AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಜರಾತ್: ಕೇವಲ 21ರ ತರುಣ ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕುವಾಗ ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪಿದ!

ಗುಜರಾತ್: ಕೇವಲ 21ರ ತರುಣ ಗರ್ಬಾ ನೃತ್ಯಕ್ಕೆ ಹೆಜ್ಜೆ ಹಾಕುವಾಗ ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪಿದ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Oct 03, 2022 | 11:41 AM

Share

ಅಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಕೊನೆಯುಸಿರೆಳೆದ ನತದೃಷ್ಟನ ಹೆಸರು ವಿರೇಂದ್ರ ಸಿಂಗ್ ರಮೇಶ ಭಾಯಿ ರಜಪೂತ್ ಎಂದು ಗೊತ್ತಾಗಿದೆ. ಅವನ ಸ್ನೇಹಿತ ಸೆರೆಹಿಡಿದಿರುವ ವಿಡಿಯೋ ವೈರಲ್ ಆಗಿದೆ.

ಆನಂದ (ಗುಜರಾತ್): ಸಾವು ಅನಿಶ್ಚಿತ, ಆಕಸ್ಮಿಕ ಅಂತ ಹೇಳುವುದು ಈ ವಿಡಿಯೋ ನೋಡಿದ ಬಳಿಕ ಮತ್ತಷ್ಟು ಸ್ಪಷ್ಟವಾಗುತ್ತದೆ. ಗುಜರಾತಿನ ಆನಂದ್ (Anand) ನಗರದಲ್ಲಿರುವ ತಾರಾಪೂರ್ ಶಿವಶಕ್ತಿ ಸೊಸೈಟಿಯವರು ರವಿವಾರ ರಾತ್ರಿ ಆಯೋಜಿಸಿದ್ದ ಗರ್ಬಾ ನೃತ್ಯ (Garba Dance) ಕಾರ್ಯಕ್ರಮದಲ್ಲಿ 21-ವರ್ಷದ ಯುವಕನೊಬ್ಬ ಸಾಂಪ್ರದಾಯಿಕ ಕುಣಿತಕ್ಕೆ ಹೆಜ್ಜೆ ಹಾಕುವಾಗ ಹೃದಯಾಘಾತಕ್ಕೊಳಗಾಗಿ ಮರಣವನ್ನಿಪ್ಪಿದ್ದಾನೆ. ಗುಂಪಿನಲ್ಲಿರುವ ಇತರರೊಂದಿಗೆ ಕುಣಿಯುವಾಗಲೇ ಅವನು ಕುಸಿದು ಬೀಳುವುದನ್ನು ವಿಡಿಯೋದಲ್ಲಿ ನೋಡಬಹುದು. ಅಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಕೊನೆಯುಸಿರೆಳೆದ ನತದೃಷ್ಟನ ಹೆಸರು ವಿರೇಂದ್ರ ಸಿಂಗ್ ರಮೇಶ ಭಾಯಿ ರಜಪೂತ್ (Virendra Singh Ramesh Bhai Rajput) ಎಂದು ಗೊತ್ತಾಗಿದೆ. ಅವನ ಸ್ನೇಹಿತ ಸೆರೆಹಿಡಿದಿರುವ ವಿಡಿಯೋ ವೈರಲ್ ಆಗಿದೆ.

Published on: Oct 03, 2022 11:38 AM