Crime News: ಎಣ್ಣೆ ವಿಚಾರಕ್ಕೆ ಬಾಟಲಿಯಿಂದ ಹೊಡೆದು ಸ್ನೇಹಿತನ ಬರ್ಬರ ಹತ್ಯೆ

| Updated By: Rakesh Nayak Manchi

Updated on: Jul 28, 2022 | 9:57 AM

ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳ ಓರ್ವನ ಬರ್ಬಲ ಹತ್ಯೆಯಾಗುವ ಮೂಲಕ ಕೊನೆಗೊಂಡ ಘಟನೆ ನಗರದ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ನಡೆದಿದೆ.

Crime News: ಎಣ್ಣೆ ವಿಚಾರಕ್ಕೆ ಬಾಟಲಿಯಿಂದ ಹೊಡೆದು ಸ್ನೇಹಿತನ ಬರ್ಬರ ಹತ್ಯೆ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಮದ್ಯದ ವಿಚಾರಕ್ಕೆ ಸ್ನೇಹಿತರ ನಡುವೆ ನಡೆದ ಜಗಳ ಓರ್ವನ ಬರ್ಬಲ ಹತ್ಯೆಯಾಗುವ ಮೂಲಕ ಕೊನೆಗೊಂಡ ಘಟನೆ ನಗರದ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ನಡೆದಿದೆ. ಪ್ರಶಾಂತ್(30) ಎಣ್ಣೆ ವಿಚಾರದಲ್ಲಿ ಕೊಲೆಯಾದ ವ್ಯಕ್ತಿ. ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಎಣ್ಣೆ ವಿಚಾರಕ್ಕೆ ಪ್ರಶಾಂತ್ ಮತ್ತು ಆತನ ಸ್ನೇಹಿತನ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿದ್ದಲ್ಲದೆ ಕೋಪದಿಂದ ಪ್ರಶಾಂತ್​ಗೆ ಬಾಟಲಿಯಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಘಟನೆ ಸಂಬಂಧ ಮಾಹಿತಿ ತಿಳಿದ ಸಿಟಿ ಮಾರ್ಕೆಟ್ ಠಾಣಾ ಪೊಲೀಸರು, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್

ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಆ್ಯಂಬುಲೆನ್ಸ್ ಸೇತುವೆಗೆ ಡಿಕ್ಕಿ ಹೊಡೆದ ಘಟನೆ ನಗರದ ಶಿರಾ ಗೇಟ್​ ಬಳಿ ತಡರಾತ್ರಿ ನಡೆದಿದೆ. ರೋಗಿಯೊಬ್ಬರನ್ನು ಶಿರಾದಿಂದ ಜಿಲ್ಲಾಸ್ಪ್ರತ್ರೆಕೆ ಕರೆತರಲಾಗುತ್ತಿತ್ತು. ಈ ವೇಳೆ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಾ ಗೇಟ್​ ಬಳಿ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಕಿರಿದಾದ ರಸ್ತೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

Published On - 7:14 am, Thu, 28 July 22