ಪ್ರೇಮಿಗಳು, ದಂಪತಿಗಳನ್ನ ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯ ಬಂಧನ

ಪ್ರೇಮಿಗಳು, ದಂಪತಿಗಳನ್ನು ಟಾರ್ಗೆಟ್​​ ಮಾಡಿ, ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್​ ಆರೋಪಿಯನ್ನು ನಗರದ ಹೆಚ್​ಎಸ್​ಆರ್​​ ಲೇಔಟ್​​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಗಣೇಶ್​ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್​​ ಜಪ್ತಿ ಮಾಡಲಾಗಿದೆ. ಕಳೆದ ಡಿ.17ರಂದು HSR ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರೇಮಿಗಳು, ದಂಪತಿಗಳನ್ನ ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯ ಬಂಧನ
ಬಂಧಿತ ಆರೋಪಿ ಗಣೇಶ್@ಗಣಿ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Dec 26, 2023 | 5:42 PM

ಬೆಂಗಳೂರು, ಡಿಸೆಂಬರ್​​ 26: ಪ್ರೇಮಿಗಳು, ದಂಪತಿಗಳನ್ನು ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್​ ಆರೋಪಿಯನ್ನು ನಗರದ ಹೆಚ್​ಎಸ್​ಆರ್​​ ಲೇಔಟ್​​ ಪೊಲೀಸರು ಬಂಧಿಸಿದ್ದಾರೆ (Arrest). ಗಣೇಶ್​​ ಬಂಧಿತ ಆರೋಪಿ. ಪ್ರೇಮಿಗಳು ಮತ್ತು ದಂಪತಿಗಳನ್ನ ಹಿಂಬಾಲಿಸಿ ಮೊಬೈಲ್​​, ಹಣ, ಚಿನ್ನ ದೋಚುತ್ತಿದ್ದ. ಆರೋಪಿ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್​​ ಜಪ್ತಿ ಮಾಡಲಾಗಿದೆ. ಕಳೆದ ಡಿ.17ರಂದು HSR ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾಲ್ಕೈದು ವರ್ಷದ ಹಿಂದೆ ಪೊಲೀಸರಿಗೆ ಪಂಚನಾಮೆಗೆ ಸಹಕರಿಸಿದ್ದ. ಪೊಲೀಸರು ದಾಳಿ ಮಾಡುವ ಸ್ಟೈಲ್​ನ್ನು ಗಣೇಶ್@ಗಣಿ ​​ಗಮನಿಸಿದ್ದ. ಹಲವು ಪ್ರಕರಣದಲ್ಲಿ ನಕಲಿ ಪೊಲೀಸ್​​ ಸೋಗಿನಲ್ಲಿ ಹೋಗುತ್ತಿದ್ದ. ಪ್ರೇಮಿಗಳು, ದಂಪತಿಯನ್ನೇ ಟಾರ್ಗೆಟ್​​ ಮಾಡುತ್ತಿದ್ದ.​ ಪಾರ್ಕ್​​ಗಳ ಬಳಿ ಜೋಡಿಗಳ ಹಿಂದೆ ಹೋಗಿ ಬೆದರಿಸುತ್ತಿದ್ದ. ಮಾರಕಾಸ್ತ್ರ ತೋರಿಸಿ ಅವರಿಂದ ಮೊಬೈಲ್​​, ಹಣ, ಚಿನ್ನ ಕದಿಯುತ್ತಿದ್ದ.

ಇದನ್ನೂ ಓದಿ: ಪತಿ ಜತೆ ಸಂಸಾರ ಮಾಡಲೊಪ್ಪದ ಮಗಳನ್ನೇ ಸುಟ್ಟುಹಾಕಿ ಕಾಣೆಯಾಗಿದ್ದಾಳೆಂದ ತಂದೆ

ಉತ್ತರ ಭಾರತ ಮೂಲದ ದಂಪತಿ ಸಂಜೀವ್​​ ಬೋರಾ, ಜನ್ನಿಫರ್​ ಬೆದರಿಸಿದ್ದ. ದಂಪತಿಯಿಂದ ಎರಡುವರೆ ಲಕ್ಷ ಸುಲಿಗೆ ಮಾಡಿದ್ದ.​​ 2007ರಿಂದ ಕ್ರೈಂ ಆ್ಯಕ್ಟಿವಿಟಿಯಲ್ಲಿ ಆರೋಪಿ ಗಣೇಶ್ ಭಾಗಿಯಾಗಿದ್ದ. ಬೆಂಗಳೂರಿನ ಹುಳಿಮಾವು, ಮಡಿವಾಳ, ಬೆಳ್ಳಂದೂರು, HSR ಲೇಔಟ್ ಸೇರಿ​​ ನಗರದ ಹಲವು ಪೊಲೀಸ್​​ ಠಾಣಾ ವ್ಯಾಪ್ತಿಗಳಲ್ಲಿ ಕೃತ್ಯವೆಸಗಿದ್ದ.

ಹೃದಯಾಘಾತದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಸಾವು

ರಾಯಚೂರು: ಹೃದಯಾಘಾತದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಗದ್ರಟಗಿ ಗ್ರಾಮದಲ್ಲಿ ನಡೆದಿದೆ. ಸೂರ್ಯ ಉಮಾಪತೆಪ್ಪ ಜಾಡರ್(57) ಮೃತ ಶಿಕ್ಷಕ.

ಇದನ್ನೂ ಓದಿ: ನೆಲಮಂಗಲ: ಚಲಿಸುತ್ತಿದ್ದ ಕಾರಿಗೆ ಆಕಸ್ಮಿಕ ಬೆಂಕಿ: ಓರ್ವ ವ್ಯಕ್ತಿ ಸಜೀವ ದಹನ

ಇಂದು ಶಾಲೆಗೆ ಎಂದಿನಂತೆ ಬಂದು ಕಾರ್ಯನಿರ್ವಹಿಸುತ್ತಿದ್ದರು. ಶಾಲೆಯಲ್ಲಿ ಹೃದಯಾಘಾತದಿಂದ ಕುಸಿದು ಬಿದಿದ್ದಾರೆ. ಶಿಕ್ಷಕನ ಸಾವಿಗೆ ಗದ್ರಟಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಹೈವೆ ಪಕ್ಕದಲ್ಲಿ ಯುವಕನ ಹತ್ಯೆ

ತುಮಕೂರು: ಹೈವೆ ಪಕ್ಕದಲ್ಲಿ ಯುವಕನ ಹತ್ಯೆ ಮಾಡಿರುವಂತಹ ಘಟನೆ ತುಮಕೂರು ತಾಲೂಕು ಬೆಳಧರ ಗ್ರಾಮದಲ್ಲಿ ನಡೆದಿದೆ. ನಿನ್ನೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಹೋಬಲ ಅಗ್ರಹಾರ ಗ್ರಾಮದ ಹನುಮಂತರಾಜು ಮೃತ ದುರ್ದೈವಿ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ