ಗರ್ಬಾ ನೃತ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ 19 ವರ್ಷದ ಬಾಲಕ

|

Updated on: Sep 27, 2023 | 7:24 PM

ನವರಾತ್ರಿ ಕಾರ್ಯಕ್ರಮಕ್ಕಾಗಿ ಗುಜರಾತ್‌ನ ಜಾಮ್‌ನಗರದ ಪಟೇಲ್ ಪಾರ್ಕ್ ಪ್ರದೇಶದಲ್ಲಿನ ತರಗತಿಯಲ್ಲಿ ವಿನೀತ್ ಕುನ್ವಾರಿಯಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಗರ್ಬಾ ನೃತ್ಯ ಪ್ರಾಕ್ಟಿಸ್ ಮಾಡುತ್ತಿದ್ದಾಗ ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಗರ್ಬಾ ನೃತ್ಯದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ 19 ವರ್ಷದ ಬಾಲಕ
ಪ್ರಾತಿನಿಧಿಕ ಚಿತ್ರ
Follow us on

ಜಾಮ್​ನಗರ: ಗುಜರಾತ್‌ನ ಜಾಮ್‌ನಗರದಲ್ಲಿ 19 ವರ್ಷದ ಬಾಲಕನೊಬ್ಬ ಗರ್ಬಾ ನೃತ್ಯ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ನವರಾತ್ರಿ ಕಾರ್ಯಕ್ರಮಕ್ಕಾಗಿ ಪಟೇಲ್ ಪಾರ್ಕ್ ಪ್ರದೇಶದಲ್ಲಿನ ತರಗತಿಯಲ್ಲಿ ವಿನೀತ್ ಕುನ್ವಾರಿಯಾ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಗರ್ಬಾ ನೃತ್ಯ ಪ್ರಾಕ್ಟಿಸ್ ಮಾಡುತ್ತಿದ್ದಾಗ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಮೊದಲ ಸುತ್ತಿನ ಪ್ರಾಕ್ಟಿಸ್ ಮುಗಿದ ನಂತರ ವಿನೀತ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ಅವನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಆತನನ್ನು ಜಿಜಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಆತ ಮೃತಪಟ್ಟಿರುವುದಾಗಿ ತಿಳಿಸಲಾಯಿತು.

ಇದನ್ನೂ ಓದಿ: ಕಳ್ಳತನ ಆರೋಪ: ಅನ್ಯಕೋಮಿನ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ, ಕೊಂದ ಜನ

ವಿನೀತ್ ಅವರ ಗರ್ಬಾ ತರಬೇತುದಾರ ಧರ್ಮೇಶ್ ರಾಥೋಡ್ ಈ ಬಗ್ಗೆ ಮಾತನಾಡಿದ್ದು, ವಿನೀತ್ ಕಳೆದ 2 ತಿಂಗಳಿನಿಂದ ನನ್ನ ಗರ್ಬಾ ತರಗತಿಗಳಿಗೆ ಬರುತ್ತಿದ್ದ. ಆತ ಚೆನ್ನಾಗಿ ನೃತ್ಯ ಮಾಡುತ್ತಿದ್ದ. ಸೋಮವಾರ ಆತ ಇದ್ದಕ್ಕಿದ್ದಂತೆ ನೆಲದ ಮೇಲೆ ಕುಸಿದು ಬಿದ್ದಾಗ ನಾವು 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ದುರದೃಷ್ಟವಶಾತ್ ನಾವು ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ: ನೆತ್ತರು ಸುರಿಸುತ್ತಾ ಜನರಲ್ಲಿ ಸಹಾಯ ಕೇಳಿದ ಅತ್ಯಾಚಾರ ಸಂತ್ರಸ್ತೆ; ದೂರ ಓಡಿಸಿದ ಜನ

ಇದೇ ರೀತಿಯ ಘಟನೆ ಈ ತಿಂಗಳ ಆರಂಭದಲ್ಲಿ ಕೂಡ ನಡೆದಿತ್ತು. ಗಾಜಿಯಾಬಾದ್‌ನ ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಹೃದಯ ಸ್ತಂಭನದಿಂದಾಗಿ ಕುಸಿದುಬಿದ್ದು 19 ವರ್ಷದ ಯುವಕ ಸಾವನ್ನಪ್ಪಿದ್ದ. ಸರಸ್ವತಿ ವಿಹಾರದಲ್ಲಿ ನಡೆದ ಈ ಘಟನೆಯ ಸಿಸಿಟಿವಿ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ