ಕಳ್ಳತನ ಆರೋಪ: ಅನ್ಯಕೋಮಿನ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ, ಕೊಂದ ಜನ

ಯುವಕನೊಬ್ಬನ ಮೇಲೆ ಕಳ್ಳತನದ ಆರೋಪ ಮಾಡಿ, ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದಿದೆ. ಇದೀಗ ಹೊಡೆದ ಪರಿಣಾಮದಿಂದ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಕಳ್ಳತನ ಮಾಡಿದ್ದಾನೆ ಎಂದು ಶಂಕಿಸಿ ಅನ್ಯಕೋಮಿನ ವ್ಯಕ್ತಿಗೆ ಅಮಾನುಷವಾಗಿ ಥಳಿಸಿದ್ದಾರೆ.

ಕಳ್ಳತನ ಆರೋಪ: ಅನ್ಯಕೋಮಿನ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ, ಕೊಂದ ಜನ
ಸಾಂದರ್ಭಿಕ ಚಿತ್ರ
Follow us
|

Updated on:Sep 27, 2023 | 4:49 PM

ದೆಹಲಿ, ಸೆ.27: ಕಳ್ಳತನದ ಆರೋಪ ಮಾಡಿ, ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದಿದೆ. ಇದೀಗ ಹೊಡೆದ ಪರಿಣಾಮದಿಂದ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಕಳ್ಳತನ ಮಾಡಿದ್ದಾನೆ ಎಂದು ಶಂಕಿಸಿ ಅನ್ಯಕೋಮಿನ ವ್ಯಕ್ತಿಗೆ ಅಮಾನುಷವಾಗಿ ಥಳಿಸಿದ್ದಾರೆ. ಇಸ್ರಾರ್ ಅಹ್ಮದ್ (26) ಎಂಬಾತನ ಮೇಲೆ ಕಳ್ಳತನದ ಆರೋಪ ಹೊರಿಸಿ ನಿನ್ನೆ (ಸೆ.26) ಬೆಳಿಗ್ಗೆ ದೆಹಲಿಯ ಈಶಾನ್ಯ ಭಾಗವಾದ ನಂದ್ ನಗ್ರಿ ಪ್ರದೇಶದಲ್ಲಿ ಕಂಬಕ್ಕೆ ಕಟ್ಟಿ ದೊಣ್ಣೆಯಿಂದ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದ್ದು, ಕಳ್ಳತನ ಆರೋಪ ಮಾಡಿ ಅನ್ಯಕೋಮಿನ ಯುವಕನಿಗೆ ಥಳಿಸುತ್ತಿರವುದನ್ನು ವಿಡಿಯೋದಲ್ಲಿ ತೋರಿಸಿಲಾಗಿದೆ. ಈ ವಿಡಿಯೋದಲ್ಲಿ ಆತ ಅಲ್ಲಿರುವ ಜನರಲ್ಲಿ ಮತ್ತು ಥಳಿಸುತ್ತಿರುವ ವ್ಯಕ್ತಿಯಲ್ಲಿ ಅಳುತ್ತ ಬೇಡಿಕೊಳ್ಳುತ್ತಾನೆ ದಯವಿಟ್ಟು ಬಿಡಿ ಎಂದು. ಅದರೂ ಆತನ ಮನವಿಯನ್ನು ಕೇಳದೇ ನಿರ್ದಯವಾಗಿ ಥಳಿಸುತ್ತಾರೆ.

ಇದನ್ನೂ ಓದಿ: ಹಿಂದೂ ಯುವತಿ ಜತೆಗೆ ದೇವಾಸ್ಥಾನದಲ್ಲಿ ಕಾಣಿಸಿಕೊಂಡ ಅನ್ಯಕೋಮಿನ ಯುವಕ, ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು

ನಂತರ ಇಸ್ರಾರ್ ಅಹ್ಮದ್​​ನ್ನು ನೆರೆಹೊರೆ ಜನರು ಮನೆಗೆ ಕರೆದುಕೊಂಡು ಬಂದು ಆತನ ತಂದೆ ಅಬ್ದುಲ್ ವಾಜಿದ್ ಅವರಿಗೆ ಎಲ್ಲ ವಿಚಾರಗಳನ್ನು ಹೇಳುತ್ತಾರೆ. ಈ ಘಟನೆ ಬಗ್ಗೆ ಅಬ್ದುಲ್ ವಾಜಿದ್ ಪೊಲೀಸ್​​​ ಠಾಣೆಯಲ್ಲಿ ದೂರು ನೀಡುತ್ತಾರೆ. ಇಸ್ರಾರ್ ಅಹ್ಮದ್​​​ನ್ನು ಮನೆಗೆ ಕರೆದುಕೊಂಡ ಬಂದಾಗ ತುಂಬಾ ಗಾಯಗಳಿದ್ದವು, ಇನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಎಂದಾಗ ಇಸ್ರಾರ್ ಅಹ್ಮದ್ ಮನೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದಾಗ, ಮತ್ತೊಂದು ಕೋಮಿನ ಜನರು ಆತನಿಗೆ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ. ಇನ್ನು ಅನೇಕರನ್ನು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Wed, 27 September 23