ಮನೆಗೆ ಹೋದ್ರೆ ಅಮ್ಮ ಸ್ನಾನ ಮಾಡಿಸ್ತಾಳೆ ಎಂದು ಕಾರಿನಲ್ಲಿ ಹೋಗಿ ಅಡಗಿ ಕುಳಿತ ಬಾಲಕ, ಉಸಿರುಗಟ್ಟಿ ಸಾವು
ಮನೆಗೆ ಹೋದ್ರೆ ತಾಯಿ ಸ್ನಾನ ಮಾಡಿಸ್ತಾಳೆ ಎಂದು ನಿಲ್ಲಿಸಿದ್ದ ಕಾರಿನಲ್ಲಿ ಅಡಗಿ ಕುಳಿತ 5 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ತಾಯಿ ಭಾರತಿ ಆತನನ್ನು ಸ್ನಾನಕ್ಕೆ ಬರುವಂತೆ ಕರೆದಿದ್ದರು, ಆದಿತ್ಯನಿಗೆ ನಿತ್ಯ ಆಟವಾಡುವ ಆಸೆ, ಯಾರು ಸ್ನಾನ ಮಾಡ್ತಾರೆ ಎನ್ನುವ ಆಲಸ್ಯ ಹಾಗಾಗಿ ಅಲ್ಲೇ ಹತ್ತಿರದ ಕಾರ್ಖಾನೆಯೊಂದರಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಹತ್ತಿದ್ದಾನೆ.
ಮನೆಗೆ ಹೋದ್ರೆ ತಾಯಿ ಸ್ನಾನ ಮಾಡಿಸ್ತಾಳೆ ಎಂದು ನಿಲ್ಲಿಸಿದ್ದ ಕಾರಿನಲ್ಲಿ ಅಡಗಿ ಕುಳಿತ 5 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ತಾಯಿ ಭಾರತಿ ಆತನನ್ನು ಸ್ನಾನಕ್ಕೆ ಬರುವಂತೆ ಕರೆದಿದ್ದರು, ಆದಿತ್ಯನಿಗೆ ನಿತ್ಯ ಆಟವಾಡುವ ಆಸೆ, ಯಾರು ಸ್ನಾನ ಮಾಡ್ತಾರೆ ಎನ್ನುವ ಆಲಸ್ಯ ಹಾಗಾಗಿ ಅಲ್ಲೇ ಹತ್ತಿರದ ಕಾರ್ಖಾನೆಯೊಂದರಲ್ಲಿ ಹಲವು ದಿನಗಳಿಂದ ನಿಲ್ಲಿಸಲಾಗಿದ್ದ ಕಾರಿನೊಳಗೆ ಬಾಲಕ ಹತ್ತಿದ್ದಾನೆ. ಆದರೆ ಕೆಲವೇ ಕ್ಷಣಗಳಲ್ಲಿ ಬಾಗಿಲು ಮುಚ್ಚಿದೆ, ಬಾಗಿಲು ತೆರೆಯುವುದು ಹೇಗೆ ಎಂದು ತೋಚದೆ ಉಸಿರುಕಟ್ಟಿ ಮೃತಪಟ್ಟಿದ್ದಾನೆ.
ಪಾಲಕರು ತೀವ್ರ ಹುಡುಕಾಟ ನಡೆಸಿದರೂ ಆದಿತ್ಯ ಎಲ್ಲಿದ್ದಾನೆ ಎಂಬುದು ಗೊತ್ತಾಗಲಿಲ್ಲ. ಕಾರ್ಖಾನೆಯ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಮಗು ಕಾರಿನೊಳಗೆ ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಆದಿತ್ಯನನ್ನು ವಾಹನದಿಂದ ಹೊರತರುವಷ್ಟರಲ್ಲಿ ಆತ ಪ್ರಜ್ಞಾಹೀನನಾಗಿದ್ದ. ಪೋಷಕರು ಆತನನ್ನು ಜುನಾಗಢ್ ಆಸ್ಪತ್ರೆಗೆ ಕರೆದೊಯ್ದರು ಬಳಿಕ ರಾಜ್ಕೋಟ್ಗೆ ಕರೆದೊಯ್ಯಲಾಯಿತು, ಆದರೆ ವೈದ್ಯಕೀಯ ತಂಡದ ಉತ್ತಮ ಪ್ರಯತ್ನಗಳ ಹೊರತಾಗಿಯೂ, ಆದಿತ್ಯ ಉಸಿರಾಡಲು ಕಷ್ಟಪಡುತ್ತಿದ್ದ. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಓದಿ: ಕಾರಿನ ಕಿಟಕಿಯಿಂದ ತಲೆ ಹೊರಗೆ ಹಾಕಿ ಮದುವೆ ನೋಡುತ್ತಿದ್ದ ಬಾಲಕಿ, ನಿರ್ಲಕ್ಷ್ಯದಿಂದ ಡೋರ್ ಹಾಕಿದ ಚಾಲಕ, ಉಸಿರುಗಟ್ಟಿ ಮಗು ಸಾವು
ತೆಲಂಗಾಣದಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಮದುವೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಬಾಲಕಿ ಸಾವನ್ನಪ್ಪಿದೆ. ಕಾರು ಚಾಲಕನ ನಿರ್ಲಕ್ಷ್ಯದಿಂದ ಮದುವೆ ಮನೆಯಲ್ಲಿ ದುರಂತದ ಛಾಯೆ ಆವರಿಸಿತ್ತು. ಸೂರ್ಯಪೇಟ ಜಿಲ್ಲೆಯ ಅನಂತಗಿರಿ ಮಂಡಲದ ಬೊಜ್ಜಗುಡೆಂ ಗ್ರಾಮದಲ್ಲಿ ರಾತ್ರಿ ಮದುವೆ ಸಮಾರಂಭ ನಡೆಯುತ್ತಿತ್ತು. ವರ ಹಾಗೂ ವಧುವಿನ ನೃತ್ಯ ಕಾರ್ಯಕ್ರಮ ನಡೆಯುತ್ತಿತ್ತು. ಬಾನೋಟು ಇಂದ್ರಜಾ (9) ಎಂಬ ಮಗು ಕಾರಿನ ಹಿಂದಿನ ಸೀಟಿನಲ್ಲಿ ಒಂಟಿಯಾಗಿ ಕುಳಿತು ಕಿಟಕಿಯಿಂದ ತಲೆ ಹಾಕಿಕೊಂಡು ನೃತ್ಯಗಳನ್ನು ವೀಕ್ಷಿಸುತ್ತಿತ್ತು.
ಆದರೆ ಅದೇ ವೇಳೆ ಮಗುವನ್ನು ಗಮನಿಸದ ಕಾರು ಚಾಲಕ ಎಲ್ಲಿಂದಲೋ ಡೋರ್ ಮಿರರ್ ಬಟನ್ ಒತ್ತಿದ್ದಾನೆ. ಇದರಿಂದ ಕಾರಿನ ಕಿಟಕಿಯಲ್ಲಿ ಮಗುವಿನ ಕುತ್ತಿಗೆ ಸಿಲುಕಿಕೊಂಡಿದೆ. ಯಾರೂ ಗಮನಿಸದ ಕಾರಣ ಮಗು ಉಸಿರುಗಟ್ಟಿ ಸಾವನ್ನಪ್ಪಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ