ಮೈಸೂರು: ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದ್ದಾದರೂ ಹೇಗೆ ಎಂಬುದು ಇಲ್ಲಿದೆ ನೋಡಿ

ಏಚಗಳ್ಳಿ ಗ್ರಾಮದಲ್ಲಿ ಜನರಿಗೆ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟ ಬೋನಿನೊಳಗೆ ಸೆರೆಯಾಗಿದೆ. ಆ ಮೂಲಕ ಜನರು ಕೊಂಚ ನಿಟ್ಟುಸಿರುವ ಬಿಟ್ಟಿದ್ದಾರೆ.

ಮೈಸೂರು: ಜನರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ ಬಿದ್ದಿದ್ದಾದರೂ ಹೇಗೆ ಎಂಬುದು ಇಲ್ಲಿದೆ ನೋಡಿ
ಮೈಸೂರು: ಕೊನೆಗೂ ಸೆರೆಯಾದ ಜನರ ನಿದ್ದೆಗೆಡಿಸಿದ್ದ ಚಿರತೆ, ಬೋನಿಗೆ ಬಿದ್ದಿದ್ದಾದರೂ ಹೇಗೆ ಎಂಬುದು ಇಲ್ಲಿದೆ ನೋಡಿ
Follow us
TV9 Web
| Updated By: Rakesh Nayak Manchi

Updated on:Dec 08, 2022 | 1:11 PM

ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಏಚಗಳ್ಳಿ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿನ ಒಳಗೆ ಸೆರೆ (Leopard Caught)ಯಾಗಿದೆ. ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆಯಿಂದಾಗಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಜನರಲ್ಲಿನ ಭೀತಿ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಇದಕ್ಕೆ ಕಾರಣ, ಸೆರೆಯಾದ ಚಿರತೆಗೆ ಮೂರು ಮರಿಗಳು ಇದ್ದು, ಅವುಗಳನ್ನು ನಾವು ನೋಡಿದ್ದೇವೆ. ಮೂರು ಮರಿಗಳನ್ನು ಕೂಡ ಸೆರೆ ಹಿಡಿಯುವಂತೆ ಜನರು ಅರಣ್ಯ ಇಲಾಖೆ (Forest Department) ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಹಾಗಿದ್ದರೆ ಏಚಗಳ್ಳಿ ಗ್ರಾಮದ ಜನರಲ್ಲಿ ಭೀತಿ ಹುಟ್ಟಿಸಿದ್ದ ಮತ್ತು ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಸೆರೆಯಾಗಿದ್ದು ಹೇಗೆ? ಇಲ್ಲಿದೆ ನೋಡಿ ಮಾಹಿತಿ.

ಕಳೆದ 15 ದಿನಗಳ ಹಿಂದೆ ಏಚಗಳ್ಳಿ ಗ್ರಾಮದಲ್ಲಿನ ಜನರ ಕಣ್ಣಿಗೆ ಚಿರತೆ ಬಿದ್ದಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಕಣ್ಮರೆಯಾಗುತ್ತಿತ್ತು. ಇದರಿಂದಾಗಿ ಜನರು ಮನೆಯಿಂದ ಹೊರಗೆ ಬರಲು ಭಯ ಪಡುತ್ತಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಕೂಡಲೇ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಚಿರತೆ ಸೆರೆಗೆ ಬೋನ್ ಇರಿಸಿದ್ದರು. ರೈತ ದಿನೇಶ್ ಅವರ ಜಮೀನಿನಲ್ಲಿ ಅಧಿಕಾರಿಗಳು ಈ ಬೋನ್ ಅನ್ನು ಇರಿಸಿದ್ದರು.

ಇದನ್ನೂ ಓದಿ: ಎರಡು ವಾರಗಳಿಂದ ನಂಜನಗೂಡು ಬಳಿಯ ಏಚಗಳ್ಳಿ ಗ್ರಾಮಸ್ಥರನ್ನು ಕಾಡುತ್ತಿದ್ದ ಚಿರತೆ ಬಿತ್ತು ಬೋನಿಗೆ!

ಸಾಮಾನ್ಯವಾಗಿ ಹುಲಿ ಸೆರೆಗೆ ಕರುವನ್ನು ಬೋನಿನಲ್ಲಿ ಇರಿಸಲಾಗುತ್ತದೆ. ಅದೇ ರೀತಿ ನಾಡಿಗೆ ನುಗ್ಗುವ ಚಿರತೆಗಳು ಹೆಚ್ಚಾಗಿ ನಾಯಿಗಳ ಮೇಲೆ ದಾಳಿ ನಡೆಸುವುದರಿಂದ ನಾಯಿಯನ್ನೇ ಬೋನಿನಲ್ಲಿ ಇರಿಸಲಾಗುತ್ತದೆ. ಅದೇ ರೀತಿ ರೈತ ದಿನೇಶ್ ಅವರ ಜಮೀನಿನಲ್ಲಿ ಇಟ್ಟಿದ್ದ ಬೋನಿನೊಳಗೆ ನಾಯಿಯನ್ನು ಇರಿಸಲಾಗಿತ್ತು. ರಾತ್ರಿ ವೇಳೆ ಆಹಾರ ಅರಸಿಕೊಂಡು ಬಂದ ಚಿರತೆ ಇಂದು ತನ್ನ ಬೇಟೆ ಸಿಕ್ಕುತು ಎಂದು ನೇರವಾಗಿ ಬೋನಿನೊಳಗೆ ನುಗ್ಗಿ ತಗಲಾಕೊಂಡಿದೆ.

ಅರಣ್ಯ ಇಲಾಖೆಯವರು ನೀಡಿರುವ ಮಾಹಿತಿ ಪ್ರಕಾರ, ಸೆರೆಸಿಕ್ಕಿರುವ ಚಿರತೆ ಹೆಣ್ಣಾಗಿದೆ. ಈ ಚಿರತೆ ಇತ್ತೀಚಿಗೆ ಮೂರು ಮರಿಗಳನ್ನು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಈ ಪ್ರದೇಶ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮರಿಗಳನ್ನು ಹುಡುಕಾಟ ನಡೆಸುವಂತೆ ಗ್ರಾಮಸ್ಥರ ಒತ್ತಾಯ ಮಾಡಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:04 pm, Thu, 8 December 22