AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿರಿಯಾಪಟ್ಟಣ ತಾಲೂಕಿನಲ್ಲಿ ಚಿರತೆಗೆ ಹಸು ಬಲಿ, ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹ

ಪಿರಿಯಾಪಟ್ಟಣ ತಾಲೂಕಿನ ತಿಮ್ಕಾಪುರ ದಡ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿದೆ. ಇನ್ನೊಂದೆಡೆ ಹುಣಸೂರು ತಾಲೂಕಿನಲ್ಲಿ ಕಳೆದ ಒಂದು ವಾರದಲ್ಲಿ 7 ಸಾಕು ಪ್ರಾಣಿಗಳು ಹುಲಿ ದಾಳಿಗೆ ಬಲಿಯಾಗುವ ಮೂಲಕ ಜನರಲ್ಲಿ ಆತಂಕ ಹೆಚ್ಚಿಸಿದೆ.

ಪಿರಿಯಾಪಟ್ಟಣ ತಾಲೂಕಿನಲ್ಲಿ ಚಿರತೆಗೆ ಹಸು ಬಲಿ, ಚಿರತೆ ಸೆರೆಗೆ ಗ್ರಾಮಸ್ಥರ ಆಗ್ರಹ
ಪಿರಿಯಾಪಟ್ಟಣ ತಾಲೂಕಿನಲ್ಲಿ ಚಿರತೆಗೆ ಹಸು ಬಲಿ, ಹುಣಸೂರು ತಾಲೂಕಿನಲ್ಲಿ ಹೆಚ್ಚಿದ ಹುಲಿ ಭೀತಿ
TV9 Web
| Updated By: Rakesh Nayak Manchi|

Updated on: Dec 02, 2022 | 3:09 PM

Share

ಮೈಸೂರು: ಪಿರಿಯಾಪಟ್ಟಣ ತಾಲೂಕಿನ (Periyapatna Taluk) ತಿಮ್ಕಾಪುರ ದಡ ಗ್ರಾಮದಲ್ಲಿ ಚಿರತೆ ದಾಳಿಗೆ (Leopard attack) ಹಸು ಬಲಿಯಾಗಿದೆ. ಇನ್ನೊಂದೆಡೆ ಹುಣಸೂರು ತಾಲೂಕಿನಲ್ಲಿ (Hunsur Taluk) ಕಳೆದ ಒಂದು ವಾರದಲ್ಲಿ 7 ಸಾಕು ಪ್ರಾಣಿಗಳು ಹುಲಿ ದಾಳಿಗೆ (Tiger Attack) ಬಲಿಯಾಗುವ ಮೂಲಕ ಜನರಲ್ಲಿ ಆತಂಕ ಹೆಚ್ಚಿಸಿದೆ. ಪಿರಿಯಾಪಟ್ಟಣ ತಾಲೂಕಿನ ತಿಮ್ಕಾಪುರ ದಡ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿದೆ. ಸೋಮಶೇಖರ ಆಚಾರಿ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಚಿರತೆ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದರು.

ಬೂದಿತಿಟ್ಟು ಬಳಿಯ ಕಾಡಿನಿಂದ ಬಂದ ಚಿರತೆ ಪಿರಿಯಾಪಟ್ಟಣ ತಾಲ್ಲೂಕು ತಿಮ್ಕಾಪುರ ದಡ ಗ್ರಾಮಕ್ಕೆ ನುಗ್ಗಿ ರೈತ ಸೋಮಶೇಖರಚಾರಿ ಅವರಿಗೆ ಸೇರಿದ ಹಸುವನ್ನು ಕೊಂದು ಹಾಕಿದೆ. ಕಳೆದ ಒಂದು ವಾರದಿಂದ ಚಿರತೆ ಕಾಡಿನಿಂದ ನಾಡಿಗೆ ಬರುತ್ತಿದ್ದು, ಸ್ಥಳದಲ್ಲಿ ಬೋನು ಇಡುವಂತೆ ಗ್ರಾಮಸ್ಥರ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಇನ್ನು, ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಮತ್ತೆ ಹುಲಿ ಭೀತಿ ಎದುರಾಗಿದೆ. ಶೆಟ್ಟಳ್ಳಿ, ಅಬ್ಬೂರು, ಬಿ.ಆರ್​.ಕಾವಲ್ ಗ್ರಾಮದಲ್ಲಿ ಹುಲಿ ಓಡಾಟ ಹೆಚ್ಚಾಗಿದ್ದು, ಕಳೆದ ಒಂದು ವಾರದಲ್ಲಿ ಹುಲಿ ದಾಳಿಗೆ 7 ಸಾಕು ಪ್ರಾಣಿಗಳು ಬಲಿಯಾಗಿವೆ. ಹೀಗಾಗಿ ಶಾಲಾ-ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಮನೆಯಿಂದ ಹೊರ ಬರಲು ಜನರು ಹೆದರುತ್ತಿದ್ದಾರೆ. ಸದ್ಯ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆ ಮೂಲಕ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಲ್ಯಾಣ ಮಂಟಪಕ್ಕೂ ತಟ್ಟಿದ ಚಿರತೆ ಭಯ; ಹಾಲ್​ ಕಡೆ ಮುಖಮಾಡದ ಜನ, 30 ಬಗೆಯ ಅಡುಗೆ ವ್ಯರ್ಥ

ಚಿರತೆ ಹಾವಳಿ ಹೆಚ್ಚಾದರೂ ಕೈಕಟ್ಟಿ ಕುಳಿತ ಅರಣ್ಯ ಇಲಾಖೆ

ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಿದ್ದರೂ ಅರಣ್ಯ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು .ನರಸೀಪುರ ಕ್ಷೇತ್ರದ ಶಾಸಕ ಅಶ್ವಿನ್​ಕುಮಾರ್ ಹೇಳಿದ್ದಾರೆ. ಚಿರತೆ ದಾಳಿಗೆ ಯುವತಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಅವರು, ಕಳೆದ ಒಂದು ತಿಂಗಳ ಹಿಂದೆಯೂ ಚಿರತೆ ದಾಳಿ ಮಾಡಿತ್ತು. ಇಲಾಖೆಯು ಸ್ವಲ್ಪ ಕೆಲಸ ಮಾಡಿ ಸಮ್ಮನಾಗಿದೆ. ಹೀಗಾಗಿ ನಾವು ಅರಣ್ಯ ಇಲಾಖೆಗೆ ಚುರುಕುಮುಟ್ಟಿಸುವ ಕೆಲಸ ಮಾಡಿದ್ದೇವೆ. ಕಬ್ಬು ಕಟಾವು ಆಗದಿರುವುದು ಸಹ ಘಟನೆಗೆ ಮತ್ತೊಂದು ಕಾರಣವಾಗಿದೆ. ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿಸುವುದಾಗಿ ಇಲಾಖೆ ಹೇಳಿದೆ ಎಂದರು.

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೈತರು

ಚಿರತೆದಾಳಿಗೆ ಯುವತಿಯ ಬಲಿ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ರೈತರು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಯುವತಿ ದಾಳಿಗೆ ತುತ್ತಾದ ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಬಂದಾಗ ಈ ಘಟನೆ ನಡೆದಿದೆ. ನಿರಂತರವಾಗಿ ಇಂತಹ ಘಟನೆ ನೆಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳಲಿಲ್ಲ. ನಿನ್ನೆ ಘಟನೆ ನೆಡೆದಿದೆ ಎಂದು ಮಾಹಿತಿ ಕೊಟ್ಟರು ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬರಲಿಲ್ಲ. ನಿಮ್ಮಿಂದ ಇನ್ನೆಷ್ಟು ಜನರ ಪಡೆಯಬೇಕು ಎಂದು ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ದಾಳಿ; ಶಾಲಾ ಕಾಲೇಜುಗಳಿಗಿಲ್ಲ ರಜೆ, ಇಂದು ಸಹ‌ ಮುಂದುವರೆಯಲಿರುವ ಚೀತಾ ಕೂಂಬಿಂಗ್

ಚಿರತೆ ಸೆರೆ ಹಿಡಿಯಲು 10 ವಿಶೇಷ ತಂಡ ರಚನೆ

ಟಿ.ನರಸೀಪುರ ತಾಲೂಕಿನಲ್ಲಿ ಭೀತಿ ಹುಟ್ಟಿಸಿದ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆಯಿಂದ 10 ವಿಶೇಷ ತಂಡಗಳನ್ನು ರಚನೆ ಮಾಡಲಿದೆ. ಮೈಸೂರು ವೃತ್ತ ಸಿಸಿಎಫ್​ ಮಾಲತಿ ಪ್ರಿಯಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಒಂದು ತಂಡದಲ್ಲಿ ಶೂಟರ್​ ಸೇರಿದಂತೆ 7 ಸಿಬ್ಬಂದಿ ಇರಲಿದ್ದಾರೆ. ಚಿರತೆ ಕಂಡಲ್ಲಿ ಶೂಟ್​ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ. ಮೈಸೂರು ವೃತ್ತದಲ್ಲಿರುವ ಅರಣ್ಯ ಸಿಬ್ಬಂದಿಗಳ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಆಗಮಿಸಿ ಹೆಜ್ಜೆ ಗುರುತಿನ ಆಧಾರದ ಮೂಲಕ ಚಿರತೆ ವಯಸ್ಸು ಸೇರಿದಂತೆ ಇತರೆ ಮಾಹಿತಿಗಳನ್ನ ಕಲೆ ಹಾಕಲಾಗುತ್ತಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ