ಪತಿ ಮೊಬೈಲ್ ನೋಡ್ತಿದ್ದಾಗ ಬೀಚ್‌ನಿಂದ ಎಸ್ಕೇಪ್ ಆಗಿದ್ದ ಗೃಹಿಣಿ ಪತ್ತೆ! ಈಕೆಯ ಆ ಕೃತ್ಯದಿಂದಾಗಿ ಸರ್ಕಾರಕ್ಕೆ ಖರ್ಚಾಗಿದ್ದು ಎಷ್ಟು ಗೊತ್ತಾ?
ಎಸ್ಕೇಪ್ ಆಗಿದ್ದ ಗಹಿಣಿಯ ಹುಡುಕಾಟಕ್ಕೆ ಅಂದಾಜು 1 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವಿಶಾಖಪಟ್ಟಣಂ ಪಾಲಿಕೆಯ ಉಪಮೇಯರ್ ಜಿಯಾನಿ ಶ್ರೀಧರ್ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ವೈಜಾಗ್ ಪೊಲೀಸರು ಸದ್ಯದಲ್ಲೇ ಬಹಿರಂಗಪಡಿಸುವ ಸಾಧ್ಯತೆಯಿದೆ.
ವೈಜಾಗ್: ಆರ್ ಕೆ ಬೀಚ್ ನಲ್ಲಿ 2 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿವಾಹಿತೆ ಸಾಯಿ ಪ್ರಿಯಾ ಪತ್ತೆಯಾಗಿದ್ದು, ಪ್ರಕರಣದಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ!
ಆಂಧ್ರಪ್ರದೇಶ: ವಿಶಾಖಪಟ್ಟಣದ ಆರ್‌ಕೆ ಬೀಚ್‌ನಲ್ಲಿ (RK Beach) ಸೋಮವಾರ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ಪ್ರಕರಣದ ಸಸ್ಪೆನ್ಸ್ ಅನ್ನು ಪೊಲೀಸರು ಭೇದಿಸಿದ್ದಾರೆ. ಪ್ರಿಯಕರ ರವಿಯೊಂದಿಗೆ ನೆಲ್ಲೂರಿಗೆ ಹೋಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಾಯಿಪ್ರಿಯಾ ತನ್ನ ಪ್ರಿಯಕರ ರವಿಯೊಂದಿಗೆ ನೆಲ್ಲೂರಿನಲ್ಲಿ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಪತಿ ಶ್ರೀನಿವಾಸ್ ತಮ್ಮ ಮೊಬೈಲ್ ಫೋನ್ ನಲ್ಲಿ ಮೆಸೇಜ್ಗಳನ್ನು ಪರಿಶೀಲಿಸುತ್ತಿದ್ದಾಗ ಪಕ್ಕದಲ್ಲಿಯೇ ಇದ್ದ ಸಾಯಿಪ್ರಿಯಾ ನಾಪತ್ತೆಯಾಗಿದ್ದರು. ಪತ್ನಿ ಕಾಣದಿದ್ದಾಗ ಆತಂಕಗೊಂಡ ಪತಿ ಸುತ್ತಮುತ್ತ ಜಾಲಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗದೆ, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದರು.
ಟಾಟಾ ಗುಡ್ ಬೈ ಖತಂ, ವಿವಾಹಿತೆ ಎಸ್ಕೇಪ್! ಏನಿದರ ವೃತ್ತಾಂತ?
ಮದುವೆಗೂ ಮುನ್ನ ರವಿ ಎಂಬಾತನ ಜತೆ ಸಾಯಿ ಪ್ರಿಯಾ ಅಕ್ರಮ ಸಂಬಂಧ ಹೊಂದಿದ್ದಳು. ಈ ಮಧ್ಯೆ, ಶ್ರೀನಿವಾಸ್ ಎಂಬಾತನ ಜೊತೆ ಎರಡನೇ ಮದುವೆ ಆಗಿದ್ದರು. ಮದುವೆ ವಾರ್ಷಿಕೋತ್ಸವದಂದು ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಎಂದು ಪ್ರೀತಿಯಿಂದ ಕೇಳಿದ್ದ ಮುದ್ದು ಮಡದಿಯ ಮಾತನ್ನು ಅಲ್ಲಗಳೆಯಲಾರದೆ ಪತಿ ಶ್ರೀನಿವಾಸ್ ಕೂಡಲೆ ಸಮ್ಮತಿ ಸೂಚಿಸಿದ್ದರು. ಆದರೆ ಮಡದಿಯ ಪ್ಲಾನ್ ಬೇರೆಯದ್ದೇ ಇದೆ ಎಂಬುದು ಅಮಾಯಕ ಪತಿ ಶ್ರೀನಿವಾಸ್ಗೆ ಆ ಕ್ಷಣ ತಿಳಿದುಬಂದಿಲ್ಲ.
ಆರ್‌ಕೆ ಬೀಚ್‌ನಲ್ಲಿ ಪತಿಯ ಜೊತೆ ಇದ್ದಾಗ.. ಫೋನ್ ಬಂತೂ ಎಂದು ಸ್ವಲ್ಪ ಆಚೀಚೆ ಎದ್ದುಹೋದ ಪತ್ನಿ ಸಾಯಿಪ್ರಿಯಾ ‘ಟಾಟಾ ಗುಡ್ ಬೈ ಖತಂ’ ಎಂದು ಪತಿಗೆ ಮನದಲ್ಲೇ ಹೇಳುತ್ತಾ ಹಳೇ ಲವರ್ ರವಿ ಎಂಬಾತನ ಜತೆ ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿಬಿಟ್ಟಿದ್ದಳು. ಕೊನೆಗೆ, ಪೊಲೀಸರು ಕಾರ್ಯಾಚರಣೆಗೆ ಇಳಿದು ಸಾಯಿಪ್ರಿಯಾ ನೆಲ್ಲೂರಿನಲ್ಲಿ (Nellore) ಇರುವುದನ್ನು ಪತ್ತೆಹಚ್ಚಿದ್ದಾರೆ. ಅಲ್ಲಿಂದ ಮಹಿಳೆಯನ್ನು ವಿಶಾಖಪಟ್ಟಣಕ್ಕೆ ಕರೆತರಲಾಗುತ್ತಿದೆ ಎಂದು ಉಪಮೇಯರ್ ಶ್ರೀಧರ್ ತಿಳಿಸಿದ್ದಾರೆ.
ಎಸ್ಕೇಪ್ ಆಗಿದ್ದ ಗಹಿಣಿಯ ಶೋಧಕ್ಕೆ ಸರ್ಕಾರ ಖರ್ಚು ಮಾಡಿದ್ದು ಎಷ್ಟು ಗೊತ್ತಾ..?
ಸಾಯಿಪ್ರಿಯಾ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾಳೆ ಎಂದು ಗಾಬರಿಗೊಂಡ ಪತಿ ಹೇಳಿದ ಮಾತನ್ನು ಕೇಳಿ ಸ್ಥಳೀಯ ಪೊಲೀಸರು ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡಿದ್ದರು. ಪತ್ನಿ ಸಾಯಿಪ್ರಿಯಾ ಪತ್ತೆಗೆ ವಿಶೇಷ ತಂಡ ನಿಯೋಜಿಸಲಾಗಿತ್ತು. ಸ್ಪೀಡ್ ಬೋಟ್‌ಗಳ ಜೊತೆಗೆ ನೌಕಾಪಡೆಯ ಹೆಲಿಕಾಪ್ಟರ್ ಅನ್ನು ಸಹ ಬಳಸಲಾಗಿತ್ತು.
ಸಂಬಂಧಪಟ್ಟ ಇನ್ನೂ ಕೆಲ ಸರ್ಕಾರಿ ಇಲಾಖೆಗಳ ಕೆಲ ಅಧಿಕಾರಿಗಳು ತಮ್ಮ ದೈನಂದಿನ ಕೆಲಸ ಪಕ್ಕಕ್ಕಿಟ್ಟು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡರು. ಆಕೆಯ ಹುಡುಕಾಟಕ್ಕೆ ಅಂದಾಜು 1 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವಿಶಾಖಪಟ್ಟಣಂ ಪಾಲಿಕೆಯ ಉಪಮೇಯರ್ ಜಿಯಾನಿ ಶ್ರೀಧರ್ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ವಿವರಗಳನ್ನು ವೈಜಾಗ್ ಪೊಲೀಸರು ಸದ್ಯದಲ್ಲೇ ಬಹಿರಂಗಪಡಿಸುವ ಸಾಧ್ಯತೆಯಿದೆ.
To read in Telugu click here