Crime News: ಬಟ್ಟೆಯೊಳಗೆ ಜಿಲೆಟಿನ್ ಇಟ್ಟುಕೊಂಡು ಹೆಂಡತಿಯನ್ನು ತಬ್ಬಿದ ಗಂಡ; ಬಾಂಬ್ ಸ್ಫೋಟಗೊಂಡು ಇಬ್ಬರೂ ಸಾವು!

Murder News Today: ಲುಂಗೇಲಿಯ ಹೈ ಪವರ್ ಕಮಿಟಿ ಕಚೇರಿಯ ಎದುರಲ್ಲೇ ಈ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 12.15ರ ವೇಳೆಗೆ ಬಾಂಬ್ ಸ್ಫೋಟವಾಗಿದೆ. ಹೆಂಡತಿಯ ಮೇಲೆ ಹಾರಿ ಗಂಡ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾನೆ.

Crime News: ಬಟ್ಟೆಯೊಳಗೆ ಜಿಲೆಟಿನ್ ಇಟ್ಟುಕೊಂಡು ಹೆಂಡತಿಯನ್ನು ತಬ್ಬಿದ ಗಂಡ; ಬಾಂಬ್ ಸ್ಫೋಟಗೊಂಡು ಇಬ್ಬರೂ ಸಾವು!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 06, 2021 | 2:53 PM

ಗಂಡ-ಹೆಂಡತಿಯ ಜಗಳಗಳು ಕೆಲವೊಮ್ಮೆ ಅವಾಂತರಕ್ಕೂ ಕಾರಣವಾಗುತ್ತವೆ. ತನ್ನ ಹೆಂಡತಿಯ ಮೇಲೆ ಕೋಪ ಮಾಡಿಕೊಂಡು ಬೇರೆಯಾಗಿ ವಾಸಿಸುತ್ತಿದ್ದ ಗಂಡನೊಬ್ಬ ಆಕೆಯನ್ನು ಕೊಲ್ಲಲು ತನ್ನ ಬಟ್ಟೆಯೊಳಗೆ ಜಿಲೆಟಿನ್ ಬಾಂಬ್ ಇಟ್ಟುಕೊಂಡು ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಆತ ಹಾರಿ ತಬ್ಬಿಕೊಂಡ ರಭಸಕ್ಕೆ ಬಾಂಬ್ ಸ್ಫೋಟವಾಗಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದಾರೆ. ಮಿಜೋರಾಂನ ಲುಂಗೇಲಿಯಲ್ಲಿ ಈ ಘಟನೆ ನಡೆದಿದೆ.

ಲುಂಗೇಲಿಯ ಹೈ ಪವರ್ ಕಮಿಟಿ ಕಚೇರಿಯ ಎದುರಲ್ಲೇ ಈ ಘಟನೆ ನಡೆದಿದೆ. ಮಂಗಳವಾರ ಮಧ್ಯಾಹ್ನ 12.15ರ ವೇಳೆಗೆ ಬಾಂಬ್ ಸ್ಫೋಟವಾಗಿದೆ. ಆತ್ಮಾಹುತಿ ಬಾಂಬ್ ಸಿಡಿಸಿ ಹೆಂಡತಿಯನ್ನು ಕೊಲ್ಲಲು ಮುಂದಾದ ಗಂಡ ಆ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣವೇನೆಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಬಾಂಬ್ ಸಿಡಿಸಿದ ವ್ಯಕ್ತಿಯನ್ನು ರೋಹ್​ಮಿಂಗ್ಲಿಯಾನ ಎಂದು ಗುರುತಿಸಲಾಗಿದೆ.

61 ವರ್ಷದ ಮಹಿಳೆ ರೋಹ್​ಮಿಂಗ್ಲಿಯಾನ ಅವರನ್ನು ಎರಡನೇ ಮದುವೆಯಾಗಿದ್ದರು. ಒಂದು ವರ್ಷದಿಂದ ಅವರಿಬ್ಬರೂ ಬೇರೆ ಬೇರೆಯಾಗಿ ವಾಸವಾಗಿದ್ದರು. ಇಬ್ಬರ ನಡುವೆ ಜಗಳ ನಡೆದಿದ್ದರಿಂದ ಪ್ರತ್ಯೇಕವಾಗಿ ವಾಸವಾಗಿದ್ದ ಅವರು ನಿನ್ನೆ ಒಂದೇ ಕಡೆ ಸೇರಿದ್ದರು. ತರಕಾರಿ ಮಾರುತ್ತಿದ್ದ ಆ ಮಹಿಳೆಯನ್ನು ಹುಡುಕಿ ಬಂದ ಆಕೆಯ ಗಂಡ ಆಕೆಯ ಜೊತೆಯಲ್ಲಿದ್ದ ಮಗಳನ್ನು ದೂರ ಕಳಿಸಿದ್ದ. ಮಗಳು ದೂರ ಹೋದ ನಂತರ ಆಕೆಯನ್ನು ಕೊಲೆ ಮಾಡಲು ತಾನು ಮಾಡಿದ್ದ ಪ್ಲಾನ್ ಅನ್ನು ಕಾರ್ಯರೂಪಕ್ಕೆ ಇಳಿಸಿದ್ದ.

ಪ್ರತ್ಯಕ್ಷದರ್ಶಿಗಳು ತಿಳಿಸಿರುವ ಪ್ರಕಾರ, ತರಕಾರಿ ಮಾರುತ್ತಾ ಗಾಡಿಯ ಬಳಿ ಕುಳಿತಿದ್ದ ಹೆಂಡತಿಯ ಪಕ್ಕದಲ್ಲೇ ಕುಳಿತ ಆಕೆಯ ಗಂಡ ತನಗಾಗಿ ಒಂದು ಸಿಗರೇಟ್ ತಂದುಕೊಡುವಂತೆ ಕೇಳಿದ್ದ. ಆಕೆ ಸಿಗರೇಟ್ ತಂದು ಕೊಟ್ಟಾಗ ಅದನ್ನು ಬಾಯಿಗಿಟ್ಟುಕೊಂಡ ಆತ ಎದ್ದು ನಿಂತವನೇ ತಲೆ ಸುತ್ತುಬಂದಂತೆ ನಟಿಸಿ ಕೆಳಗೆ ಬೀಳುವವನಿದ್ದ. ಆಗ ಎದ್ದು ನಿಂತ ಆತನ ಹೆಂಡತಿಯನ್ನು ಜೋರಾಗಿ ತಬ್ಬಿಕೊಂಡ ಕೂಡಲೇ ಬಾಂಬ್ ಸ್ಫೋಟವಾಗಿತ್ತು. ಸುತ್ತಮುತ್ತಲಿದ್ದವರು ನೋಡನೋಡುತ್ತಿದ್ದಂತೆಯೇ ಅವರಿಬ್ಬರ ದೇಹ ಛಿದ್ರವಾಗಿತ್ತು.

ಈ ಘಟನೆ ಬಳಿಕ ಅವರ ಮಗಳು ನಾಪತ್ತೆಯಾಗಿದ್ದಾಳೆ. ಬಾಂಬ್​ ತಯಾರಿಸಲು ಬಳಸುವ ಜಿಲೆಟಿನ್ ಅನ್ನು ಬಟ್ಟೆಯೊಳಗೆ ಇಟ್ಟುಕೊಂಡಿದ್ದ ಗಂಡ ತಾನೂ ಸತ್ತು ಹೆಂಡತಿಯನ್ನೂ ಕೊಂದಿದ್ದಾನೆ.

ಇದನ್ನೂ ಓದಿ: Crime News: ಕೇವಲ 500 ರೂ.ಗೆ ಹೆಂಡತಿಯನ್ನೇ ಮಾರಿದ ಪತಿರಾಯ; ಆಮೇಲಾಗಿದ್ದು ದುರಂತ

Crime News: ಗಂಡನನ್ನು ಕೊಂದು, ಶವವನ್ನು ಕತ್ತರಿಸಿ ಬ್ಯಾಗ್​ನಲ್ಲಿಟ್ಟ ಹೆಂಡತಿ; ಆ ಒಂದು ತಪ್ಪಿನಿಂದ ಸಿಕ್ಕಿಬಿದ್ದ ಹಂತಕಿ!