ತ್ರಿಪುರ: ಆಘಾತಕಾರಿ ಘಟನೆಯೊಂದರಲ್ಲಿ ಹಣದ ವಿವಾದದ ಹಿನ್ನೆಲೆಯಲ್ಲಿ ತ್ರಿಪುರದ ಖೋವೈ ಜಿಲ್ಲೆಯ ರತನ್‌ಪುರದಲ್ಲಿ 24 ವರ್ಷದ ಯುವಕನೊಬ್ಬ ತನ್ನ 55 ವರ್ಷದ ತಾಯಿಯ ತಲೆಯನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಆಕೆಯನ್ನು ಬಂಧಿಸಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಹರಿಚರಣ್ ಝರಾ ತನ್ನ ತಾಯಿ ಪರ್ಬತಿ ಝರಾ ಅವರ ಬಳಿ ಹಣ ಕೇಳಿದ್ದರು. ಅದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಯಿತು. ಅದೇ ಜಗಳದಿಂದಾಗಿ ಆತ ತಾಯಿಯ ಶಿರಚ್ಛೇದ ಮಾಡಿದ್ದಾನೆ ಎಂದಿದ್ದಾರೆ.
ಇದನ್ನೂ ಓದಿ: ಹೆತ್ತ ತಾಯಿಯನ್ನೇ ಕೊಂದು ನೇಣು ಹಾಕಿದ ಮಕ್ಕಳು; ಆ ಒಂದು ತಪ್ಪಿನಿಂದ ಕೊಲೆ ಬಯಲು
ಮಂಗಳವಾರ ತಡರಾತ್ರಿ ಹರಿಚರಣ್ ಪರ್ಬತಿಯ ತಲೆಯ ಮೇಲೆ ಚೂಪಾದ ಆಯುಧದಿಂದ ಹೊಡೆದು ಕತ್ತರಿಸಿದ್ದಾನೆ ಎಂದು ಹೇಳಲಾಗಿದೆ. ನಾವು ಹರಿಚರಣ್‌ನನ್ನು ಹತ್ಯೆಗೈದ ಆಯುಧದೊಂದಿಗೆ ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಪಾರ್ಬತಿ ಅವರ ಶವ ಪತ್ತೆಯಾಗಿದೆ. ಫೋರೆನ್ಸಿಕ್ ತಂಡವು ಸ್ಥಳಕ್ಕೆ ಭೇಟಿ ನೀಡಿದ್ದು, ಅಪರಾಧ ನಡೆದ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Fri, 19 July 24