Crime News: ಟೀಚರ್, ಕಾಲೇಜು ಯುವತಿಯರ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ ಐಐಟಿ ವಿದ್ಯಾರ್ಥಿ ಬಂಧನ

| Updated By: ಸುಷ್ಮಾ ಚಕ್ರೆ

Updated on: Oct 07, 2021 | 2:54 PM

ಐಐಟಿ-ಖರಗ್​ಪುರದಲ್ಲಿ ಬಿ.ಟೆಕ್ ಓದುತ್ತಿದ್ದ. ಪಾಟ್ನಾದ ಮಹಾವೀರ್ ಎಂಬ ವಿದ್ಯಾರ್ಥಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ.

Crime News: ಟೀಚರ್, ಕಾಲೇಜು ಯುವತಿಯರ ಅಶ್ಲೀಲ ಫೋಟೋ ಪೋಸ್ಟ್ ಮಾಡಿದ ಐಐಟಿ ವಿದ್ಯಾರ್ಥಿ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ದೆಹಲಿಯ ಪ್ರತಿಷ್ಠಿತ ಕಾಲೇಜಿನ ಶಿಕ್ಷಕರು ಮತ್ತು ಯುವತಿಯರನ್ನು ಹಿಂಬಾಲಿಸುತ್ತಿದ್ದ ಐಐಟಿ ವಿದ್ಯಾರ್ಥಿಯೊಬ್ಬ ಅವರ ಫೋಟೋಗಳ ಮುಖಗಳನ್ನು ಅಶ್ಲೀಲ ಫೋಟೋಗಳಿಗೆ ಅಂಟಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡುತ್ತಿದ್ದ. ಈ ಆರೋಪದಲ್ಲಿ ಆ ಐಐಟಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಾಟ್ನಾದ ಮಹಾವೀರ್ ಎಂಬ ವಿದ್ಯಾರ್ಥಿ ಐಐಟಿ-ಖರಗ್​ಪುರದಲ್ಲಿ ಬಿ.ಟೆಕ್ ಓದುತ್ತಿದ್ದ. ಪೊಲೀಸರ ಪ್ರಕಾರ ಮಹಾವೀರ್ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ. ಹಾಗೇ, ಪ್ರತಿಷ್ಠಿತ ಶಾಲೆಯ ಶಿಕ್ಷಕಿಗೂ ಇದೇ ರೀತಿ ತೊಂದರೆ ಕೊಡುತ್ತಿದ್ದ. ನಕಲಿ ಕಾಲರ್ ಐಡಿಗಳನ್ನು ಬಳಸಿ ವಾಟ್ಸಾಪ್ ಬಳಸುತ್ತಿದ್ದ ಮಹಾವೀರ್ ಅದರ ಮೂಲಕ ಯುವತಿಯರನ್ನು ಸಂಪರ್ಕಿಸಿ, ಅವರನ್ನು ಬ್ಲಾಕ್​ಮೇಲ್ ಮಾಡುತ್ತಿದ್ದ. ವಾಯ್ಸ್ ಬದಲಿಸುವ ಆ್ಯಪ್​ಗಳನ್ನು ಕೂಡ ಬಳಸಿ ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದ.

ನಕಲಿ ಐಡಿಗಳನ್ನು ಬಳಸಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ. ಇನ್​ಸ್ಟಾಗ್ರಾಂನಲ್ಲಿ ಆ ವಿದ್ಯಾರ್ಥಿನಿಯರ ಹೆಸರಲ್ಲಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಅದರಲ್ಲೂ ಅವರ ಅಶ್ಲೀಲ ಫೋಟೋಗಳನ್ನು ಅಪ್​ಲೋಡ್ ಮಾಡುತ್ತಿದ್ದ. ಟೀಚರ್​ಗಳಿಗೂ ಇಂಟರ್​ನ್ಯಾಷನಲ್ ನಂಬರ್​ಗಳಿಂದ ಫೋನ್ ಮಾಡಿ ಬ್ಲಾಕ್​ಮೇಲ್ ಮಾಡುತ್ತಿದ್ದ. ಆತನಿಂದ ಯುವತಿ, ಟೀಚರ್​ಗಳ ಅಶ್ಲೀಲ ಫೋಟೋಗಳು ಕಾಲೇಜು ಹಾಗೂ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿತ್ತು.

ಈ ಹಿನ್ನೆಲೆಯಲ್ಲಿ ಸೈಬರ್ ಸೆಲ್ ಯುನಿಟ್​ನಲ್ಲಿ ದೂರು ದಾಖಲಾಗಿತ್ತು. ಅದನ್ನು ತನಿಖೆ ನಡೆಸಿದ ಪೊಲೀಸರು ನಕಲಿ ಐಡಿಗಳ ಬೆನ್ನತ್ತಿ ಹೋಗಿ ಮಹಾವೀರ್​ನನ್ನು ಬಂಧಿಸಿದ್ದಾರೆ. ಆತನ ಮೊಬೈಲ್​ನಲ್ಲಿ ಸಾಕಷ್ಟು ಅಶ್ಲೀಲ ಫೋಟೋಗಳು, ವಿಡಿಯೋಗಳು ಪತ್ತೆಯಾಗಿವೆ. ಆತನ ಮೊಬೈಲ್ ಮತ್ತು ಲ್ಯಾಪ್​ಟಾಪ್ ಅನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: Crime News: ಬಟ್ಟೆಯೊಳಗೆ ಜಿಲೆಟಿನ್ ಇಟ್ಟುಕೊಂಡು ಹೆಂಡತಿಯನ್ನು ತಬ್ಬಿದ ಗಂಡ; ಬಾಂಬ್ ಸ್ಫೋಟಗೊಂಡು ಇಬ್ಬರೂ ಸಾವು!

Crime News: ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬ್ಯಾಗ್​ನಲ್ಲಿಟ್ಟ ಹೆಂಡತಿ; ಆ ಒಂದು ತಪ್ಪಿನಿಂದ ಸಿಕ್ಕಿಬಿದ್ದ ಹಂತಕಿ!