆಯೇಷಾ ಬಾನು|

Updated on: Dec 12, 2022 | 8:20 PM

Share

ಬೆಂಗಳೂರು: ಜಮೀನು ಸರ್ವೆ ಸಂಬಂಧ ಕೋರ್ಟ್(High Court) ಆದೇಶ ಪಾಲನೆಗೆ 8 ವರ್ಷ ವಿಳಂಬಕ್ಕೆ ಕಾರಣರಾದ ಪಾಂಡವಪುರ ತಹಶೀಲ್ದಾರ್‌ಗಳಿಗೆ 3 ಲಕ್ಷ ದಂಡ ವಿಧಿಸಿ(Pandavapura Tahsildar) ಹೈಕೋರ್ಟ್ ಆದೇಶ ನೀಡಿದೆ. ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್.ಹೇಮಲೇಖಾರವರಿದ್ದ ಪೀಠ ಆದೇಶ ಹೊರಡಿಸಿದೆ. ಅಧಿಕಾರಿಗಳ ವಿಳಂಬ ನೀತಿಗೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರ ಹಾಕಿದೆ. ಜನ ಕೊನೆಯ ದಾರಿ ಎಂದು ನ್ಯಾಯಾಲಯಕ್ಕೆ ಬರುತ್ತಾರೆ. ಕೋರ್ಟ್ ಆದೇಶ ಪಾಲನೆಯಾಗದಿದ್ರೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂದು ತಪ್ಪಿತಸ್ಥ ತಹಶೀಲ್ದಾರ್‌ಗಳಿಂದ 3 ಲಕ್ಷ ರೂ. ದಂಡ ವಸೂಲಿಗೆ ಕೋರ್ಟ್ ಆದೇಶ ನೀಡಿದೆ.

72 ವರ್ಷದ ರೈತ ಮಹಿಳೆ ಪಾರ್ವತಮ್ಮ ಹೈಕೋರ್ಟ್ ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ 2014 ರ ಜುಲೈ ತಿಂಗಳಲ್ಲಿ ತಹಸೀಲ್ದಾರ್ ಗೆ ಆದೇಶ ನೀಡಿದ್ದರೂ ಮಂಡ್ಯದ ಪಾಂಡವಪುರದ ವಡೇಸಮುದ್ರ ಗ್ರಾಮದ ಸರ್ವೆ ನಂಬರ್123/ P4 ನ ಸರ್ವೆ ಹಾಗೂ ಪೋಡಿ ಮಾಡಿ ದುರಸ್ತಿ ಮಾಡಿಕೊಟ್ಟಿಲ್ಲವೆಂದು ಆರೋಪಿಸಿದ್ದರು. ಈ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸಿದ ಪಾಂಡವಪುರದ ಈಗಿನ ತಹಸೀಲ್ದಾರ್ ನಯನಾ ಎಸ್.ಎಲ್., ವಿಳಂಬಕ್ಕೆ ಆಡಳಿತಾತ್ಮಕ ಕಾರಣಗಳನ್ನು ನೀಡಿದ್ದರು. ಆದರೆ ಈಗ ಸರ್ವೆ ಮಾಡಿ ಹೊಸ ನಂಬರ್ ನೀಡಲಾಗಿದೆ, ಕೋರ್ಟ್ ಆದೇಶ ಪಾಲಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಮೈಸೂರಲ್ಲಿ ಚಿರತೆ ಭೀತಿ ಮಧ್ಯೆ ಹುಲಿ ದಾಳಿ: ಓರ್ವ ರೈತನಿಗೆ ಗಾಯ

ಆದರೆ 2014 ರ ಆದೇಶ ಪಾಲನೆಗೆ 8 ವರ್ಷ ವಿಳಂಬವಾಗಿರುವ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜೊತೆಗೆ ಸರ್ಕಾರ ಹೈಕೋರ್ಟ್ ಆದೇಶ ಪಾಲನೆಗೆ ವಿಳಂಬ ಮಾಡದಂತೆ 2022 ರ ಜನವರಿ 31 ರಂದು ಸುತ್ತೋಲೆ ಹೊರಡಿಸಿದ್ದರೂ ಸಮರ್ಪಕವಾಗಿ ಪಾಲಿಸದ ಅಧಿಕಾರಗಳ ಬಗ್ಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ವಿಳಂಬಕ್ಕೆ ಕಾರಣರಾದ ತಹಶೀಲ್ದಾರ್‌ಗಳಿಂದ 3 ಲಕ್ಷ ರೂಪಾಯಿ ದಂಡವನ್ನು ಮಂಡ್ಯದ ಜಿಲ್ಲಾಧಿಕಾರಿ ವಸೂಲು ಮಾಡಬೇಕು. ಅವರ ಸೇವಾ ದಾಖಲೆಯಲ್ಲೂ ಇದನ್ನು ನಮೂದು ಮಾಡಬೇಕು. ವಸೂಲು ಮಾಡಿದ ಹಣವನ್ನು ಅರ್ಜಿದಾರರಾದ ಪಾರ್ವತಮ್ಮ ನವರಿಗೆ ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಅಮಿತ್ ಶಾ ಅವರನ್ನು ಸದನಕ್ಕೆ ಕರೆಸಿ; ಸರ್ಕಾರಕ್ಕೆ ರಾಜ್ಯಸಭಾ ಸಭಾಪತಿ ಸೂಚನೆ
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಮೀಸಲಾತಿ ವ್ಯವಸ್ಥೆ ಬಗ್ಗೆ RSS​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
‘ಸಿಟಿ ಲೈಟ್ಸ್’ ಸಿನಿಮಾ ಚಿತ್ರೀಕರಣದ ಅನುಭವ ಹಂಚಿಕೊಂಡ ಮೋನಿಷಾ: ವಿಡಿಯೋ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ: ನದಿ ತೀರಕ್ಕೆ ತೆರಳದಂತೆ ಕಟ್ಟೆಚ್ಚರ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಭೈರತಿ ಸುರೇಶ್ ವಿರುದ್ಧ ಅವಹೇಳನಕಾರಿ ಕಮೆಂಟ್: ಸಿದ್ದರಾಮಯ್ಯ ಅಭಿಮಾನಿ ಬಂಧನ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
ಕಂಚಿನ ಪದಕ ವಿಜೇತೆ ಕನ್ನಡತಿ ಶಿಲ್ಪಾಗೆ ಅದ್ಧೂರಿ ಸ್ವಾಗತ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
‘ಬಾಸ್’ ಸಿನಿಮಾ ನೋಡಿದ ದರ್ಶನ್ ವಕೀಲರು ಹೇಳಿದ್ದೇನು? ವಿಡಿಯೋ
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ನೂತನ 19 ಸಚಿವರಿಗೆ ಇಂದೇ ಖಾತೆ ಹಂಚಿಕೆ?
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ
ಸಿದ್ದರಾಮಯ್ಯ ಮೇಲೆ ಅಹಿಂದ ಶಾಸಕರ ಅಸಮಾಧಾನ