ಮೈಸೂರಲ್ಲಿ ಚಿರತೆ ಭೀತಿ ಮಧ್ಯೆ ಹುಲಿ ದಾಳಿ: ಓರ್ವ ರೈತನಿಗೆ ಗಾಯ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದ ರೈತನೋರ್ವನ ಮೇಲೆ ಹುಲಿ ದಾಳಿ ಮಾಡಿದೆ.

ಮೈಸೂರಲ್ಲಿ ಚಿರತೆ ಭೀತಿ ಮಧ್ಯೆ ಹುಲಿ ದಾಳಿ: ಓರ್ವ ರೈತನಿಗೆ ಗಾಯ
ಸಾಂಧರ್ಬಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 12, 2022 | 7:50 PM

ಮೈಸೂರು: ಜಿಲ್ಲೆಯಲ್ಲಿ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಟಿ. ನರಸಿಪುರ ಮತ್ತು ನಂಜನಗೂಡು (Nanjangud) ತಾಲೂಕಿನ ಜನರು ಭಯದಲ್ಲೇ ಓಡಾಡುವಂತಾಗಿದೆ. ಚಿರತೆ ಭಯ ಕಡಮೆಯಾಗುವ ಮುನ್ನವೇ ನಂಜನಗೂಡು ತಾಲೂಕಿನ ಬಳ್ಳೂರುಹುಂಡಿ ಗ್ರಾಮದ ರೈತರೊಬ್ಬರ ಮೇಲೆ ಹುಲಿ (Tiger) ದಾಳಿ ಮಾಡಿದೆ. ಬಳ್ಳೂರುಹುಂಡಿ ಗ್ರಾಮದ ದಾಸಯ್ಯ ಎಂಬುವರು ಹಸು ಮೇಯಿಸುತ್ತಿದ್ದಾಗ ಹುಲಿ ದಾಳಿ ಮಾಡಿದೆ. ಇದರಿಂದ ದಾಸಯ್ಯ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಿ ದಾಳಿಯಿಂದ ಆತಂಕಕ್ಕೆ ಒಳಗಾದ ಗ್ರಾಮಸ್ಥರು, ಭಯದಲ್ಲೇ ಓಡಾಡುವಂತಾಗಿದೆ.

ಟಿ.ನರಸೀಪುರದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದ ಚಿರತೆ

ಟಿ.ನರಸೀಪುರ  ತಾಲೂಕಿನ ಜನರ ನಿದ್ದೆಗೆಡಿಸಿರುವ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿಗಳ ಕಣ್ಣಿಗೂ ಬೀಳದೆ ತಪ್ಪಿಸಿಕೊಳ್ಳುತ್ತಿದ್ದು, ಚಿರತೆ ಸೆರೆ ಕಾರ್ಯಾಚರಣೆ ನಡೆಸುತ್ತಿರುವ ತಂಡ ಹರಸಾಹಸ ಪಡುತ್ತಿದೆ. ಈ ನಡುವೆ ಸಿಬ್ಬಂದಿ ಕಣ್ಣು ತಪ್ಪಿಸಿಕೊಂಡು ಬಂದ ಚಿರತೆ ಕುರಿ, ಮೇಕೆ ಮೇಲೆ ದಾಳಿ  ನಡೆಸಿದ ಘಟನೆ ತಾಲೂಕಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡುವೆಯೂ ಚಿರತೆ ದಾಳಿ ನಡೆದಿರುವುದರಿಂದ ಜನರಲ್ಲಿನ ಭೀತಿ ಮತ್ತಷ್ಟು ಹೆಚ್ಚಾಗಿದೆ. ತಾಲೂಕಿನಲ್ಲಿ ಚಿರತೆ ದಾಳಿಗೆ ಒಂದೇ ತಿಂಗಳಲ್ಲಿ  ಇಬ್ಬರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಚಿರತೆ ಭೀತಿ: ದೊಣ್ಣೆ ಹಿಡಿದುಕೊಂಡು ಬೆಳೆ ಕಟಾವು ಮಾಡುತ್ತಿರುವ ಗಂಡ-ಹೆಂಡತಿ

ಟಿ.ನರಸೀಪುರ ತಾಲೂಕಿನ ಎಸ್.ಕೆಬ್ಬೆಹುಂಡಿ ಗ್ರಾಮದ ಮನೆ ಮುಂದೆ ಕುಳಿತಿದ್ದಾಗ ಗುರುವಾರ ಸಂಜೆ ಚಿರತೆ ದಾಳಿ ಮಾಡಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮೇಘನಾಳನ್ನ (20) ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆಯ ಕೊನೆಯುಸಿರೆಳೆದಿದ್ದಳು.

ಇದನ್ನೂ ಓದಿ: ಮೈಸೂರು: ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದ್ದಾದರೂ ಹೇಗೆ ಎಂಬುದು ಇಲ್ಲಿದೆ ನೋಡಿ

ಎರಡು ಬಲಿ ಪಡೆದ ನಂತರ ಎಚ್ಚೆತ್ತ ಅರಣ್ಯ ಇಲಾಖೆ, ತಾಲೂಕಿನಲ್ಲಿ ಚಿರತೆ ಹಿಡಿಯಲು ಬೋನು ಇರಿಸಿದ್ದಾರೆ. ಅರಣ್ಯ ಅಧಿಕಾರಿಗಳು ಚಿರತೆ ಸೆರೆಗೆ ಆರಂಭಿಸಿದ ವಿಶೇಷ ಕಾರ್ಯಾಚರಣೆ ಫಲ ನೀಡದ ಹಿನ್ನೆಲೆ ಚಿರತೆ ಪತ್ತೆ ಕಾರ್ಯತಂತ್ರ ಬದಲಿಸಿ ಉತ್ತಮ ಗುಣಮಟ್ಟದ ಥರ್ಮಲ್ ಕ್ಯಾಮೆರಾ ಮತ್ತು ಡ್ರೋನ್‌ ಮೂಲಕ ಕಾರ್ಯಾಚರಣೆಗೆ ಇಳಿದರು. ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆ ಈ ರೀತಿಯ ಕ್ಯಾಮೆರಾವನ್ನು ಪ್ರಾಯೋಗಿಕವಾಗಿ ಬಳಸುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:37 pm, Mon, 12 December 22

ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಕುಕ್ಕರ್ ಬ್ರ್ಯಾಂಡ್ ಜನರನ್ನು ಸಿದ್ದರಾಮಯ್ಯ ಬ್ರದರ್ಸ್ ಅನ್ನುತ್ತಾರೆ: ಅಶೋಕ
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಐದಾರು ನಕ್ಸಲರಿಗೆ ಶೋಧ: ಶರಣಾಗತಿಗೆ ಆದ್ಯತೆ..ಇಲ್ಲದಿದ್ರೆ ಎನ್‌ಕೌಂಟರ್​?
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಮುಡಾ ಪ್ರಕರಣ ವಿಚಾರಣೆಯ ಬಗ್ಗೆ ನಟೇಶ್ ಯಾವುದೇ ವಿವರಣೆ ನೀಡಲಿಲ್ಲ
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಎನ್​ಕೌಂಟರ್​ನಲ್ಲಿ ಹತ್ಯೆಯಾದ ವಿಕ್ರಂ ಗೌಡನ ಜಾತಕ ಬಿಚ್ಚಿಟ್ಟ ಐಜಿಪಿ!
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ಬಿಗ್​ಬಾಸ್​ ಮನೆಯಲ್ಲಿ ಮಡಿಕೆಗಳ ಜೊತೆಗೆ ಒಡೆದ ಮನಸುಗಳು
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ವಿರೋಧ ಪಕ್ಷದ ತಾಕತ್ತನ್ನು ಸರ್ಕಾರಕ್ಕೆ ತೋರಿಸಿದ್ದೇವೆ: ಅರ್ ಆಶೋಕ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
ಬೀದರ್​: ನ.24ರಿಂದ ಎರಡು ದಿನಗಳ ಕಾಲ ಅನುಭವಮಂಟಪ ಉತ್ಸವ
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
IND vs AUS: ಮೊದಲ ಪಂದ್ಯಕ್ಕೆ ನಾನು ರೆಡಿ ಎಂದ ಕನ್ನಡಿಗ ಕೆಎಲ್ ರಾಹುಲ್
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್
ಜಮೀನು ಖರೀದಿಸಲು ಮುಡಾ ನಿರ್ಧರಿಸಿದ್ದರೂ ರೈತರು ತಯಾರಿರಲಿಲ್ಲ: ಧ್ರುವಕುಮಾರ್