Crime News: ಬೆಂಗಳೂರಿನಲ್ಲಿ ತಾಯಿ, ಎರಡೂವರೆ ವರ್ಷದ ಮಗುವಿನ ಹತ್ಯೆ

ತಾಯಿ ಮತ್ತು ಮಗುವಿನ ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಸಂಬಂಧಿಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

Crime News: ಬೆಂಗಳೂರಿನಲ್ಲಿ ತಾಯಿ, ಎರಡೂವರೆ ವರ್ಷದ ಮಗುವಿನ ಹತ್ಯೆ
ಪ್ರಾತಿನಿದಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 06, 2021 | 8:29 PM

ಬೆಂಗಳೂರು: ನಗರದ ಬೇಗೂರು ಠಾಣಾ ವ್ಯಾಪ್ತಿಯ ಚೌಡೇಶ್ವರಿ ಲೇಔಟ್​ನಲ್ಲಿ ತಾಯಿ ಮತ್ತು ಎರಡೂವರೆ ವರ್ಷದ ಮಗುವನ್ನು ಹತ್ಯೆ ಮಾಡಲಾಗಿದೆ. ಇಬ್ಬರನ್ನೂ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ತಾಯಿ ಮತ್ತು ಮಗುವಿನ ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಸಂಬಂಧಿಕರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಗಂಡ ಮುಂಜಾನೆ ಕೆಲಸಕ್ಕೆ ಹೋದ ಬಳಿಕ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಯಿಯ ವಯಸ್ಸು 28 ವರ್ಷ ಮತ್ತು ಮಗುವಿನ ವಯಸ್ಸು 2 ವರ್ಷ ಎಂದು ಅಂದಾಜಿಸಲಾಗಿದೆ.

ತೋಟಗುಡ್ಡದಹಳ್ಳಿಯಲ್ಲಿ ಕಳ್ಳತನ ಹಾಡಹಗಲೇ ಮನೆಯ ಬಾಗಿಲು ಮುರಿದು ಕಳ್ಳತನ ನಡೆದಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ. 3 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಮನೆಯಲ್ಲಿದ್ದವರು ಆಸ್ಪತ್ರೆಗೆ ಹೋಗಿ ಬರುವಷ್ಟರಲ್ಲಿ, ಮನೆಯ ಬಾಗಿಲು ಮೂಟಿ ಕಳ್ಳತನ ಮಾಡಲಾಗಿದೆ. ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಗೀಕಳ್ಳಿ ಗ್ರಾಮದಲ್ಲಿ ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಮೃತನನ್ನು ಮಧುಕುಮಾರ್ (31) ಎಂದು ಗುರುತಿಸಲಾಗಿದೆ. ಗೀಕಳ್ಳಿಯ ರಾಜು ಕೊಲೆ ಆರೋಪಿ. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಲಾಟೆಗೆ ಕಾರಣ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಯುವಕನ ಕೊಲೆ ಕಲಬುರಗಿಯ ಗಣೇಶ ನಗರದಲ್ಲಿ ಉಸಿರುಗಟ್ಟಿಸಿ ಯುವಕನನ್ನು ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕನನ್ನು ಕೆಎಚ್​ಬಿ ಕಾಲೊನಿ ನಿವಾಸಿ ಕಿರಣ್ (18) ಎಂದು ಗುರುತಿಸಲಾಗಿದೆ. ಮನೆಯಿಂದ ಹೊರಹೋಗಿದ್ದ ಕಿರಣ್ ಶವವಾಗಿ ಪತ್ತೆಯಾಗಿದ್ದಾನೆ. ಸ್ನೇಹಿತರೇ ಕಿರಣ್​ನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮೊಬೈಲ್‌ ವಿಚಾರಕ್ಕೆ ಸ್ನೇಹಿತನಿಂದಲೇ ಮರ್ಡರ್‌, 7ತಿಂಗಳ ನಂತ್ರ ಕೊಲೆ ರಹಸ್ಯ ಬಯಲು ಇದನ್ನೂ ಓದಿ: ಮಕ್ಕಳಿಂದ ಅನುಕಂಪ ಗಿಟ್ಟಿಸಿ ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳಿ ಅರೆಸ್ಟ್, 5 ಮಕ್ಕಳು ಬಾಲಮಂದಿರಕ್ಕೆ ಶಿಫ್ಟ್