ಬೆಂಗಳೂರು, ನವೆಂಬರ್ 12: ಕೆಲಸ ಮುಗಿಸಿ ಹೋಗುತ್ತಿದ್ದ ಯುವಕ ಮೇಲೆ ಎರಗಿ (Attack) ದರೋಡೆಕೋರರು ದೋಚಲು ಮುಂದಾಗಿರುವಂತಹ ಘಟನೆ ಪುಲಿಕೇಶಿನಗರ ಪೊಲೀಸ್ ಠಾಣಾ ವ್ತಾಪ್ತಿಯಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಮಾರಕ ಆಯುಧವನ್ನು ಹಿಡಿದು ಹಲ್ಲೆ ನಡೆಸಿದ್ದಾರೆ. ಅಸ್ಸಾಂ ಮೂಲದ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೊಟೇಲ್ವೊಂದರಲ್ಲಿ ಕೆಲಸ ಮುಗಿಸಿ ಯುವಕ ತೆರಳುತ್ತಿದ್ದ. ಈ ವೇಳೆ ಬೈಕ್ನಲ್ಲಿ ಬಂದ ದರೋಡೆಕೋರರು ಕೃತ್ಯವೆಸಗಿ ಪರಾರಿಯಾಗಿದ್ದಾರೆ. ಪುಂಡರ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಬೆಂಗಳೂರಿನ ಕಲ್ಯಾಣ ನಗರದ ಚಳ್ಳಿಕೆರೆಯಲ್ಲಿ ವಾಕಿಂಗ್ ಮಾಡುತ್ತಿದ್ದ ಅಜ್ಜಿ ಮತ್ತು ಮೊಮ್ಮಕ್ಕಳಿಗೆ ಕಾರು ಡಿಕ್ಕಿ ಹೊಡೆದಿದೆ. ಶೀಲಾ (60) ಗಂಭೀರವಾಗಿ ಗಾಯಗೊಂಡ ವೃದ್ದೆ. ಮೊಮ್ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅತಿವೇಗವಾಗಿ ಕಾರು ಚಾಲನೆ ಮಾಡಿದ ಕುಮಾರ್ ಮೊದಲಿಗೆ ಇಬ್ಬರಿಗೂ ಡಿಕ್ಕಿಯಾಗಿ ರಸ್ತೆ ಬದಿ ನಿಂತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಬಳಿಕ ಕಂಪೌಂಡ್ಗೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾರಿನಲ್ಲಿ ಮದ್ಯದ ಬಾಟಲಿ ಪತ್ತೆಯಾಗಿವೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೈಸೂರು: ಟಂಟಂ ವಾಹನ ಪಲ್ಟಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಮೈಸೂರು ತಾಲೂಕಿನ ಮೇಗಳಾಪುರ ಗ್ರಾಮದ ಬಳಿ ನಡೆದಿದೆ. ದರ್ಶನ್ ಮೃತ ಯುವಕ. 10 ಯುವಕರಿಗೆ ಗಂಭೀರ ಗಾಯಗಳಾಗಿವೆ. ಟಂಟಂ ವಾಹನದಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಡೀಪ್ ಫೇಕ್ ಪ್ರಕರಣ: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಫೋಟೋ ಎಡಿಟ್ ಮಾಡಿ ಬ್ಯ್ಲಾಕ್ಮೇಲ್
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನ ಪಲ್ಟಿಯಾಗಿದೆ. ಎಲ್ಲ ಗಾಯಾಳುಗಳು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಅಬಕಾರಿ ದಳದ ಕಾರ್ಯಚರಣೆ ಮಾಡಿದ್ದು, ಅಕ್ರಮವಾಗಿ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಬಂಧಿಸಿದ್ದಾರೆ. ಕೆಂಗಲ್ ಕೆಂಪೋಹಳ್ಳಿ ಹನುಮಂತರಾಯಪ್ಪ(50), ಬರೇಗನಹಳ್ಳಿ ಗಂಗಮ್ಮ(65), ನಿಡವಂದ ಶಾರದಮ್ಮ(49), ಘಂಟೆಹೊಸಹಳ್ಳಿ ಗೋವಿಂದರಾಜು(45) ಬಂಧಿತರು.
ಇದನ್ನೂ ಓದಿ: ಆರು ಕಳ್ಳರನ್ನು ಖೆಡ್ಡಾಕ್ಕೆ ಕೆಡವಿದ ಚಿತ್ರಹಳ್ಳಿ ಪೊಲೀಸರು; ಶ್ರೀಗಂಧ, ರಕ್ತ ಚಂದನ, ಆನೆ ದಂತ, ಪೆಂಗೋಲಿನ್ ಚಿಪ್ಪುಗಳು ವಶಕ್ಕೆ
48 ಸಾವಿರ ಮೌಲ್ಯದ 89 ಲೀಟರ್ ಮದ್ಯ ಹಾಗೂ 10 ಲೀಟರ್ ಬಿಯರ್ ಜಪ್ತಿ ಮಾಡಲಾಗಿದೆ. ಚಿಲ್ಲರೆ ಅಂಗಡಿ ಹಾಗೂ ಮನೆಗಳಲ್ಲಿ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.