ಅಹಮದಾಬಾದ್: ಹಣದಾಸೆಗೆ ಏನು ಬೇಕಾದರೂ ಮಾಡುವವರಿದ್ದಾರೆ. ಆದರೆ, ಅಗ್ನಿಸಾಕ್ಷಿಯಾಗಿ ಮದುವೆಯಾದ ಹೆಂಡಿತಿಯನ್ನೇ ಕೇವಲ 500 ರೂ. ಆಸೆಗೆ ಮಾರಾಟ ಮಾಡಿರುವ ಹೀನ ಕೃತ್ಯವೊಂದು ಗುಜರಾತ್ನಲ್ಲಿ ನಡೆದಿದೆ. 500 ರೂ. ನೀಡಿ ಆ ಮಹಿಳೆಯನ್ನು ಖರೀದಿಸಿದ ವ್ಯಕ್ತಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ನಂತರ ಆಕೆಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.
ಊಟ ಕೊಡಿಸುತ್ತೇನೆಂದು ಹೇಳಿ ಹೆಂಡತಿಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಿದ್ದ ಗಂಡ ಅಲ್ಲಿ ಸೋನು ಶರ್ಮ ಎಂಬಾತನಿಗೆ 500 ರೂ.ಗೆ ತನ್ನ ಹೆಂಡತಿಯನ್ನು ಮಾರಾಟ ಮಾಡಿದ್ದಾನೆ. ಆತನ ಹೆಂಡತಿಯನ್ನು ಖರೀದಿಸಿದ ವ್ಯಕ್ತಿ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾನೆ. ಅತ್ಯಾಚಾರ ನಡೆದ ಬಳಿಕ ಆ 21 ವರ್ಷದ ಮಹಿಳೆ ಪೊಲೀಸ್ ಠಾಣೆಗೆ ಬಂದು ತನ್ನ ಗಂಡನ ವಿರುದ್ಧ ದೂರು ನೀಡಿದ್ದಾಳೆ. ಆ ದೂರಿನ ಆಧಾರದಲ್ಲಿ ಸೋನು ಶರ್ಮ ಹಾಗೂ ಆ ಮಹಿಳೆಯ ಗಂಡನನ್ನು ಬಂಧಿಸಲಾಗಿದೆ.
ಹೋಟೆಲ್‌ಗೆ ಬಂದಿದ್ದ ವ್ಯಕ್ತಿಯ ಜೊತೆಗಿದ್ದ ಆತನ ಹೆಂಡತಿಯನ್ನು ನೋಡಿದ ಸೋನು ಶರ್ಮ ಆಕೆಯನ್ನು ತನಗೆ ಕೊಡಬೇಕೆಂದು ಕೇಳಿದ್ದ. ಅದಕ್ಕೆ ಒಪ್ಪಿದ ಆತ ಸೋನು ಶರ್ಮನಿಂದ 500 ರೂ. ಪಡೆದು ತನ್ನ ಹೆಂಡತಿಯನ್ನು ಆತನಿಗೆ ಮಾರಾಟ ಮಾಡಿದ್ದ. ಈ ಘಟನೆ ನಡೆದು 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಇದನ್ನೂ ಓದಿ: Crime News: ಎಕ್ಸಾಂ ಬರೆದು ಬಂದ ಯುವತಿಯ ಕುತ್ತಿಗೆ ಸೀಳಿದ ಭಗ್ನ ಪ್ರೇಮಿ; ಕಾಲೇಜಿನಲ್ಲೇ ಕಗ್ಗೊಲೆ
Murder: ಲೇಡಿ ಪೊಲೀಸ್ಗಾಗಿ ಹೆಂಡತಿ, ಮಕ್ಕಳನ್ನೇ ಕೊಂದ ಗಂಡ; ಸತ್ತು ಹೋಗಿದ್ದ ಕೊಲೆಗಾರ ಎದ್ದು ಬಂದ ಕತೆಯಿದು!